ಹ್ಯಾಂಡ್‍ಬಾಲ್ ಕ್ರೀಡೆಯ ಬೇಸಿಗೆ ತರಬೇತಿ ಶಿಬಿರ ಮುಕ್ತಾಯ
ಕಲಬುರಗಿ,ಏ.21-ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಜಿಲ್ಲಾ ಹ್ಯಾಂಡ್ ಬಾಲ್ ಅಸೋಸಿಯೇಷನ್ ವತಿಯಿಂದ ಏ.1 ರಿಂದ 21 ರವರೆಗೆ ಒಟ್ಟು 21 ದಿನಗಳವರೆಗೂ ನಡೆದ ಹ್ಯಾಂಡ್ ಬಾಲ್ ಕ್ರೀಡೆಯ ಬೇಸಿಗೆ ತರಬೇತಿ ಶಿಬಿರವು ಇಂದು ಮುಕ್ತಾಯಗೊಂಡಿತು.
ಶಿಬಿರದ ಸಮರೂಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ನಾಗರಾಜ್ ಮಾಳ್ಗೆ, ಸಂಜಯ್ ಬಾಣದ್, ಅಶೋಕ್ ನಿಂಬೂರ್, ಪ್ರವೀಣ್ ಪುಣೆ ಭಾಗವಹಿಸಿ ಶಿಬಿರದಲ್ಲಿ ಭಾಗವಹಿಸಿದ 32 ಸಿಬಿರಾರ್ಥಿಗಳಿಗೆ ಪ್ರಶಸ್ತಿ ಪತ್ರವನ್ನು ನೀಡಿ ಗೌರವಿಸಿದರು. ಅದೇ ರೀತಿ ಶಿಬಿರದ ಸಹಾಯಕ ತರಬೇತಿದಾರರಾದ ದೀಪಕ್À ಜೋಶಿ, ಮಯೂರ್ ಹರ್ಷವರ್ಧನ್ ತಿಲಕ್ ರವರೂ ಉಪಸ್ಥಿತರಿದ್ದರು ಎಂದು ಶಿಬಿರದ ಆಯೋಜಕರಾದ ಮತ್ತು ಜಿಲ್ಲಾ ಹ್ಯಾಂಡ್ ಬಾಲ್ ಅಸೋಸಿಯೇಷನ್ ಕಾರ್ಯದರ್ಶಿಗಳಾದ ದತ್ತಾತ್ರೇ ಜೇವರ್ಗಿ ತಿಳಿಸಿದರು.