ದೇಶ ಹಾಗೂ ಎಲ್ಲಾ ವರ್ಗದ ಅಭಿವೃದ್ದಿಗಾಗಿ ಮೋದಿಯೇ ಗ್ಯಾರಂಟಿ: ಮನೋಜ್ ಪಟೇಲ್
ಸಂಜೆವಾಣಿ ವಾರ್ತೆ
ಚಾಮರಾಜನಗರ, ಏ. 22- ದೇಶ ಹಾಗೂ ಎಲ್ಲಾ ವರ್ಗದ ಅಭಿವೃದ್ದಿಗಾಗಿ ಮೋದಿಯೇ ಗ್ಯಾರಂಟಿ ಎಂದು ನಗರಸಭಾ ಸದಸ್ಯ ಹಾಗೂ ಎಪಿಎಂಸಿ ಮಾಜಿ ಅಧ್ಯಕ್ಷ ಮನೋಜ್ ಪಟೇಲ್ ಬಣ್ಣಿಸಿದರು.
ನಗರದ ಕರಿನಂಜನಪುರ 10 ವಾರ್ಡಿನಲ್ಲಿ ಬಿಜೆಪಿ ಅಭ್ಯರ್ಥಿ ಬಾಲರಾಜು ಪರವಾಗಿ ನಗರಸಭಾ ಸದಸ್ಯ ಮನೋಜ್ ಪಟೇಲ್ ನೇತೃತ್ವದಲ್ಲಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ದೇಶದ ಅಭಿವೃದ್ದಿಗಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡುವ ಈ ಮಹತ್ತರ ಚುನಾವಣೆಯಲ್ಲಿ ತಾವೆಲ್ಲರು ತಪ್ಪದೇ ಬಿಜೆಪಿಗೆ ಮತ ನೀಡಬೇಕು ಎಂದು ಮನವಿ ಮಾಡಿದರು.
ಮಹಿಳೆಯ ಸ್ವಾಭಿಮಾನದ ಬದುಕಿಗೆ ಕಾರ್ಯ ಯೋಜನೆ ರೂಪಿಸಿ, ರೈತರ ಅಬಿವೃದ್ದಿಗೆ ಹೆಚ್ಚಿನ ಅದ್ಯತೆ ನೀಡಿದ್ದ ಕೇಂದ್ರ ಸರ್ಕಾರ, ಪ್ರತಿ ಮನೆ ಮನೆಗೂ ನಲ್ಲಿ ಸಂಪರ್ಕ ನೀಡಿ, ಉಚಿತ ಉಜ್ವಲ ಗ್ಯಾಸ್ ಯೋಜನೆ, ಹೆಣ್ಣು ಮಕ್ಕಳ ರಕ್ಷಣೆ ಮತ್ತು ಶಿಕ್ಷಣಕ್ಕೆ ಒತ್ತು, ಉಚಿತವಾಗಿ 5 ಕೆಜಿ ಅಕ್ಕಿ, ಉಚಿತ ವಿದ್ಯುತ್ ಸೇರಿದಂತೆ ಅನೇಕ ಯೋಜನೆಗಳನ್ನು ಜಾರಿ ಮಾಡುವ ಮೂಲಕ ಬಲಿಷ್ಟ ಭಾರತವನ್ನು ನಿರ್ಮಾಣ ಮಾಡಿದ್ದಾರೆ. ಬಿಜೆಪಿ ಎಂದರೆ ದೇಶದ ಅಭಿವೃದ್ದಿ ಹಾಗೂ ಭದ್ರತೆ ಪಕ್ಷವಾಗಿದೆ. ನೆಮ್ಮದಿ ಜೀವನಕ್ಕಾಗಿ ಬಿಜೆಪಿಯನ್ನು ಬೆಂಬಲಿಸಿ ಎಂದು ಮನೋಜ್ ಪಟೇಲ್ ಮನವಿ ಮಾಡಿದರು.
ನಗರಸಭೆಯ 10 ವಾರ್ಡಿನ ವ್ಯಾಪ್ತಿಯ ಸೇರಿದ ಎಲ್ಲಾ ಮನೆ ಮನೆಗಳಿಗೆ ಪ್ರಧಾನಿ ಮೋದಿ ಅವರ 10 ವರ್ಷದ ಸಾಧನೆ ಕುರಿತ ಕರಪತ್ರ ಹಾಗೂ ಬಿಜೆಪಿ ಅಭ್ಯರ್ಥಿ ಎಸ್.ಬಾಲರಾಜು ಭಾವಚಿತ್ರ ಹೊಂದಿರುವ ಕರಪತ್ರವನ್ನು ನೀಡುವ ಮೂಲಕ ಬಿಜೆಪಿಗೆ ಮತ ನೀಡುವಂತೆ ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸೂರ್ಯ ಬಾಲರಾಜ್, ಜಿಲ್ಲಾ ಮಾಧ್ಯಮ ಪ್ರಮುಖ್ ವೀರೇಂದ್ರ, ನಗರ ಮಂಡಲದ ಪ್ರಧಾನ ಕಾರ್ಯದರ್ಶಿ ಕೂಸಣ್ಣ, ಉಪಾಧ್ಯಕ್ಷ ಕಿರಣ್ ನಾಯಕ್, ಕಾರ್ಯದರ್ಶಿ ಮಹೇಶ್, ಶುಭೋಧಯ ಸಿದ್ದರಾಜು, ಮಹಾ ಶಕ್ತಿ ಕೇಂದ್ರ ಅಧ್ಯಕ್ಷರಾದ ಸುದರ್ಶನ್ ಆಳ್ವಾ, ಬಲವೀರಸಿಂಗ್, ಸುಮಂತ್, ಮಹದೇವಸ್ವಾಮಿ, ವಿರುಪಾಕ್ಷ ನಾಗಮಲ್ಲಪ್ಪ, ಗ್ರಾಮದ ಮುಖಂಡರು ಮತ್ತು ಯಜಮಾನರು ಇದ್ದರು.