ನೇಹಾಕೊಲೆಗೆ ಮೇಹಕರ ಶ್ರೀ ಖಂಡನೆ
ಭಾಲ್ಕಿ:ಏ.21: ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆಗೆ ಮೆಹಕರ ಕಟ್ಟಿಮನಿ ಹಿರೇಮಠ ಸಂಸ್ಥಾನದ ಶ್ರೀ ರಾಜೇಶ್ವರ ಶಿವಾಚಾರ್ಯರು ಖಂಡನೆ ವ್ಯಕ್ತಪಡಿಸಿದ್ದಾರೆ. ಈ ಕುರಿತು ಪ್ರಕಟಣೆ ಹೊರಡಿಸಿದ ಅವರು, ರಾಜ್ಯದಲ್ಲಿ ಒಬ್ಬ ವಿದ್ಯಾರ್ಥಿನಿಯ ಕೊಲೆಯಿಂದ ಕಾನೂನು ವ್ಯವಸ್ಥೆಗೆ ಅನುಮಾನ ವ್ಯಕ್ತವಾಗಿದೆ. ಕೊಲೆಮಾಡಿದವರಿಗೆ ಕಠಿಣ ಶಿಕ್ಷೆಯಾಗಬೇಕು. ಇದು ಒಂದು ಧರ್ಮದ ಬಗ್ಗೆ ವ್ಯಕ್ತವಾದ ಸಂಗತಿಯಲ್ಲ. ಕೊಲೆ ಯಾರೇ ಮಾಡಿದರೂ ಅದು ಕೊಲೆಯೇ, ಹೀಗಾಗಿ ಕೊಲೆ ಮಾಡಿದ ವ್ಯಕ್ತಿಯ ಮೇಲೆ ಸೂಕ್ತ ಕ್ರಮ ಕೈಗೊಂಡು ಕಾನೂನು ವ್ಯವಸ್ಥೆ ಕಾಪಾಡಬೇಕು. ಇಲ್ಲದಿದ್ದರೆ ರಾಜ್ಯದ ಸ್ಥಿತಿ ಯಾವ ಮಟ್ಟಕ್ಕೆ ಮುಟ್ಟುವುದು ಎನ್ನುವುದ ಯೋಚಿಸಬೇಕಿದೆ. ನೇಹಾ ಕೊಲೆ ಪ್ರಕರಣ ಅತ್ಯಂತ ದು:ಕಕರ ಮತ್ತು ಅಘಾತಕಾರಿ ಘಟನೆಯಾಗಿದೆ ಎಂದು ತಮ್ಮ ಆಕ್ರೋಶ ಹೊರಹಾಕಿದ್ದಾರೆ.