ದುಬೈನಲ್ಲಿರುವ ಕಾನೂನು ಭಾರತದಲ್ಲಿ ಜಾರಿಯಾಗಲಿ: ಸಿದ್ರಾಮಯ್ಯ ಸ್ವಾಮಿ
ಬೀದರ್: ಏ.21:ದುಬೈನಲ್ಲಿ ಕೊಲೆ ಮಾಡಿದವನಿಗೆ ಕೊಲೆ ಶಿಕ್ಷೆ, ತಲೆ ಸೀಳಿದವನಿಗೆ ತಲೆ ಸೀಳುವ, ಅವಮಾನ ಮಾಡಿವನಿಗಹೆ ಅವಮಾನಿಸುವ, ಅತ್ಯಾಚಾರಗೈದರೆ ಅತ್ಯಾಚಾರದ ಶಿಕ್ಷೆ ನೀಡುವಂಥ ಕಾನೂನು ನಮ್ಮ ದೇಶದಲ್ಲಿ ಜಾರಿ ಮಾಡಬೇಕಿದೆ ಎಂದು ಕಲ್ಯಾಣ ಕರ್ನಾಟಕ ಜಂಗಮ ಸಮಾಜದ ಅಧ್ಯಕ್ಷರಾದ ಸಿದ್ರಾಮಯ್ಯ ಸ್ವಾಮಿ ಹೇಳಿದ್ದಾರೆ.
ಶನಿವಾರ ಜಿಲ್ಲಾ ಪತ್ರಿಕಾ ಭವನದಲ್ಲಿ ಕರೆದ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿರುವ ಅವರು, ಉತ್ತರ ಪ್ರದೇಶ ಹಾಗೂ ತೆಲಂಗಾಣದಲ್ಲಿ ಕೊಲೆ ಪಾತಕಿಗಳಿಗೆ ಶುಟ್ ಮಾಡುವ ಶಿಕ್ಷೆ ಇದ್ದು, ಕರ್ನಾಟಕದಲ್ಲಿ ಸಹ ನಮ್ಮ ಸರ್ಕಾರ ಇದನ್ನು ಜಾರಿಗೊಳಿಸಬೇಕು.ಹಾq ಹÀಗಲೆ ಇಂಥ ಕೊಲೆ ನಡೆದಿರುವುದು ಅತ್ಯಂತ ಹೆಯ ಕೃತ್ಯವಾಗಿದೆ. ದುಬೈನಲ್ಲಿ ಇರುವಂಥ ಶಿಕ್ಷಾ ಕ್ರಮ ಭಾರತೀಯ ಸಂಸತ್ತಿನಲ್ಲಿ ಜಾರಿಗೆ ತರಬೇಕು. ಈ ಪ್ರಕರಣ ಸಿ.ಬಿ.ಐಗೆ ವಹಿಸಬೇಕೆಂದು ಸಿದ್ರಾಮಯ್ಯ ಸ್ವಾಮಿ ಆಗ್ರಹಿಸಿದರು.
ವಿಶ್ವ ಹಿಂದು ಪರಿಷತ್‍ನ ರಾಮಕೃಷ್ಣನ್ ಸಾಳೆ ಮಾತನಾಡಿ, ರಾಜ್ಯದಲ್ಲಿ ರಾವಣರಾಜ ನಿರ್ಮಾಣವಾಗಿದೆ. ಬೆಳಗಾವಿಯಲ್ಲಿ ದಲಿತ ಮಹಿಳೆಯನ್ನು ಕಟ್ಟಿ ಹಾಕಿ ಕೊಲೆ ಮಾಡಿರುವುದು, ರಾಮೆಶ್ವರಂ ಕೆಫೆಯಲ್ಲಿ ಬಾಂಬ್ ಸ್ಪೋಟ್, ಗದಗನಲ್ಲಿ ನಾಲ್ವರ ಅಮಾನುಷ ಹತ್ಯೆ, ಮೈಸೂರು ದೇಶಭಕ್ತರ ಮೇಲೆ ಹಲ್ಲೆ, ಹಿಂದು ಯುವಕರ ಮೇಲೆ ಕೆಸ್ ದಾಖಲು ಇಂಥ ಮುಸ್ಲಿಮ್ ಒಲೈಕೆ ರಾಜಕಾರಣ ಮಾಡಲು ಹೊರಟಿರುವ ಕಾಂಗ್ರೆಸ್ ಸರ್ಕಾರಕ್ಕೆ ಈ ರಾಜ್ಯದ ಜನರ ಶಾಪ ಖಂಡಿತ ತಟ್ಟಲಿದ್ದು, ನೇಹಾ ಹಿರೇಮಠ ಹತ್ಯೆ ಪ್ರಕರಣದಲ್ಲಿ ಬಂಧಿತ ಆರೋಪಿಯನ್ನು ಮರಣದಂಡನೆಗೆ ಗುರಿಪಡಿಸಬೇಕೆಂದು ಒತ್ತಾಯಿಸಿದರು.
ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕøತ ಶಿವಯ್ಯ ಸ್ವಾಮಿ ಮಾತನಾಡಿ, ನೇಹಾ ಹಿರೇಮಠ ಅವರ ಹತ್ಯೆ ಇಡೀ ರಾಜ್ಯ ಬೆಚ್ಚಿ ಬೀಳಿಸುವ ಘಟನೆಯಾಗಿದೆ. ನಮ್ಮ ಹಿಂದು ಯುವತಿಯರು ಇಂದು ಭಯದಿಂದ ಓಡಾಡುವ ಸ್ಥಿತಿ ನಿರ್ಮಾಣವಾಗಿದೆ. ಕೊಲೆಗಡುಕ ಫಯಾಜ್‍ನನ್ನು ಗಲ್ಲಿಗೇರಿಸಿ ಇಂಥ ಘಟನೆ ಮರುಕಳಿಸದಂತೆ ರಾಜ್ಯ ಸರ್ಕಾರ ಕ್ರಮ ವಹಿಸಬೇಕು, ಈ ಕೊಲೆ ಹಿಂದೆ ಇನ್ನು ನಾಲ್ವರ ಕೈವಾಡದ ಬಗ್ಗೆ ಶಂಕೆ ವ್ಯಕ್ತವಾಗುತ್ತಿದೆ. ಅವರನ್ನು ಸಹ ಬಮಧಿಸಬೇಕು. ಇಂದು ಅಲ್ಲಿನ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ಇದನ್ನು ಪಕ್ಷಾತೀತವಾಗಿ ಖಂಡಿಸಿದಲ್ಲದೇ ದೇಶದಲ್ಲಿ ಶುಟ್ ಐಂಡ್ ಸೈಟ್ ಕಾನೂನು ಜಾರಿಗೆ ತರಬೇಕೆಂದು ಒತ್ತಾಯಿಸಿದ್ದಾರೆ. ಇದಕ್ಕೆ ನಮ್ಮ ಸಹಮತವಿದೆ ಎಂದರು.
ಅಖಿಲ ಭಾರತೀಯ ವೀರಶೈವ ಮಹಾಸಭೆ ಜಿಲ್ಲಾ ಅಧ್ಯಕ್ಷ ವೈಜಿನಥ ಕಮಠಾಣೆ ಮಾತನಾಡಿ, ಕರ್ನಾಟಕವು ಶರಣರ ಹಾಗೂ ಸಾಧು ಸಂತರ ನಾಡು. ಇಂಥ ನಾಡಲ್ಲಿ ಹಾಡ ಹಗಲೇ ಇಂಥ ಭೀಕರ ಕೊಲೆ ನಡೆದರೆ ಕರ್ನಾಟಕದ ಶಾಂತಿ ಭಂಗವಾಗುತ್ತಿದೆ. ಕೂಡಲೇ ಸರ್ಕಾರ ಎಚ್ಚೆತ್ತು ಇದನ್ನು ಗಂಭೀರವಾಗಿ ಪರಿಗಣಿಸಿ ಇದರ ಹಿಂದಿರುವ ಕೈವಾಡವಿರುವವರ ಪತ್ತೆ ಹಚ್ಚಬೇಕೆಂದರು.
ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಸೋಮನಥ ಮುಧೋಳಕರ್ ಮಾತನಾಡಿ, ಈ ಹಿಂದೆ ಹೈದ್ರಾಬಾದ್‍ನಲ್ಲಿ ನಡೆದ ಗ್ಯಾಂಗ್ ರೇಪ್ ಪ್ರಕರಣದಲ್ಲಿ ಪೋಲಿಸ್‍ರು ಆರೋಪಿಗಳನ್ನು ಶುಟ್ ಮಾಡಿ ಬೀಸಾಡಿದಂತೆ ಫಯಾಜ್‍ನೆಗೂ ಸಹ ಅದೇ ಶಿಕ್ಷೆ ನೀಡಬೇಕೆಂದು ಒತ್ತಾಯಿಸಿದರು.
ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕøತ ಓಂಪ್ರಕಾಶ ರೊಟ್ಟೆ ಮಾತನಾಡಿ, ನೇಹಾ ಹಿರೇಮಠ ಕೇಸ್‍ನಲ್ಲಿ ಕೊಳಕು ರಾಜಕೀಯ ಹಾಗೂ ಕೊಳಕು ಸಂಘಟನೆಗಳು ಏಂಟ್ರಿ ಹೊಡೆದು ಅವನ್ನು ರಾಜಕೀಯ ದಾಳ ಬೆಯಿಸಿಕೊಳ್ಲಲು ಹೊರಟಿವೆ. ಹೆಣದ ಮೇಲೆ ರಾಜಕೀಯ ಮಾಡದೇ ಈ ಪ್ರಕರಣದ ಹಿಂದಿನ ಮರ್ಮವನ್ನು ಎಳೆ ಎಳೆಯಾಗಿ ಹೊರ ತರಬೇಕೆಂದರು.
ಪತ್ರಿಕಾ ಗೋಷ್ಟಿಯಲ್ಲಿ ರೈತ ಮಹಿಳೆ ಶಾಂತಮ್ಮ, ಹೂಗಾರ ಸಮಾಜದ ಸಿದ್ದು ಫುಲಾರಿ, ಕುಂಬಾರ ಸಮಾಜದ ವಿಠಲ ಕುಂಬಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.