ಏ.23 ರಂದು ಹಾಸ್ಯ ಸಂಜೆ
ಕಲಬುರಗಿ,ಏ.21 : ನಗರದ ಹೈಕೋರ್ಟ್ ರಸ್ತೆಯಲ್ಲಿರುವ ಶ್ರೀ ಶರಣರಾಜ್ ಸಿಟಿಯ ನವಲದಿ ಶ್ರೀ ಹನುಮಾನ್ ಜಾತ್ರೋತ್ಸವ ಪ್ರಯುಕ್ತ ಇದೇ 23ರಂದು ಸಂಜೆ 6.30ಕ್ಕೆ ಹಾಸ್ಯ ಸಂಜೆ ಕಾರ್ಯಕ್ರಮ ನಡೆಯಲಿದೆ ಎಂದು ಶ್ರೀ ನವಲದಿ ಹನುಮಾನ್ ಮಂದಿರದ ಅಧ್ಯಕ್ಷ ಕಾಶಿನಾಥ ಪಲ್ಲೇರಿ ತಿಳಿಸಿದ್ದಾರೆ.
ಅಂದು ಬೆಳಗ್ಗೆ ತೊಟ್ಟಿಲು ಉತ್ಸವ, ಹೋಮ ಹವನ ವಿಶೇಷ ಪೂಜೆ, ಮಧ್ಯಾಹ್ನ 12 ರಿಂದ 5 ಗಂಟೆವರೆಗೆ ಮಹಾಪ್ರಸಾದ ನೆರವೇರಲಿದ್ದು, ನಂತರ ಸಂಜೆ 6:30ಕ್ಕೆ ಹಾಸ್ಯ ಕಲಾವಿದೆ ಇಂದುಮತಿ ಸಾಲಿಮಠ ಅವರಿಂದ ವಿಶೇಷ ಪ್ರವಚನ ಹಾಗೂ ಹಾಸ್ಯಸಂಜೆ ಕಾರ್ಯಕ್ರಮ ಜರುಗಲಿದೆ ಎಂದಿದ್ದಾರೆ.