ಭಗವಾನ ಮಹಾವೀರ ಜಯಂತಿ ಆಚರಣೆ
ಕಲಬುರಗಿ:ಏ.21: ನಗರದ ಸರದಾರ ವಲ್ಲಭಭಾಯಿ ಪಟೇಲ್ ಎಜ್ಯುಕೇಷನ್ ಟ್ರಸ್ಟ್ ಸಂಚಾಲಿತ ರಮಾಬಾಯಿ ಜಹಾಗೀರದಾರ (ಆರ್.ಜೆ) ಸ್ವತಂತ್ರ ಪದವಿ ಪೂರ್ವ ವಿಜ್ಞಾನ ಕಾಲೇಜಿನಲ್ಲಿ ಇಂದು ಭಗವಾನ್ ಮಹಾವೀರ ಜಯಂತಿಯನ್ನು ಆಚರಿಸಲಾಯಿತು.
ಆಡಳಿತ ಮಂಡಳಿಯ ಸದಸ್ಯರಾದ ಪ್ರಾಂಶುಪಾಲ ಡಾ|| ಭುರ್ಲಿ ಪ್ರಹ್ಲಾದರವರು ಭಾವಚಿತ್ರಕ್ಕೆ ಪೂಜೆಯನ್ನು ಸಲ್ಲಿಸಿದರು. ಸತ್ಯ ಮತ್ತು ಅಹಿಂಸೆಯೇ ಪರಮೋ ಧರ್ಮಎಂಬ ಅರಿಷಡ್ವರ್ಗಗಳ ಬಗ್ಗೆ ಜಗತ್ತಿಗೆ ಸಾರಿದ ಮಹಾವೀರರ ಆದರ್ಶಗಳು ಪ್ರಚಲಿತವಾಗಿವೆ. ಈ ಕಾರ್ಯಕ್ರಮದಲ್ಲಿ ಕಾಲೇಜಿನಉಪನ್ಯಾಸಕರಾದ ಮಳೇಂದ್ರಹಿರೇಮಠ, ಚಂದ್ರಭಾನು ,ವೈಭವ ಕೆ,ನಿತಿನ್ ಕುಲಕರ್ಣಿ ,ಸಂತೋಷ್ ಕುಲಕರ್ಣಿ ಮುಂತಾದವರು ಇದ್ದರು.