ಬೀದರ ಲೋಕಸಭಾ ಕ್ಷೇತ್ರದಿಂದ 20 ನಾಮಪತ್ರಗಳು ಅಂಗೀಕಾರ
ಬೀದರ. ಏ.22: ಲೋಕಸಭಾ ಸಾರ್ವತ್ರಿಕ ಚುನಾವಣೆ- 2024 ರ ನಾಮಪತ್ರಗಳ ಪರಿಶೀಲನೆ ದಿನವಾದ ಶನಿವಾರ ಬೀದರ- 07 ಲೋಕಸಭಾ ಸಾರ್ವತ್ರಿಕ ಚುನಾವಣಾ ಕ್ಷೇತ್ರದಿಂದ ಒಟ್ಟು 20 ನಾಮಪತ್ರಗಳು ಅಂಗೀಕಾರವಾಗಿರುತ್ತವೆ.
ಬೀದರ ಲೋಕಸಭಾ ಸಾರ್ವತ್ರಿಕ ಚುನಾವಣಾ ಕ್ಷೇತ್ರದಿಂದ ಒಟ್ಟು 34 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಶನಿವಾರ ನಾಮಪತ್ರಗಳ ಪರಿಶೀಲನಾ ದಿನವಾಗಿತ್ತು. ಒಟ್ಟು 34 ಅಭ್ಯರ್ಥಿಗಳಲ್ಲಿ 20 ಅಭ್ಯರ್ಥಿಗಳ ನಾಮಪತ್ರಗಳು ಅಂಗೀಕಾರವಾಗಿದ್ದು 14 ನಾಮಪತ್ರಗಳು ತಿರಸ್ಕøತವಾಗಿರುತ್ತದೆ.
ಏಪ್ರಿಲ್. 22 ರಂದು ನಾಮಪತ್ರಗಳನ್ನು ಹಿಂಪಡೆಯಲು ಕೊನೆಯ ದಿನವಾಗಿದೆ. 07- ಬೀದರ ಲೋಕಸಭಾ ಸಾರ್ವತ್ರಿಕ ಚುನಾವಣಾ ಕ್ಷೇತ್ರದಿಂದ ಒಟ್ಟು 20 ಅಭ್ಯರ್ಥಿಗಳ ನಾಮಪತ್ರಗಳು ಅಂಗೀಕೃತವಾಗಿರುತ್ತವೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳಾದ ಗೋವಿಂದರೆಡ್ಡಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.