250 ಕ್ಕೂ ಹೆಚ್ಚು ರೋಗಿಗಳಿಗೆ ಚಿಕಿತ್ಸೆ : ಡಾ. ಬ್ರಹ್ಮಾನಂದ ಸ್ವಾಮಿ
ಬೀದರ್:ಏ.22: ನೌಬಾದನಲ್ಲಿರುವ ಸ್ವಾಮಿ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆಯಲ್ಲಿ ಭಾನುವಾರ ಉಚಿತ ಆರೋಗ್ಯ ತಪಾಸಣೆ ನಡೆಸಲಾಗಿದೆ. ಬೀದರ ಸುತ್ತಮುತ್ತಲಿನ ಹತ್ತಾರು ಗ್ರಾಮಗಳ 250ಕ್ಕೂ ಹೆಚ್ಚು ರೋಗಿಗಳ ಉಚಿತ ಆರೋಗ್ಯ ತಪಾಸಣೆ ನಡೆಸಿ ಉಚಿತ ಮಾತ್ರೆಗಳನ್ನು ವಿತರಣೆ ಮಾಡಲಾಗಿದೆ ಎಂದು ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಬ್ರಹ್ಮಾನಂದ ಸ್ವಾಮಿ ತಿಳಿಸಿದರು.
ನೌಬಾದನ ಭಾಲ್ಕಿ ರಸ್ತೆಯಲ್ಲಿ ನೂತನವಾಗಿ ನಿರ್ಮಿಸಲಾದ ಸ್ವಾಮಿ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆಯಲ್ಲಿ ಆಯೋಜಿಸಿದ ಉಚಿತ ಆರೋಗ್ಯ ತಪಾಸಣೆ ಹಾಗೂ ಔಷಧಗಳ ವಿತರಣೆ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ನಮ್ಮಲ್ಲಿ ಇಂದು ಉಚಿತವಾಗಿ ಮಧುಮೇಹ, ರಕ್ತದೊತ್ತಡ, ಎಸ್.ಪಿ.ಓ2, ತಾಪಮಾನ ಸೇರಿದಂತೆ ಶರೀರದ ತಪಾಸಣೆ ಮಾಡಿ ರೋಗಕ್ಕೆ ತಕ್ಕಂತೆ ಔಷಧ ವಿತರಣೆ ಮಾಡಲಾಯಿತು. ಇಲ್ಲಿ ಜನರಲ್ ವಾರ್ಡ್, ಡೇ ಕೇರ್, ಹೋಮ್ ಕೇರ್, ಶಸ್ತ್ರಚಿಕಿತ್ಸೆ ಸೇವೆ, ಹರಣಿಯಾ, ಅಪೆಂಡಿಕ್ಸ್, ಮೂಲವ್ಯಾಧಿ, ಅಪೆÇೀಮಾ, ಸೇರಿದಂತೆ ಸ್ತ್ರೀರೋಗ ತಜ್ಞರಿಂದ ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ಚಿಕಿತ್ಸೆ ನೀಡಲಾಗುತ್ತದೆ. ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕೆಂದರು.
ಹೃದಯರೋಗ ತಜ್ಞ ಡಾ. ಮಹೇಶ ರೆಡ್ಡಿ ಮಾತನಾಡಿ ದಿನದ 24 ಗಂಟೆಯೂ ಸ್ವಾಮಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸದುಪಯೋಗ ಮಾಡಿಕೊಳ್ಳಿ ಎಂದರು. ಇದೇ ವೇಳೆ ಆಸ್ಪತ್ರೆಯ ಡಾ. ಸಪ್ನಾ ಬ್ರಹ್ಮಾನಂದ ಸ್ವಾಮಿ ಸೇರಿದಂತೆ ಸಿಬ್ಬಂದಿಗಳು ಉಪಸ್ಥಿತರಿದ್ದರು.