ಮಕ್ಕಳ ಸಾಹಿತ್ಯದ ಬೇರುಗಳು ಜಾನಪದ ಸಾಹಿತ್ಯದಲ್ಲಿವೆ
ಧಾರವಾಡ,ಏ21 : ಮಕ್ಕಳ ಸಾಹಿತ್ಯದ ಬೇರುಗಳು ಜಾನಪದ ಸಾಹಿತ್ಯದಲ್ಲಿದ್ದು, ಅದು ಮಾನವ ಸಾಹಿತ್ಯದ ಬುನಾದಿ ಎಂದು ಶಿಕ್ಷಕ ಶ್ರೀಧರ್ ಗಸ್ತಿ ಅಭಿಪ್ರಾಯಪಟ್ಟರು.
ಅವರು ಕರ್ನಾಟಕ ವಿದ್ಯಾವರ್ಧಕ ಸಂಘವು ಆಯೋಜಿಸಿದ್ದ ಕವಿ ಬಿ.ಕೆ. ಹೊಂಗಲ ದತ್ತಿ ಕಾರ್ಯಕ್ರಮದಲ್ಲಿಉಪನ್ಯಾಸ' ಹಾಗೂಮಕ್ಕಳ ಶ್ರೇಷ್ಠ ಕವಿ-2024′ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ `ಮಕ್ಕಳ ಸಾಹಿತ್ಯ’ ವಿಷಯದ ಮೇಲೆ ಉಪನ್ಯಾಸ ನೀಡುತ್ತಾ, ಮಕ್ಕಳ ಸಾಹಿತ್ಯವು ಮಕ್ಕಳ ಮನಸ್ಸನ್ನು ಅರಳಿಸಿ ಅವರ ಭಾವನೆಗಳಿಗೆ ಸ್ಪೂರ್ತಿ ನೀಡುವಂತಿರಬೇಕು. ಮಕ್ಕಳ ವ್ಯಕ್ತಿತ್ವ ನಿರ್ಮಾಣದಲ್ಲಿ ಮಕ್ಕಳ ಸಾಹಿತ್ಯ ಪೂರಕವಾಗಿದೆ.ಮಕ್ಕಳು ಸಾಹಿತ್ಯಓದುವುದರಿಂದಅವರಲ್ಲಿ ಒಳ್ಳೆಯ ಜೀವನ ಮೌಲ್ಯ, ಸಂಸ್ಕಾರಗಳು ರೂಪಗೊಳ್ಳುವವು.ವಿವೇಕ, ಒಳ್ಳೆಯ ಆಲೋಚನೆಗಳನ್ನು ಬೆಳೆಸುವ ಶಕ್ತಿ ಸಾಹಿತ್ಯಕ್ಕಿದೆ.
ಒಂದುಕಾಲದಲ್ಲಿ ಮಕ್ಕಳ ಸಾಹಿತ್ಯವು ನಿರ್ಲಕ್ಷಿಸಲ್ಪಟ್ಟದ್ದಾಗಿತ್ತು.ಅದಕ್ಕೆ ಸ್ಪಷ್ಟರೂಪ ಬಂದಿದ್ದು ನವೋದಯ ಸಾಹಿತ್ಯದಕಾಲಘಟದ್ದಲ್ಲಿ.ಅಜ್ಜ-ಅಜ್ಜಿಯರು ಹೇಳುತ್ತಿದ್ದ ಪ್ರಾಸಬದ್ದ ಕಥೆಗಳು, ಆಟದ ಪದಗಳು, ಪಂಚತಂತ್ರದ ಕಥೆಗಳು, ಮಕ್ಕಳ ಮನಸ್ಸನ್ನು ಉಲ್ಲಾಸಗೊಳಿಸುತ್ತಿದ್ದವು.ಆಧುನಿಕಕಾಲದಲ್ಲಿ ಮುದ್ರಣ ಕಲೆ ಬಂದ ಮೇಲೆ ಮಕ್ಕಳ ಸಾಹಿತ್ಯ ವಿಫುಲವಾಗಿ ಬೆಳೆಯಿತು.ಮಕ್ಕಳ ಸಾಹಿತ್ಯದ ಮೇಲೆ ಆಂಗ್ಲ ಸಾಹಿತ್ಯದ ಪ್ರಭಾವವೂಇದೆ.ಮಕ್ಕಳಲ್ಲಿ ಸಾಹಿತ್ಯಿದ ಬಗ್ಗೆ ಅಭಿರುಚಿ ಬೆಳೆಸುವಲ್ಲಿ ಶಿಕ್ಷಕರ ಪಾಲಕರ ಪಾತ್ರವು ಹಿರಿದಾಗಿದೆಎಂದು ಹೇಳಿದರು.
