ನೇಹಾ ಹಿರೇಮಠ ಕೊಲೆ ಪ್ರಕರಣ ಖಂಡಿಸಿ ಪ್ರತಿಭಟನೆ
ಹುಮನಾಬಾದ್ :ಏ.21:ನೇಹಾ ಹಿರೇಮಠ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗೆ ಕಠಿಣ ಶಿಕ್ಷೆ ನೀಡುವಂತೆ ಆಗ್ರಹಿಸಿ, ಪಟ್ಟಣದ ತಹಸೀಲ್ ಕಚೇರಿಯಲ್ಲಿ ಶನಿವಾರ ನಾಗರಿಕ ಹಿತರಕ್ಷಣಾ ವೇದಿಕೆ ಹಾಗೂ ಎಬಿವಿಪಿ ಸಂಘಟನೆ ಪದಾಧಿಕಾರಿಗಳು ಬೃಹತ್ ಪ್ರತಿಭಟನೆ ನಡೆಸಿ, ತಹಸೀಲ್ದಾರ್ ಅಂಜುಮ್ ತಬಸುಮ್‍ಗೆ ಮನವಿ ಪತ್ರ ಸಲ್ಲಿಸಿದರು.
ಯುವಾ ಬ್ರಿಗೇಡ್ ವಿಭಾಗೀಯ ಸಂಚಾಲಕ ಮಾತನಾಡಿ, ನೇಹಾ ಹಿರೇಮಠಗೆ ಬರ್ಬವಾಗಿ ಕೊಲೆ ಮಾಡಿರುವುದು ನಾಗರಕ ಸಮಾಜ ತಲೆ ತಗ್ಗಿಸುವಂತ ಕೃತ್ಯವಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ, ಡಿಸಿಎಂ. ಹಾಗೂ ಗೃಹ ಸಚಿವರು ನೀಡುತ್ತಿರುವ ಹೇಳಿಕೆಗಳನ್ನು ಗಮನಿದರೆ ಇದರಲ್ಲಿ ದಾರಿ ತಪ್ಪಿಸುವ ಸಂಶಯ ವ್ಯಕ್ತವಾಗುತ್ತಿದೆ. ಹೀಗಾಗಿ ಕಾನೂನು ಚೌಕಟ್ಟಿನಲ್ಲಿ ಸೂಕ್ತ ತನಿಖೆ ಕೈಗೊಂಡು ಆರೋಪಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸುನೀಲ್ ಪತ್ರಿ, ನವೀನ ಬತಲಿ, ಮಹಾದೇವ ಗೌಳಿ, ಅಭಿಷೇಕ ಪೆÇಶಟ್ಟಿ, ಸಾಗರ ಪೆÇಶಟ್ಟಿ, ಮನೋಜ ಸೀತಾಳೆ, ಕಾವೇರಿ ಹುಮನಾಬಾದ್, ಸೋಮನಾಥ ಸ್ವಾಮಿ, ಬಸಯ್ಯಾ ಸ್ವಾಮಿ, ಜ್ಯೋತಿಬಾ ಸಾಠೆ, ಪ್ರವೀಣ ಗುತ್ತೆದಾರ, ಮನೋಜ ಓಂಕಾರೆ, ಸಿದ್ದು ಕುಂಬಾರ ಸೇರಿ ಅನೇಕರಿದ್ದರು.