ಶಿವಾನಂದ ಪಾಟೀಲರಿಂದ ಜನರಿಗೆ ದಾರಿತಪ್ಪಿಸುವ ಕೆಲಸ: ಮಾಜಿ ಸಚಿವ ಎಸ್.ಕೆ ಬೆಳ್ಳುಬ್ಬಿ
ಕೊಲ್ಹಾರ:ಏ.21: ಕೂಡಗಿ ಎನ್.ಟಿ.ಪಿ.ಸಿ ಬಗ್ಗೆ ಸಚಿವ ಶಿವಾನಂದ ಪಾಟೀಲರು ಜನರಿಗೆ ದಾರಿತಪ್ಪಿಸುವ ಹೇಳಿಕೆ ನೀಡುತ್ತಿದ್ದಾರೆ ಎಂದು ಮಾಜಿ ಸಚಿವ ಎಸ್.ಕೆ ಬೆಳ್ಳುಬ್ಬಿ ಆಕ್ರೋಶ ಹೊರಹಾಕಿದರು.
ಪಟ್ಟಣದಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಅವರು ಉತ್ತರ ಕನ್ನಡ ಜಿಲ್ಲೆಯ ತದಡಿಗೆ ಎನ್.ಟಿ.ಪಿ.ಸಿ ಮಂಜೂರಿಗಾಗಿದ್ದ ಸಂದರ್ಭ ಸುಶಿಲಕುಮಾರ ಶಿಂಧೆ ಕೇಂದ್ರ ಸಚಿವರಾಗಿದ್ದರು ತದಡಿಯ ಜನರು ಎನ್.ಟಿ.ಪಿ.ಸಿ ಗೆ ವಿರೋಧ ವ್ಯಕ್ತಪಡಿಸಿದ ಸಂದರ್ಭ ನಮ್ಮ ಜನರ ಮನವೊಲಿಸಿ, ಹೆಚ್ಚಿನ ಪರಿಹಾರ ದೊರಕಿಸಿ ಕೂಡಗಿಗೆ ಎನ್.ಟಿ.ಪಿ.ಸಿ ತಂದದ್ದು ನಾನು ಎಂದು ಹೇಳಿದರು.
ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಎನ್.ಟಿ.ಪಿ.ಸಿ ಬುನಾದಿ ಹಾಕಿದೆ, ದೇಶಾದ್ಯಂತ ವಿದ್ಯುತ್ ಸಂಪರ್ಕ ಜಾಲ ಕಲ್ಪಿಸಿ ಕೂಡಗಿ ದೇಶಕ್ಕೆ ಬೆಳಕು ನೀಡಿದೆ ಜನರಿಗಾಗಿ ಇಂತಹ ಕಾರ್ಯ ಮಾಡಿರುವ ಆತ್ಮತೃಪ್ತಿ, ಹೆಮ್ಮೆ ನನಗಿದೆ ಎಂದು ಅವರು ಹೇಳಿದರು.
ಜನರಿಗೆ ದಾರಿತಪ್ಪಿಸುವ ಹೇಳಿಕೆ ನೀಡುತ್ತಿರುವ ಶಿವಾನಂದ ಪಾಟೀಲರು ಎನ್.ಟಿ.ಪಿ.ಸಿ ಗೆ ನೀಡಿದ ಕೊಡುಗೆಯಾದರು ಏನು ಎಂದು ಪ್ರಶ್ನಿಸಿದರು?.