ಹೂವಿನತೋಟ ಗ್ರಾಮದಲ್ಲಿ ಶ್ರೀ ವೀರಭದ್ರೇಶ್ವರರ 76ನೇ ಜಾತ್ರಾ ಮಹೋತ್ಸವ
ಚಿಂಚೋಳಿ:ಏ.21: ತಾಲೂಕಿನ ಮಿರಿಯಾಣ ಗ್ರಾಮದ ಹೂವಿನತೋಟ ದಲ್ಲಿ ಪ್ರತಿವರ್ಷದಂತೆ ಈ ವರ್ಷವು ಶ್ರೀ ವೀರಭದ್ರಶ್ವರರ 75ನೇ ಜಾತ್ರಾ ಮಹೋತ್ಸವವು ಬಹಳ ವಿಜೃಂಭಣೆಯಿಂದ ಜರಗಲಿದೆ ಎಂದು ಪಂಚಾಕ್ಷರಯ್ಯ ಸ್ವಾಮಿ ತಿಳಿಸಿದ್ದಾರೆ. ನಾಳೆ 22-04-2023 ರಂದು ಬೆಳ್ಳಿಗೆ ಯಿಂದ ಸಾಯಂಕಾಲದ ವರೆಗೆ ದಾಸೋಗಿ ಕಾರ್ಯಕ್ರಮ,
23-04-2023 ರಂದು ಮುಂಜಾನೆ 08 ಗಂಟೆಗೆ ಮಿರಿಯಾಣ ಗ್ರಾಮದಿಂದ ದೇವಸ್ಥಾನದ ವರೆಗೆ ಪಲ್ಲಕಿ ಮೆರವಣಿಗೆ, ನಂತರ ಅಗ್ಗಿ ಪ್ರವೇಶ ಹಾಗೂ ಸಾಯಂಕಾಲ 04 ಗಂಟೆಗೆ ವೀರಭದ್ರಶ್ವರರ ದಿವ್ಯ ಉಚ್ಚೆಯಿ ರಥೋತ್ಸವ ಹಾಗೂ ಸಂಜೆ 06 ಗಂಟೆಗೆ ಜಂಗಿ ಕೈ ಕುಸ್ತಿ ನಡೆಯುತ್ತೆದೆ ಎಂದು ತಿಳಿಸಿದರು ವಿ?ರಭದ್ರಶ್ವರ ಸ್ವಾಮಿಯ ದೇವಾಲಯ ಪೌರಾಣಿಕ ಮತ್ತು ಐತಿಹಾಸಿಕ ಮಹತ್ವ ಪಡೆದಿದೆ. ಹಲವಾರು ಶತಮಾನಗಳಿಂದ ಭಕ್ತಿ ಹಾಗೂ ಸಿದ್ಧಿಯ ನೆಲೆಬೀಡಾಗಿ ಭಕ್ತರ ಗಮನಸೆಳೆದಿದೆ.
ಜಾತ್ರಾ ಮಹೋತ್ಸವ ಪ್ರಯುಕ್ತ ಶ್ರೀ ವೀರಭದ್ರೇಶ್ವರರ ಮೂರ್ತಿಗೆ ರುದ್ರಾಭಿಷೇಕ, ವಿಶೇಷ ಅಲಂಕಾರಿಕ ಪೂಜೆ, ಅಗ್ನಿ ಪ್ರವೇಶ, ಧಾರ್ಮಿಕ ಕಾರ್ಯದಲ್ಲಿ ಸದ್ಭಕ್ತರು ಪಾಲ್ಗೊಂಡು ದೇವರ ಕೃಪಾಶಿರ್ವಾದಕ್ಕೆ ಪಾತ್ರರಾಗ ಬೇಕು ಎಂದರು. ಆದಕಾರಣ ಸುತ್ತಮುತ್ತಲಿನ ಗ್ರಾಮಸ್ಥರು, ಭಕ್ತರುಜಾತ್ರಾ ಕಾರ್ಯಕ್ರಮಕ್ಕೆ ಆಗಮಿಸಿ ದೇವರ ಕೃಪಾಶಿರ್ವಾದಕ್ಕೆ ಪಾತ್ರರಾಗಬೇಕು ಎಂದು ದೇವಸ್ಥಾನದ ಟ್ರಸ್ಟೀ ತಿಳಿಸಿದ್ದಾರೆ.