ನೇಹಾ ಕೊಲೆ ಭುಗಿಲೆದ್ದ ಆಕ್ರೋಶ :ಎ.ಬಿ.ವಿ.ಪಿ ವತಿಯಿಂದ ಬೃಹತ್ ಪ್ರತಿಭಟನೆ
ಭಾಲ್ಕಿ: ಏ.21:ಹುಬ್ಬಳ್ಳಿಯ ಬಿವಿಬಿ ಕಾಲೇಜಿನ ಎಮ್‍ಸಿಎ ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆಯನ್ನು ಖಂಡಿಸಿ ಶನಿವಾರ ಎಬಿವಿಪಿ ವತಿಯಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರ ತಹಸೀಲ್ದಾರ ಮೂಲಕ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಪ್ರತಿಭಟನಾ ನಿರತರು ಮಾತನಾಡಿ, ಹತ್ಯೆಯಾದ ಹುಡುಗಿ ಹು-ಧಾ ಮಹಾನಗರ ಪಾಲಿಕೆ ಕಾಂಗ್ರೆಸ್ ಸದಸ್ಯ ನಿರಂಜನಯ್ಯ ಹಿರೇಮಠರ ಪುತ್ರಿಯಾಗಿದ್ದು, ಅಧಿಕಾರಸ್ತರ ಮಗಳಿಗೇ ಹೀಗಾದರೆ ಇನ್ನು ಸಾಮಾನ್ಯರ ಗತಿ ಏನು? ಇಲ್ಲಿ ಯಾರು ಸುರಕ್ಷಿತರಾಗಿದ್ದಾರೆ ಎನ್ನುವ ಪ್ರಶ್ನೆ ಕಾಡುತ್ತಿದೆ ಎಂದು ಆಕ್ರೋಶ ಹೊರಹಾಕಿದರು. ರಾಜ್ಯದಲ್ಲಿ ಕಾನೂನು ವ್ಯವಸ್ಥೆ ತೀರಾ ಹದಗೆಟ್ಟಿದೆ. ಕಾಲೇಜಿನ ಒಳಗೆ ಬಂದು ವಿದ್ಯಾರ್ಥಿನಿಯನ್ನು ಹತ್ಯೆ ಮಾಡಲು ಸಾಧ್ಯವಾಗಿರಬೇಕಾದರೆ, ಕೊಲೆಗಾರನಿಗೆ ಕಾನೂನಿನ ಯಾವುದೇ ಭಯವೂ ಇಲ್ಲದೇ ರಾಜಾ ರೋಷವಾಗಿ ಕೃತ್ಯ ಮಾಡುವ ಸ್ಥಿತಿ ರಾಜ್ಯದಲ್ಲಿ ನಿರ್ಮಾಣವಾಗಿದೆ. ಕೊಲೆಗಾರನಿಗೆ ಉಗ್ರ ಶಿಕ್ಷೆ ನೀಡುವುದರೊಂದಿಗೆ ವಿದ್ಯಾರ್ಥಿನಿಯ ಕುಟುಂಬಕ್ಕೆ ನ್ಯಾಯ ಒದಗಿಸಬೇಕಾಗಿದೆ ಎಂದು ಸರ್ಕಾರಕ್ಕೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಎ.ಬಿ.ವಿ.ಪಿ ನಗರ ಕಾರ್ಯದರ್ಶಿ ನವನಾಥ ಕಾರಬಾರಿ, ಎಬಿವಿಪಿ ಪ್ರಮುಖ ರೇವಣಸಿದ್ದ ಜಾಡರ, ಶ್ರೀಶಾ, ಆರತಿ, ಸುನಿತಾ, ಸುಜಾತಾ, ಜ್ಯೋತಿ, ದೆವಿಕಾ, ದೀಪಿಕಾ, ರಾಧಿಕಾ, ವೈಶಾಲಿ, ದ್ರೋಪತಿ, ಅಶ್ವಿನಿ, ಮೀನಾ, ಸ್ವಾತಿ, ಲಕ್ಷ್ಮಿ, ಪ್ರಗತಿ, ವೈಷ್ಣವಿ, ಪೂಜಾ, ಪ್ರೆರಣಾ, ಸ್ಪೂರ್ತಿ ಸೇರಿದಂತೆ ಹಲವರು ಇದ್ದರು.