ನಗರದ ರಾಜ ಕಾಲುವೆಯ ಪರಿಸ್ಥಿತಿ ಇದು
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಏ.21: ರಾಜ ಕಾಲುವೆಗಳು ಹೂಳಿಲ್ಲದೇ ಇದ್ದರೆ ಮಳೆ ಬಂದರೆ ಅದರ ನೀರು ಸರಾಗವಾಗಿ ಕಾಲುವೆಯಲ್ಲಿ ಹರಿದು ಹೋಗಲಿದೆ‌. ಇಲ್ಲಿದೆ ನೋಡಿ ನಗರದ ರಾಣಿತೋಟದ ಸ್ವಾಗತ ಕಮಾನ್ ಬಳಿಯ ರಾಜ ಕಾಲುವೆ ಕಸದ ರಾಶಿಯಿಂದ ತುಂಬಿಕೊಂಡಿದೆ.
ಹೀಗಿದ್ದರೆ. ಮಳೆ ಬಂದರೆ ಕಾಲುವೆಯಲ್ಲಿ ನೀರು ಹರಿಯದೆ. ಕಾಲುವೆಯ ಅಕ್ಕ ಮಕ್ಕದ ಮನೆಗಳಿಗೆ   ನುಗ್ಗಲಿದೆ. ಕೂಡಲೇ ಪಾಲಿಕೆಯ ಅಧಿಕಾರಿಗಳು ಕಾಲುವೆಯಲ್ಲಿನ ಈ ಹೂಳು ತೆಗೆಯುವುದು ಅಗತ್ಯವಾಗಿದೆ.