ಮುಖ್ಯಅತಿಥಿಡಾ.ರುದ್ರಣಚಿಲುಮಿ ಮಾತನಾಡಿ, ಕವಿ ಬಿ. ಕೆ. ಹೊಂಗಲ ಒಬ್ಬ ಕ್ರಿಯಾಶೀಲ ಕವಿಗಳು. ಕುಟುಂಬ ವತ್ಸಲರು.ಪ್ರಾಥಮಿಕ ಶಾಲಾ ಶಿಕ್ಷಕರಾಗಿ ವೃತ್ತಿಧರ್ಮಕಾಪಾಡಿಕೊಂಡು ಬಂದವರು.ಮಕ್ಕಳಿಗೆ ಪಾಠ ಬೋಧನೆಯಲ್ಲಿಜೀವತುಂಬಿ, ಹಾವಭಾವದೊಂದಿಗೆಅಭಿವ್ಯಕ್ತಿಸುತ್ತಿದ್ದಅವರ ಕಲೆ ಶ್ಲಾಘನೀಯಎಂದು ಹೇಳಿದರು.
ದಿವ್ಯಸಾನಿಧ್ಯ ವಹಿಸಿದ್ದ ಪೂಜ್ಯಡಾ.ಬಸವರಾಜದೇವರು ಆಶೀರ್ವಚನ ನೀಡುತ್ತಾ, ಮಕ್ಕಳ ಸಾಹಿತ್ಯವುಅವರ ಸಾಂಸ್ಕøತಿಕ ಶ್ರೀಮಂತಿಕೆಗೆ ಕಾರಣವಾಗಬೇಕು.ಅ ನಿಟ್ಟಿನಲ್ಲಿ ತಂದೆ-ತಾಯಿ-ಶಿಕ್ಷಕರು ಬಾಲ್ಯದಿಂದಲೇ ಮಕ್ಕಳಲ್ಲಿ ಸಾಹಿತ್ಯದ ಬಗ್ಗೆ ಆಸಕ್ತಿ-ಅಭಿರುಚಿಗಳನ್ನು ಬೆಳೆಸುವ ಕಾರ್ಯ ಮಾಡಬೇಕುಎಂದರು.
ಮಕ್ಕಳ ಸಾಹಿತಿ ನಿಂಗಣ್ಣಕುಂಟಿ ಮಾತನಾಡಿ, ಶ್ರೇಷ್ಠ ಮಕ್ಕಳ ಸಾಹಿತಿ-2024 ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ಈ ಪ್ರಶಸ್ತಿ ನನ್ನನ್ನು ಶ್ರೇಷ್ಠ ಸಾಹಿತಿಯಾಗಲು ಪುಷ್ಠಿ ನೀಡಿದೆ.ನನ್ನು ಗುರುಗಳು ಹಾಗೂ ವರಕವಿ ಬೇಂದ್ರೆಯವರು ನನ್ನ ಸಾಹಿತ್ಯಕ್ಕೆ ನಿಜವಾದ ಪ್ರೇರಕ ಶಕ್ತಿ ಎಂದು ಸ್ಮರಿಸಿಕೊಂಡರು.
ಕ.ವಿ.ವ. ಸಂಘದಅಧ್ಯಕ್ಷಚಂದ್ರಕಾಂತ ಬೆಲ್ಲದಕಾರ್ಯಕ್ರಮದಅಧ್ಯಕ್ಷತೆ ವಹಿಸಿ ಮಾತನಾಡಿದರು.ದತ್ತಿದಾನಿಗಳ ಪರವಾಗಿ ಬಿ. ಕೆ. ಹೊಂಗಲ ಮಾತನಾಡಿ, ತಮ್ಮ ವೃತ್ತಿಜೀವನದ ಅನುಭವಗಳನ್ನು ಹಂಚಿಕೊಂಡರು. ವೇದಿಕೆಯಲ್ಲಿ ಸೋಮನಾಥ ಹೊಂಗಲ, ಡಾ.ಮಾರ್ಕಂಡೇಯದೊಡಮನಿ ಇದ್ದರು.ವೀರಣ್ಣಒಡ್ಡೀನ ಸ್ವಾಗತಿಸಿದರು.ಶಂಕರ ಹಲಗತ್ತಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.ಡಾ. ಮಹೇಶ ಹೊರಕೇರಿ ನಿರೂಪಿಸಿ, ವಂದಿಸಿದರು.
ಕಾರ್ಯಕ್ರಮದಲ್ಲಿ ಸತೀಶತುರಮರಿ, ಡಾ. ಧನವಂತ ಹಾಜವಗೋಳ ಹಾಗೂ ಶಿವಾನಂದ ಭಾವಿಕಟ್ಟಿಎನ್. ಎಸ್. ಯತ್ನಳ್ಳಿ, ಬಿ. ಆಯ್. ಈಳಿಗೇರ, ಶ್ರೀಧರ ಗಾಂವಕರ, ಎಸ್. ಜಿ. ಪಾಟೀಲ, ಕೆ.ಎಚ್.ನಾಯಕ, ಎಂ.ಎಂ. ಚಿಕ್ಕಮಠ, ಎಂ.ಎಸ್. ನರೇಗಲ್ಲ, ಸಿದ್ದರಾಮ ಹಿಪ್ಪರಗಿ, ಚನಬಸಪ್ಪಅವರಾದಿ, ಎಂ. ಬಿ. ಹೆಗ್ಗೇರಿ, ಹೊಂಗಲ ಕುಟುಂಬದವರು ಸೇರಿದಂತೆಅನೇಕರು ಭಾಗವಹಿಸಿದ್ದರು.