ಆಂತರಿಕದೇಹದಾಢ್ರ್ಯ ಸ್ಪರ್ಧೆ
ಕಲಬುರಗಿ:ಏ.21:ಕರುಣೇಶ್ವರ ನಗರದ ಭಾರತ್ ಪೆಟ್ರೋಲಿಯಂ ಸಮೀಪದ ಸೋಲ್ಜರ್ ಫಿಟ್‍ನೆಸ್ ಸೆಂಟರ್‍ನಲ್ಲಿ ಆಂತರಿಕದೇಹದಾಢ್ರ್ಯ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿನಡೆದಡೆಡ್‍ಲಿಫ್ಟ್ ವಿಭಾಗದ ಸ್ಪರ್ಧೆಯಲ್ಲಿ 170 ಕಿ.ಗ್ರಾಂತೂಕಎತ್ತುವ ಮೂಲಕ ವಿಶಾಲ್ ಪ್ರಥಮ, 160 ಕಿ.ಗ್ರಾಂತೂಕಎತ್ತಿದ ವಿಶ್ವಾಸ್ ದ್ವಿತೀಯ ಮತ್ತು 150 ಕಿ.ಗ್ರಾಂ.ತೂಕಎತ್ತುವ ಮೂಲಕ ಅಮಿತ್‍ತೃತೀಯ ಬಹುಮಾನ ಪಡೆದರು.
ಜೊತೆಗೆ, ಬೆಂಚ್‍ಪ್ರೆಸ್ ವಿಭಾಗದ ಸ್ಪರ್ಧೆಯಲ್ಲಿ ಮಹೇಂದ್ರ ಪ್ರಥಮ, ಶರಣು ದ್ವಿತೀಯ ಮತ್ತುಅಮಿತ್‍ತೃತೀಯ ಸ್ಥಾನ ಪಡೆಯುವಲ್ಲಿ ಯಶಸ್ವಿಯಾದರು.
ಸ್ಪರ್ಧೆಯ ಬಳಿಕ ನಡೆದ ವೇದಿಕೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಹಿರಿಯಉದ್ಯಮಿ ಮಲ್ಲಿಕಾರ್ಜುನಅವರು ವಿಜೇತರಿಗೆ ಬಹುಮಾನಗಳನ್ನು ವಿತರಿಸಿದರು.
ನಂತರ ಮಾತನಾಡಿದಅವರು, ಸಕಾರಾತ್ಮಕಜೀವನಶೈಲಿಯನ್ನು ಅಳವಡಿಸಿಕೊಂಡಾಗ ಸದೃಢಆರೋಗ್ಯ ನಮ್ಮದಾಗಿಸಿಕೊಳ್ಳಲು ಸಾಧ್ಯವಿದೆ.ಈ ನಿಟ್ಟಿನಲ್ಲಿ ನಿತ್ಯ ವ್ಯಾಯಾಮ, ಕಾಲ್ನಡಿಗೆಯಂತಹ ಬುನಾದಿ ಚಟುವಟಿಕೆಗಳನ್ನಾದರೂ ಮಾಡುವಂತೆ ದಿನಚರಿ ರೂಢಿಸಿಕೊಳ್ಳಬೇಕಾದ ಅಗತ್ಯವಿದೆಎಂದು ಕಿವಿಮಾತು ಹೇಳಿದರು.
ಸೋಲ್ಜರ್‍ಜಿಮ್ ಮಾಲೀಕರಾದ ಶರಣುಎಸ್.ಎಚ್.ಡಾ.ಶ್ರೀಮಂತ ಸೇರಿದಂತೆಇನ್ನಿತರರು ಉಪಸ್ಥಿತರಿದ್ದರು.