ವಾಹನ ಡಿಕ್ಕಿ: ವ್ಯಕ್ತಿ ಸಾವು
ಕಲಬುರಗಿ,ಏ.21-ಯಾವುದೋ ವಾಹನ ಡಿಕ್ಕಿ ಹೊಡೆದು 30 ರಿಂದ 35 ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿಯೊಬ್ಬ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಸೇಡಂ ತಾಲ್ಲೂಕಿನ ಮಳಖೇಡದ ರಾಜಪ್ಪ ಮಂಗಾ ಎಂಬುವವರ ಹೊಲದ ಹತ್ತಿರ ನಡೆದಿದೆ.
ನಡೆದುಕೊಂಡು ಹೋಗುವಾಗ ಯಾವುದೋ ಅಪರಿಚಿತ ವಾಹನ ಡಿಕ್ಕಿ ಹೊಡೆದು ಈತ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.
ಮೃತ ವ್ಯಕ್ತಿ 5 ಅಡಿ 5 ಇಂಚು ಎತ್ತರವಿದ್ದು, ತೆಳ್ಳನೆಯ ಮೈಕಟ್ಟು, ಸಾದಾ ಕಪ್ಪು ಮೈಬಣ್ಣ ಹೊಂದಿದ್ದಾನೆ. ಕಪ್ಪು ಬಣ್ಣದ ಉಲನ ಜಾಕೀಟ್, ಕಂದು ಬಣ್ಣದ ಟೀಶರ್ಟ್, ನೀಲಿ ಬಣ್ಣದ ನೈಟ್ ಚಡ್ಡಿ ಧರಿಸಿದ್ದಾನೆ. ಈ ಸಂಬಂಧ ಮಳಖೇಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತನ ಬಗ್ಗೆ ಯಾರಿಗಾದರೂ ಮಾಹಿತಿ ಇದ್ದಲ್ಲಿ ಮಳಖೇಡ ಪೊಲೀಸ್ ಠಾಣೆಯನ್ನು ಸಂಪರ್ಕಿಸಲು ಕೋರಲಾಗಿದೆ.