ಶ್ರೀ ಮಹಾವೀರ ಜಯಂತಿ ಆಚರಣೆ
ನವಲಗುಂದ,ಏ.22: ಪಟ್ಟಣದ ಜೈನ ಸಮಾಜದ ವತಿಯಿಂದ ಜೈನ ಬಸದಿಯಲ್ಲಿ ಶ್ರೀ ಮಹಾವೀರ ಜಯಂತಿಯನ್ನು ಆಚರಿಸಲಾಯಿತು. ಪಟ್ಟಣದ ಜೈನ ಬಸದಿ ದೇವಸ್ಥಾನದಿಂದ ಭವ್ಯ ಮೆರವಣಿಗೆ ನಡೆಯಿತು.
ಮೆರವಣಿಗೆಯು ನೀಲಮ್ಮನ ಕೆರೆಯವರೆಗೆ ಸಾಗಿ ಮಹಾವೀರ ತೀರ್ಥಂಕರರ ಪಂಚಾಮೃತ ಅಭಿಷೇಕ ಮುಗಿಸಿ ನಂತರ ಪೂರ್ಣ ಕುಂಭದೊಂದಿಗೆ ಜಿನಮಂದಿರಕ್ಕೆ ಆಗಮಿಸಿತು. ನಂತರ ಜಿನ ಮಂದಿರದಲ್ಲಿ ಪಂಚಾಮೃತ ಅಭಿಷೇಕ ಮಹಾವೀರ ಮೂರ್ತಿಯನ್ನು ತೊಟ್ಟಿಲಲ್ಲಿ ತೂಗಿ ಸಂಭ್ರಮಿಸಿದರು.
ಈ ವೇಳೆ ಜೈನ ಸಮಾಜದ ಅಧ್ಯಕ್ಷ ವಿ ಪಿ ಪಾಟೀಲ್ ಮಾತನಾಡಿ ಬದುಕು, ಬದುಕಲು ಬಿಡು ಎಂಬ ಸಂದೇಶವನ್ನು ವಿಶ್ವಕ್ಕೆ ಸಾರಿದ ಭಗವಾನ್ ಮಹಾವೀರರ ಸಂದೇಶಗಳು ಪ್ರಸ್ತುತ. ಆಹಿಂಸೆಯಿಂದ ಸುಖ, ತ್ಯಾಗದಿಂದ ಶಾಂತಿ ಈ ಸಂದೇಶವು ಎಂದಿಗೂ ಸತ್ಯವಾಗಿರುತ್ತದೆ ಇದನ್ನು ಎಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ತನ್ನ ಧರ್ಮದ ಸಿದ್ಧಾಂತಗಳನ್ನು ಚಾಚೂ ತಪ್ಪದೆ ಪರಿಪಾಲನೆ ಮಾಡುತ್ತ ವಿಶ್ವದ ಅನಂತ ಸತ್ಯಗಳನ್ನು ಪ್ರತಿಪಾದಿಸುತ್ತಿರುವ ಅಹಿಂಸಾ ಧರ್ಮವೇ ಜೈನ ಧರ್ಮ. ದೇಶದೊಂದಿಗೆ ಸಧರ್ಮ ಪರಿಪಾಲಕ ರಾಗಿ ಇಡೀ ವಿಶ್ವಕ್ಕೆ ಶಾಂತಿ, ಅಹಿಂಸೆ, ಸತ್ಯ ಹಾಗೂ ಸನ್ಮಾರ್ಗದ ದಾರಿಯನ್ನು ತೋರಿದ ಮಹಾನ್ ವ್ಯಕ್ತಿ ಎಂದರು.
ಮೆರವಣಿಗೆಯಲ್ಲಿ ಬಾಹುಬಲಿ ಬಸ್ತಿ, ಮನೋಹರ್ ಪಾಟೀಲ್, ಜೈಪಾಲ್ ಉಪಾಧ್ಯಾಯ, ಅನೀಲ್ ಬಿರಾಜ್, ಮಹಾವೀರ ಹನಸಿ, ಸೋಮನಗೌಡ ಹಿರೇಗೌಡ್ರ, ಶಾಂತು ಪಾಟೀಲ್, ಸುರೇಖಾ ಬಸ್ತಿ, ವಿಮಲಾ ವಿಜಯಗೌಡ ಪಾಟೀಲ್, ತ್ರಿಶೂಲಾ ಪಾಟೀಲ್ ಶಿಲ್ಪಾ ಪಾಟೀಲ್, ಸುರೇಖಾ ಪಾಟೀಲ್, ಪ್ರಭಾ ಪಾಟೀಲ್, ವಿದ್ಯಾ ಜಕ್ಕನಗೌಡ್ರ, ಶಂಕ್ರವ್ವ ಹನಸಿ,ಆನಂದ ಜಕ್ಕನಗೌಡ್ರ, ರಾಜು ರಂಗೋಳ್ಳಿ ಸೇರಿದಂತೆ ಜೈನ ಸಮಾಜದ ಬಂಧು-ಬಳಗದವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.