ಗಡಿ ಕನ್ನಡೋತ್ಸವ ನಾಳೆ
ಬೀದರ್:ಏ.21: ಮಹಾದೇವ ಜಾತ್ರಾ ಮಹೋತ್ಸವ ನಿಮಿತ್ತ ಕರ್ನಾಟಕ ರಕ್ಷಣಾ ವೇದಿಕೆಯ ತಾಲ್ಲೂಕು ಘಟಕದ ವತಿಯಿಂದ ಕಮಲನಗರ ತಾಲ್ಲೂಕಿನ ಮುಧೋಳ(ಬಿ) ಗ್ರಾಮದ ಹನುಮಾನ ಮಂದಿರ ಹತ್ತಿರದ ಬಯಲು ರಂಗ ಮಂದಿರದಲ್ಲಿ ಏ. 22 ರಂದು ಗಡಿ ಕನ್ನಡೋತ್ಸವ ಹಾಗೂ ಸಾಂಸ್ಕøತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಸಂಜೆ 7ಕ್ಕೆ ನಡೆಯುವ ಕಾರ್ಯಕ್ರಮವನ್ನು ಏಕತಾ ಫೌಂಡೇಷನ್ ಅಧ್ಯಕ್ಷ ರವೀಂದ್ರ ಸ್ವಾಮಿ ಉದ್ಘಾಟಿಸುವರು. ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಸೋಮನಾಥ ಮುಧೋಳ ಅಧ್ಯಕ್ಷತೆ ವಹಿಸುವರು. ಕಮಲನಗರ ತಾಲ್ಲೂಕು ಘಟಕದ ಅಧ್ಯಕ್ಷ ಸುಭಾಷ್ ಗಾಯಕವಾಡ್ ನೇತೃತ್ವ ವಹಿಸುವರು.
ವೇದಿಕೆಯ ಜಿಲ್ಲಾ ಘಟಕದ ಗೌರವಾಧ್ಯಕ್ಷ ಖಾದರ್ ಪಾಶಾ ಕನ್ನಡ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವರು. ಜಿಲ್ಲಾ ಘಟಕದ ಮತ್ತೊಬ್ಬರು ಗೌರವಾಧ್ಯಕ್ಷ ಗೋಪಾಲ್ ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡುವರು.
ವೇದಿಕೆಯ ತಾಲ್ಲೂಕು ಘಟಕಗಳ ಅಧ್ಯಕ್ಷರಾದ ಅನಿಲ್ ಹೇಡೆ, ಗಣೇಶ ಪಾಟೀಲ, ಸಚಿನ್ ತಿಪ್ಪಶೆಟ್ಟಿ, ಸಚಿನ್ ಚಟಗೊಂಡ, ವೀರಶೆಟ್ಟಿ ಗೌಸಪುರ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಕಲಾವಿದ ನಾಗರಾಜ ಜೋಗಿ ಹಾಗೂ ತಂಡದವರು ಸಂಗೀತ ರಸಮಂಜರಿ ನಡೆಸಿಕೊಡುವರು.
‘ಮನೆಯ ಮಾನ ಅಣ್ಣನ ಪ್ರಾಣ’ ಸಾಮಾಜಿಕ ನಾಟಕದಲ್ಲಿ ಪಾತ್ರ ನಿರ್ವಹಿಸಿದ ಗ್ರಾಮದ ಯುವ ಕಲಾವಿದರು ಹಾಗೂ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಗುವುದು. ಮಹೇಶ ಕಾಪಸೆ ಸ್ವಾಗತ, ನಾಗನಾಥ ಶಂಕು ನಿರೂಪಣೆ ಹಾಗೂ ಪರಮೇಶ್ವರ ಬಾವಗೆ ವಂದನಾರ್ಪಣೆ ಮಾಡುವರು ಎಂದು ಸೋಮನಾಥ ಮುಧೋಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.