23 ರಂದು ಶ್ರೀ ಮಾರುತೇಶ್ವರ ಜಯಂತ್ಯೋತ್ಸವ, ರಥೋತ್ಸವ
ತಾಳಿಕೋಟೆ:ಏ.21: ಪಟ್ಟಣದ ಆಶ್ರಯ ನಗರ ಬಡಾವಣೆಯಲ್ಲಿರುವ ಶ್ರೀ ಮಾರುತೇಶ್ವರ ದೇವಸ್ಥಾನದ 15ವರ್ಷದ ಜಯಂತ್ಯೋತ್ಸವ ಹಾಗೂ ರಥೋತ್ಸವವು ಇದೇ ದಿ.23 ಮಂಗಳವಾರರಂದು ವಿಜೃಂಬಣೆಯಿಂದ ಜರುಗಲಿದೆ.
ಶ್ರೀ ಮಾರುತೇಶ್ವರ ಜಯಂತ್ಯೋತ್ಸವ ಅಂಗವಾಗಿ ಬೆಳಿಗ್ಗೆ 6 ಗಂಟೆಗೆ ಮಂದಿರದಲ್ಲಿ ಹೋಮ ಹವನ ಕಾರ್ಯಕ್ರಮಗಳು ಜರುಗಲಿವೆ ಅಲ್ಲದೇ ಗಂಗಸ್ಥಳ, ಪುರವಂತರ ಸೇವೆಯೊಂದಿಗೆ ಸುಮಂಗಲೆಯರ ಕುಂಭಕಳಸ ಫಲ್ಲಕ್ಕಿ ಉತ್ಸವದ ಮೇರವಣಿಗೆಯು ಪಂಚಸೈಯದ ಕೇರೆಗೆ ಹೋಗಿ ಮರಳಿ ಅದೇ ಮಾರ್ಗದ ಮೂಲಕ ದೇವಸ್ಥಾನ ತಲುಪುವದು.
ಮಧ್ಯಾಹ್ನ 3 ಗಂಟೆಗೆ ಧರ್ಮ ಸಭೆ ಜರುಗಲಿದ್ದು ಈ ಕಾರ್ಯಕ್ರಮದ ದಿವ್ಯ ಸಾನಿದ್ಯವನ್ನು ಶ್ರೀ ಖಾಸ್ಗತೇಶ್ವರ ಮಠದ ಬಾಲ ಶಿವಯೋಗಿ ಶ್ರೀ ಸಿದ್ದಲಿಂಗ ದೇವರು ವಹಿಸುವರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೈಲಾಸಪೇಠೆಯ ಶ್ರೀ ಬಸವಪ್ರಭು ದೇವರು ವಹಿಸುವರು. ಸಾನಿದ್ಯವನ್ನು ಆಶ್ರಯ ನಗರದ ವೇ.ಗುರುಶಾಂತಯ್ಯ ಮಹಾಸ್ವಾಮಿಗಳು, ವೇ.ಎಸ್.ಎಂ.ಬೇನಾಳಮಠ, ವೇ.ಸಂತೋಷಬಟ್ ಜೋಶಿ, ವಹಿಸುವರು.
ಮುಖ್ಯ ಅತಿಥಿಗಳಾಗಿ ಹಿರಿಯ ಪತ್ರಕರ್ತರಾದ ಜಿ.ಟಿ.ಘೋರ್ಪಡೆ, ಬಸವರಾಜ ಕಟ್ಟಿಮನಿ, ಲಕ್ಷ್ಮೀಕಾಂತ ಬಡಿಗೇರ, ಮಾನಪ್ಪ ಬಡಿಗೇರ, ಪ್ರಭು ಬಡಿಗೇರ, ದೇವರಾಜ ಬಾಗೇವಾಡಿ, ಪ್ರಕಾಶ ಕಟ್ಟಿಮನಿ ಮೊದಲಾದವರು ಆಗಮಿಸುವರು.
ಸಾಯಂಕಾಲ 5-30 ಗಂಟೆಗೆ ಮಹಾರಥೋತ್ಸವವು ಜರುಗಲಿದ್ದು ಅಂದೇ ಸಾಯಂಕಾಲ 6-30 ಗಂಟೆಗೆ ಶ್ರೀ ಮಾರುತೇಶ್ವರ ತೋಟ್ಟಿಲು ಕಾರ್ಯಕ್ರಮವು ದೇವಸ್ಥಾನದಲ್ಲಿ ಜರುಗುವದೆಂದು ಶ್ರೀ ಮಾರುತೇಶ್ವರ ಸೇವಾ ಸಂಘ ಪ್ರಕಟನೆ ಮೂಲಕ ತಿಳಿಸಿದೆ.