ಅನೇಹಾ ಹತೆಗೆ ನ್ಯಾಯ ಒದಗಿಸಲು ಆಗ್ರಹ
ಕಾಳಗಿ.ಎ.22: ಹುಬ್ಬಳ್ಳಿ ಬಿವಿಬಿ ಕಾಲೇಜ್ ನಲ್ಲಿ ನಡೆದ ವಿದ್ಯಾರ್ಥಿನಿಯಾದ ನೇಹಾ ಹತ್ಯೆಯನ್ನು ಬರ್ಬರವಾಗಿ ಹಾಡು ಹಗಲೇ ಹತ್ಯೆ ಮಾಡಿದ್ದು. ನೀಡಿ ನಾಗರಿಕ ಸಮಾಜ ಖಂಡಿಸುತ್ತದೆ.
ಈ ಕೃತ್ಯವನ್ನು ಎಸಗಿದ ಫಯಾಜ್ ಎಂಬ ವ್ಯಕ್ತಿಗೆ ತಕ್ಕ ಶಿಕ್ಷೆಯಾಗಬೇಕು ಮತ್ತು ಮುಂದೆ ಇಂತಹ ಯಾವುದೇ ಘಟನೆ ನಡೆಯದಂತೆ ಮಹಿಳೆಯರಿಗೆ ಯುವತಿಯರಿಗೆ ಮತ್ತು ನಾಗರಿಕರಿಗೆ ರಕ್ಷಣೆ ಸಿಗಬೇಕು. ಲವ್ ಜಿಹಾದ್ ಮುಖಾಂತರ ಈ ರೀತಿ ಕೊಲೆ ಮಾಡಿದ್ದು, ಇದರ ಹಿಂದೆ ಲವ್ ಜಿಹಾದನ ಸಂಖ್ಯೆ ಕಂಡು ಬರುತ್ತಿದ್ದು. ಪೂರ್ಣ ತನಿಖೆಯನ್ನು ಸೂಕ್ತವಾಗಿ ಮಾಡಿ ಸೂಕ್ತ ನ್ಯಾಯ ಒದಗಿಸಬೇಕು. ಈ ಪ್ರಕರಣ ಸಂಬಂಧಿಸಿದಂತೆ ಗ್ರಹ ಸಚಿವರು ಮುಖ್ಯಮಂತ್ರಿಗಳು ಸತ್ಯಾಸತ್ಯತೆಯನ್ನು ತಿಳಿಯಲಾರದೆ ಪೂರ್ವಗ್ರಹ ಪೀಡಿತರಾಗಿ ಕೊಡುತ್ತಿರುವ ಹೇಳಿಕೆಯನ್ನು ನೋಡಿದರೆ ತನಿಖೆ ದಾರಿತಪ್ಪುವ ಸಂಶಯ ವ್ಯಕ್ತವಾಗಿದೆ. ನಾಗರೀಕ ಸಮಾಜದ ಪರವಾಗಿ ನಾವು ಯಾವುದೇ ರೀತಿಯ ತನಿಖೆ ದಾರಿ ತಪ್ಪದೆ ಸೂಕ್ತ ತನಿಖೆಯಾಗಬೇಕು. ಮತ್ತು ನೀವು ಈ ಸಂಬಂಧಪಟ್ಟದವರಿಗೆ ಸೂಚನೆ ಕೊಡಬೇಕು. ನಾಗರೀಕ ಹಿತರಕ್ಷಣಾ ವೇದಿಕೆ ಕಡೆಯಿಂದ ತಹಸೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಜಗದೀಶ ಪಾಟೀಲ, ವಿಜಯಕುಮಾರ ಚೆಂಗಟಾ, ಪ್ರಶಾಂತ ಕದಂ, ರಾಜೇಂದ್ರಬಾಬು ಹಿರಾಪುರ, ಶೇಖರ್ ಮಾನಶೆಟ್ಟಿ, ಮಲ್ಲಿಕಾರ್ಜುನ ಮಳಗಿ, ನಾಗರಾಜ ಚಿಕ್ಕಮಠ, ಕೃಷ್ಣ ಸಿಂಗಶೆಟ್ಟಿ ಸೇರಿದಂತೆ ಅನೇಕರಿದ್ದರು.