ವಿದ್ಯುತ್ ತಂತಿ ಬಿದ್ದು ಯುವಕ ಸಾವು
ಕಲಬುರಗಿ:ಏ.21:ಶನಿವಾರ ಸುರಿದ ಅವಕಾಳಿ ಮಳೆಗೆ ವಿದ್ಯುತ್ ತಂತಿ ಕಡಿದು ಬಿದ್ದು ಯುವಕನೋರ್ವ ಮೃತಪಟ್ಟಿರುವ ಘಟನೆ ತಡವಾಗಿ ವರದಿಯಾಗಿದೆ. ಮೃತ ಯುವಕ ರವಿ ಕುಂಬಾರ( ೨೪). ಮೂಲತಃ ಕಲಬುರಗಿ ಜಿಲ್ಲೆಯ ನಂದೂರ ಗ್ರಾಮದವನಾಗಿದ್ದು ತಾಯಿಯ ತವರು ಮನೆ ಖಜೂರಿಯಲ್ಲಿ ವಾಸವಾಗಿದ್ದರು. ಉಪಜೀವನಕ್ಕಾಗಿ ಬಂಗರಗಾ ಕ್ರಾಸ್ ಹತ್ತಿರ ಸಣ್ಣದೊಂದು ಹೋಟೆಲ್ ಇಟ್ಟುಕೊಂಡಿದ್ದರು. ಶನಿವಾರ ಹೋಟೆಲ್ನಲ್ಲಿ ಕೆಲಸದಲ್ಲಿ ತೊಡಗಿದ್ದಾಗ ಏಕಾಏಕಿ ಬಂದ ಗಾಳಿ, ಮಳೆಗೆ ವಿದ್ಯುತ್ ತಂತಿ ಕಡಿದು ಮೈಮೇಲೆ ಬಿದ್ದು ಸಾವನ್ನಪ್ಪಿದ್ದಾನೆ. ಮೃತನ ಅಂತ್ಯಕ್ರಿಯೆ ಸ್ವಗ್ರಾಮ ನಂದೂರ ಗ್ರಾಮದಲ್ಲಿ ರವಿವಾರ ಜರುಗಿತು. ಈ ಕುರಿತು ಆಳಂದ ಪೊಲೀಸ್ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ.