ಮಹಿಳಾ ದೌರ್ಜನ್ಯ ಆಘಾತಕಾರಿ: ಕವಿತಾ ಕಲ್ಯಾಣಪ್ಪಗೋಳನೇಹಾ ಹಿರೇಮಠಳಿಗೆ ಕಸಾಪದಿಂದ ನುಡಿನಮನ
ಸಂಜೆವಾಣಿ ವಾರ್ತೆ,
ವಿಜಯಪುರ,ಏ.22: ಮಾನವೀಯ ಮೌಲ್ಯಗಳನ್ನು ಅರಿಯದ ಅವಿವೇಕಿಗಳಿಂದ ನೇಹಾ ಹಿರೇಮಠ ಮೇಲೆ ನಡೆದ ದುಷ್ಕ್ರತ್ಯ ಆಘಾತಕಾರಿ. ಇದು ಮಾನವ ಜನಾಂಗಕ್ಕೆ ಕಳಂಕ ಎಂದು ಸಾಹಿತಿ ಕವಿತಾ ಕಲ್ಯಾಣಪ್ಪಗೋಳ ಅಭಿಪ್ರಾಯ ವ್ಯಕ್ತಪಡಿಸಿದರು
ಭಾನುವಾರ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣಲ್ಲಿ ಜಿಲ್ಲಾ, ತಾಲೂಕ ಹಾಗೂ ನಗರ ಘಟಕ ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ನೇಹಾ ಹಿರೇಮಠ ನುಡಿನಮನ (ಶ್ರದ್ಧಾಂಜಲಿ) ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ, ಇಂತಹ ಘೋರ ಅಪರಾಧ ಎಸಗಿದ ಫಯಾಜ್ ನನ್ನು ಗಲ್ಲಿಗೇರಿಸಬೇಕೆಂದು ಆಗ್ರಹಿಸಿದರು.
ಕವಿಯಿತ್ರಿ ಶಾಂತಲಾ ಪಾಟೀಲ ಕವನ ವಾಚಿÀಸುತ್ತಾ ಭೀತಿ ಹುಟ್ಟಿಸುವದು ಪ್ರೀತಿಯೇ ಅಲ್ಲ. ಇಂತಹ ವಿಕೃತ ಮನಸ್ಸಿನ ವ್ಯಕ್ತಿಯನ್ನು ತ್ವರಿತ ನ್ಯಾಯಾಲಯದ ಮೂಲಕ ಶೀಘ್ರ ಶಿಕ್ಷೆ ವಿಧಿಸಬೇಕೆಂದರು.
ಸಾಹಿತಿ ಶಿಲ್ಪಾ ಭಸ್ಮೆ ಮಾತನಾಡಿ, ಇಂತಹ ಕೃತ್ಯಗಳು ಪಾಲಕರಲ್ಲಿ ಆತಂಕ ಉಂಟುಮಾಡಿದೆ. ಪಾಲಕರು ತಮ್ಮ ಮಕ್ಕಳ ಚಟುವಟಿಕೆಗಳ ಮೇಲೆ ಗಮನ ಹರಿಸಬೇಕು. ಎಂದರು.
ಕಸಾಪ ನಗರ ಘಟಕ ಅಧ್ಯಕ್ಷೆ ಅನ್ನಪೂರ್ಣ ಬೆಳ್ಳೆನವರ ಮಾತನಾಡಿ, ಇಂತಹ ಅಮಾನುಷ ಮನೋಭಾವನೆಯಿಂದ ಹೊರಬರಲು ವಿಪಸನ ಧ್ಯಾನ ಶಿಬಿರಗಳನ್ನು ಹಮ್ಮಿಕೊಂಡು, ಪಠ್ಯದಲ್ಲಿ ನೀತಿ ಕಥೆಗೆಳನ್ನು ಒಳಗೊಂಡ ನೈತಿಕ ಶಿಕ್ಷಣವನ್ನು ಬೋಧಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷÀ ಹಾಸಿಂಪೀರ ವಾಲೀಕಾರ, ಡಾ. ಮಾಧವ ಗುಡಿ, ಪೆÇ್ರ. ಸುಭಾಸಚಂದ್ರ ಕನ್ನೂರ, ಡಾ ಆನಂದ ಕುಲಕರ್ಣಿ, ಬಸಯ್ಯಾ ಹಿರೇಮಠ, ಎಸ್.ಎಲ್ ಇಂಗಳೇಶ್ವರ, ಮಹೇಶ ಕ್ಯಾತಣ್ಣವರ, ಶಿವಲೀಲಾ ಮುರಾಳ, ಶಿಲ್ಪಾ ಹಂಜಿ, ಶಾಹೀನ್ ಕೊರಬು, ಪ್ರಕಾಶ ಇನಾಮದಾರ, ಶೋಭಾ ಬಡಿಗೇರ, ಲತಾ ಗುಂಡಿ, ಶಿವಾಜಿ ಮೋರೆ, ಅಣ್ಣುಗೌಡ ಬಿರಾದಾರ, ಸಿದ್ದು ಸಾವಳಸಂಗ, ಸಿದ್ರಾಮಪ್ಪ ಜಂಗಮಶೆಟ್ಟಿ, ಗಂಗಮ್ಮ ರೆಡ್ಡಿ, ಎ.ಎಲ್ ಹಳ್ಳೂರ, ಕು. ಶ್ವೇತಾ ಮುಲ್ಕಿ ಪಾಟೀಲ, ರಾಣಿ ಕದಂ, ಸಚಿನ ಸಿದ್ನಾಳ ಮುಂತಾದವರು ಉಪಸ್ಥಿತರಿದ್ದರು.