ಜಾತ್ರಾ ಮಹೋತ್ಸವ
ಲಕ್ಷ್ಮೇಶ್ವರ,ಏ.22: ಪಟ್ಟಣದ ಕೂಡಿ ಎಲ್ಲಮ್ಮ ದೇವಸ್ಥಾನದ ಜಾತ್ರಾ ಮಹೋತ್ಸವ ಕಾರ್ಯಕ್ರಮ ದವನದ ಹುಣ್ಣಿಮೆಯ ದಿನವಾದ ನಾಳೆ ಮಂಗಳವಾರ ಜರುಗಲಿದೆ.
ಜಾತ್ರಾ ಮಹೋತ್ಸವದ ಅಂಗವಾಗಿ ಸಕಲ ವಾದ್ಯ ವೈಭವಗಳೊಂದಿಗೆ ಮುಂಜಾನೆ 8 ಗಂಟೆಗೆ ದೇವಿಯ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಪುನಃ ದೇವಸ್ಥಾನಕ್ಕೆ ಆಗಮಿಸಲಿದೆ.
ಸಂಜೆ 5:00 ಗಂಟೆಗೆ ರಥೋತ್ಸವ ಜರುಗಲಿದೆ ಬುಧವಾರ ಸಾಯಂಕಾಲ ಕಡುಬಿನ ಕಾಳಗ ಜರುಗುವುದು ದಿನಾಂಕ 25 ರಿಂದ ಮೂರು ದಿನಗಳ ವರೆಗೆ ಕುಸ್ತಿಗಳು ಜರುಗಲಿವೆ.
ಸದ್ಭಕ್ತರು ಎಲ್ಲಮ್ಮನ ಜಾತ್ರೆಗೆ ಆಗಮಿಸಿ ತಾಯಿಯ ಕೃಪೆಗೆ ಪಾತ್ರರಾಗಬೇಕು ಎಂದು ದೇವಸ್ಥಾನದ ಸದ್ಭಕ್ತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.