ವಿಜೃಂಬಣೆಯಿಂದ ಜರುಗಿದ ಶ್ರೀ ಖಾಸ್ಗತೇಶ್ವರ ರಥೋತ್ಸವ
ತಾಳಿಕೋಟೆ:ಏ.21: ಪಟ್ಟಣದ ಶ್ರೀ ಖಾಸ್ಗತೇಶ್ವರ ಮಠದ ಶಾಖಾ ಮಠವಾದ ಅಮಲ್ಯಾಣ ಗ್ರಾಮದ ಶ್ರೀ ಖಾಸ್ಗತ ಮಠದ ಜಾತ್ರೋತ್ಸವ ಅಂಗವಾಗಿ ಮಹಾ ರಥೋತ್ಸವವು ಶನಿವಾರರಂದು ಶ್ರೀಮಠದ ಬಾಲ ಶಿವಯೋಗಿ ಶ್ರೀ ಸಿದ್ದಲಿಂಗ ದೇವರ ದಿವ್ಯ ಸಾನಿದ್ಯದಲ್ಲಿ ವಿಜೃಂಬಣೆಯಿಂದ ಜರುಗಿತು.
ಅಮಲ್ಯಾಳ ಗ್ರಾಮದಲ್ಲಿ ಜರುಗುವ ಶ್ರೀ ಖಾಸ್ಗತೇಶ್ವರರ ಮಹಾ ರಥೋತ್ಸವವನ್ನು ಗ್ರಾಮದಿಂದ ಮಧುವೆಯಾಗಿ ಬೇರೆ ಊರಿಗೆ ಹೋದ ಮಹಿಳೆಯರೇ ಈ ಜಾತ್ರೋತ್ಸವಕ್ಕೆ ಆಗಮಿಸಿ ರಥವನ್ನು ಎಳೆಯುತ್ತಿರುವದು ವಿಶೇಷವಾಗಿದೆ.
ಜಾತ್ರೋತ್ಸವ ಅಂಗವಾಗಿ ಶ್ರೀಮಠದ ಬಾಲ ಶಿವಯೋಗಿ ಶ್ರೀ ಸಿದ್ದಲಿಂಗ ದೇವರನ್ನು ಸಾರೋಟಿನಲ್ಲಿ ಕೂಡ್ರಿಸಿ ಫಲ್ಲಕ್ಕಿ ಉತ್ಸವದೊಂದಿಗೆ ಗಂಗಸ್ಥಳ ಕಾರ್ಯಕ್ರಮದೊಂದಿಗೆ ಸುಮಂಗಲೆಯರ ಕುಂಭ ಮೇಳದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೇರವಣಿಗೆ ಮಾಡಲಾಯಿತು.
ಸಾಯಂಕಾಲ ಜರುಗಿದ ಭವ್ಯ ರಥೋತ್ಸವದಲ್ಲಿ ಅಸಂಖ್ಯಾತ ಭಕ್ತ ಸಮೂಹ ಪಾಲ್ಗೊಂಡು ಶ್ರೀ ಖಾಸ್ಗತರ ರಥಕ್ಕೆ ಉತ್ತತ್ತಿ, ಬಾಳೆ ಹಣ್ಣು, ಎಸೆದು ಸಂಭ್ರಮಿಸಿದರಲ್ಲದೇ ನಂತರ ಮಹಾ ಪ್ರಸಾದ ಸ್ವಿಕರಿಸಿ ಪುನಿತರಾದರು.