ನ್ಯಾಯ ಸಿಗುವವರೆಗೆ ನಿರಂತರ ಹೋರಾಟ : ಶಿವು ಲೋಖಂಡೆ
ಭಾಲ್ಕಿ:ಏ.21: ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ ಕೊಲೆಗೆ ಸರಿಯಾದ ನ್ಯಾಯ ಸಿಗುವವರೆಗೆ ನಿರಂತರ ಹೋರಾಟ ಮುಂದುವರೆಯುವುದ ಎಂದು ವಿಶ್ವ ಹಿಂದೂ ಪರಿಷತ್ ಪ್ರಮುಖ ಶಿವುಲೋಖಂಡೆ ಹೇಳಿದರು.
ಪಟ್ಟಣದಲ್ಲಿ ವಿವಿಧ ಹಿಂದೂಪರ ಸಂಘಟನೆಯಗಳ ವತಿಯಿಂದ ಶನಿವಾರ ಆಯೋಜಿಸಿದ್ದ ನೇಹಾ ಕೊಲೆ ಖಂಡಿಸಿ ನಡೆಸಿದ ಪ್ರತಿಭಟನೆಯಲ್ಲಿ ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರ ತಹಸೀಲ್ದಾ ಮೂಲಕ ಸಲ್ಲಿಸಿ ಅವರು ಮಾತನಾಡಿದರು. ವಿದ್ಯಾರ್ಥಿನಿ ನೇಹಾ ಕೊಲೆಯಿಂದ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಯಾವರೀತಿ ಎನ್ನುವುದು ಸಾಬೀತಾಗಿದೆ. ಕಾಂಗ್ರೆಸ್ ಪಕ್ಷದ ಮುಖಂಡರ ಮಗಳಿಗೇ ಇಲ್ಲಿ ಸಂರಕ್ಷಣೆ ಇಲ್ಲ ಅಂದರೆ ಕರ್ನಾಟಕ ರಾಜ್ಯದಲ್ಲಿ ಸಾಮಾನ್ಯರ ಗತಿಯೇನು?, ತುಷ್ಟಿಕರಣ ರಾಜಕಾರಣಕ್ಕಾಗಿ ಸರ್ಕಾರ ಯಾವ ಮಟ್ಟಿಗೆ ಇಳಿತಾಯಿದೆ. ಇದು ಹೀಗೆ ಮುಂದುವರೆದರೆ ಬಹುಸಂಖ್ಯಾತ ಹಿಂದೂಗಳು ನಿರ್ನಾಮವಾಗುವ ಸ್ಥಿತಿ ಉದ್ಭವಿಸುವುದು. ಕಾರಣ ಹಿಂದೂಗಳೆಲ್ಲರೂ ಎಚ್ಚೆತ್ತುಕೊಂಡು ಈ ಕೊಲೆಗೆ ನಿಜವಾದ ನ್ಯಾಯ ಒದಗಿಸಬೇಕಾಗಿದೆ ಎಂದು ಆಕ್ರೋಶ ಹೊರಹಾಕಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಕಿರಣಕುಮಾರ ಖಂಡ್ರೆ, ಪ್ರಭು ಧೂಪೆ, ಜೈರಾಜ ಕೊಳ್ಳಾ, ಸಾಗರ ಮಲಾನಿ, ವೈಜಿನಾಥ ತಗಾರೆ, ಡಾ| ಪ್ರಭು ಸ್ವಾಮಿ, ವಿನೋದ ಕಾರಾಮುಂಗೆ, ಪ್ರಶಾಂತ ಪಾತ್ರೆ, ಮಾಹಾಲಿಂಗ ಖಂಡ್ರೆ, ಮನ್ಮಥಸ್ವಾಮಿ ಕಾಕನಾಳ ಸೇರಿದಂತೆ ಹಲವರು ಇದ್ದರು.