ಪ್ರತಿಭಾ ಕಾರಂಜಿ: ವಿದ್ಯಾಸಿರಿ ಶಾಲೆಗೆ ಸಮಗ್ರ ಪ್ರಶಸ್ತಿ
ಹುಳಿಯಾರು, ಸೆ. ೨೧- ಹೋಬಳಿಯ ಬೋರನಕಣಿವೆಯ ವಿದ್ಯಾಸಿರಿ ನ್ಯಾಷನಲ್ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿಗಳು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನವನ್ನು ತೋರಿ ಅತಿ ಹೆಚ್ಚು ಬಹುಮಾನಗಳನ್ನು ಪಡೆಯುವುದರ ಮೂಲಕ ಸಮಗ್ರ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಕಿರಿಯ ಪ್ರಾಥಮಿಕ ವಿಭಾಗದಲ್ಲಿ ಮಧುಶ್ರೀ ಅಭಿನಯಗೀತೆಯಲ್ಲಿ ಪ್ರಥಮ, ನಾಜಿಯಾಬಾಬು ಧಾರ್ಮಿಕ ಪಠಣದಲ್ಲಿ ಪ್ರಥಮ, ಹಿತೈಷಿಣಿ ಕಥೆ ಹೇಳುವುದಲ್ಲಿ ಪ್ರಥಮ, ಮನೋಜ್ಞ ಕನ್ನಡ ಕಂಠಪಾಠದಲ್ಲಿ ದ್ವಿತೀಯ, ತಿಲಕ್ ಮತ್ತು ಮೋಕ್ಷಿತ್ ಕ್ಲೇ ಮಾಡ್ಲಿಂಗ್‌ನಲ್ಲಿ ದ್ವಿತೀಯ, ದೇವಿಕಾ ಛದ್ಮವೇಷದಲ್ಲಿ ದ್ವಿತೀಯ, ಚೇತನ್ ದೇಶಭಕ್ತಿಗೀತೆಯಲ್ಲಿ ದ್ವಿತೀಯ, ಮೋನಿಷಾ ಧಾರ್ಮಿಕ ಪಠಣದಲ್ಲಿ ತೃತೀಯ, ಮನೋಜ್ಞ ಇಂಗ್ಲೀಷ್ ಕಂಠಪಾಠದಲ್ಲಿ ತೃತೀಯ ಬಹುಮಾನ ಪಡೆದಿದ್ದಾರೆ.
ಹಿರಿಯ ಪ್ರಾಥಮಿಕ ಪಾಠಶಾಲಾ ವಿಭಾಗದಲ್ಲಿ ವರ್ಷಿಣಿ ಇಂಗ್ಲೀಷ್ ಕಂಠಪಾಠದಲ್ಲಿ ಪ್ರಥಮ, ರೇವತಿ ಎಸ್ ಗೌಡ ಕಥೆ ಹೇಳುವುದರಲ್ಲಿ ಪ್ರಥಮ, ಚೇತನ ಆಶುಭಾಷಣ ಸ್ಪರ್ಧೆಯಲ್ಲಿ ಪ್ರಥಮ, ಕಾನಿಷ್ಕ ಚಿತ್ರಕಲೆಯಲ್ಲಿ ಪ್ರಥಮ, ಕುಶಾಲ್ ಎಚ್.ಆರ್. ಧಾರ್ಮಿಕ ಪಠಣದಲ್ಲಿ ಪ್ರಥಮ, ಡಿ.ಟಿ.ಮಾರುತಿ ಮಿಮಿಕ್ರಿಯಲ್ಲಿ ಪ್ರಥಮ, ಮೋಕ್ಷಿತ್ ಕ್ಲೇ ಮಾಡ್ಲಿಂಗ್‌ನಲ್ಲಿ ಪ್ರಥಮ, ಮಹಮದ್ ಸೂಪಿಯಾನ್ ಧಾರ್ಮಿಕ ಪಠಣದಲ್ಲಿ ಪ್ರಥಮ, ಅಂಜನ್‌ಗೌಡ ಪ್ರಬಂಧ ರಚನೆಯಲ್ಲಿ ದ್ವಿತೀಯ, ಗಾನವಿ ರವೀಂದ್ರ ಪದ್ಯ ವಾಷನದಲ್ಲಿ ದ್ವಿತೀಯ, ಹಂಸ ಕನ್ನಡ ಕಂಠಪಾಠದಲ್ಲಿ ತೃತೀಯ, ಪೂರ್ವಿಕ ಹಿಂದಿ ಕಂಠಪಾಠದಲ್ಲಿ ತೃತೀಯ ಬಹುಮಾನ ಪಡೆದಿದ್ದಾರೆ.
ಹಿರಿಯ ಮತ್ತು ಕಿರಿಯ ವಿಭಾಗದಿಂದ ೧೧ ಪ್ರಥಮ ಸ್ಥಾನ, ೭ ದ್ವಿತೀಯ ಸ್ಥಾನ, ೪ ತೃತೀಯ ಸ್ಥಾನ ಒಟ್ಟು ೨೫ ಮಕ್ಕಳು ಭಾಗವಹಿಸಿ ೨೨ ಬಹುಮಾನಗಳನ್ನು ಪಡೆದಿದ್ದಾರೆ. ಶಾಲಾ ಆಡಳಿತ ಮಂಡಳಿ ಹಾಗೂ ಮುಖ್ಯೋಪಾಧ್ಯಾಯರು ಮತ್ತು ಎಲ್ಲ ಶಿಕ್ಷಕ ವೃಂದದವರು ವಿದ್ಯಾರ್ಥಿಗಳ ಈ ಸಾಧನೆಗೆ ಹರ್ಷ ವ್ಯಕ್ತಪಡಿಸಿದ್ದಾರೆ.