ಭದ್ರೇಶ್ವರ ವರ ನೀಡುವ ನಿಜವಾದ ದೇವರು: ಹಳ್ಳಿಖೇಡ್ ಶ್ರೀ
ಬೀದರ್:ಏ.21: ತಾಲೂಕಿನ ಬಾವಗಿ ಗ್ರಾಮದ ಭದ್ರೇಶ್ವರ ಸ್ವಾಮಿ ಭಕ್ತರು ಬೇಡಿದ ವರ ನೀಡುವ ದೇವರು’ ಎಂದು ಚಿಕ್ಕಮಠದ ಪೀಠಾಧಿಪತಿ ಪಂಡಿತರಧ್ಯ ಶಿವಾಚಾರ್ಯರು ಹೇಳಿದರು.
ಬಾವಗಿ ಗ್ರಾಮದ ಭದ್ರೆಶ್ವರ ಸ್ವಾಮಿಯ 18ನೇ ಜಾತ್ರಾ ಮಹೋತ್ಸವ ಪ್ರಯುಕ್ತ ಐದು ದಿನಗಳ ನಡೆದ ಪ್ರವಚನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು
ಭದ್ರೇಶ್ವರ ಸ್ವಾಮೀಜಿ ಪವಾಡ ಪುರುಷರಾಗಿದ್ದರು. ಅವರು ಅನೇಕ ಅದ್ಭುತಗಳನ್ನು ಮಾಡಿದ್ದಾರೆ. ಅವರಲ್ಲಿ ಅನಾರೋಗ್ಯ ಮತ್ತು ದುಃಖವನ್ನು ಗುಣಪಡಿಸುವ ಶಕ್ತಿಯಿತ್ತು’ ಎಂದು ತಿಳಿಸಿದರು.
‘ನಿತ್ಯ ಭಕ್ತಿಯಿಂದ ದೇವರ ಪೂಜೆ ಮಾಡಬೇಕು. ಆಧಾತ್ಮದ ಒಲವು ಎಂದು ಹೇಳಿದರು.
ಪ್ರವಚನಗಾರರಾದ ನಿಜಲಿಂಗ ಸಿದ್ದೇಶ್ವರ ಕಿಟ್ಟ ಮಾತನಾಡಿ, ‘ಹಿರಿಯರನ್ನು ಗೌರವಿಸಬೇಕು. ತಂದೆ-ತಾಯಿಯ ಸೇವೆ ಮಾಡಬೇಕು. ಯಾರೊಂದಿಗೂ ವೈಷಮ್ಯ ಬೆಳೆಸಿಕೊಳ್ಳಬಾರದು. ಪರಸ್ಪರ ಪ್ರೀತಿಯಿಂದ
ಬಾಳಬೇಕು’ ಎಂದು ಸಲಹೆ ನೀಡಿದರು
ಭದ್ರೆಶ್ವರ ಮಠದ ಶ್ರೀ ಶಿವುಕುಮಾರ ಸ್ವಾಮಿ ಮಾತನಾಡಿ. ಭದ್ರೆಶ್ವರ ದೃಢವಾದ ನಂಬಿಕೆ ಭಕ್ತಿ ಇಟ್ಟಿದ್ದರೆ ಜೀವನದಲ್ಲಿ ಯಾವುದೇ ಕಷ್ಟ ಬರುವುದಿಲ್ಲ ಎಂದು ನುಡಿದರು
ಕಂಠಯ್ಯ ಸ್ವಾಮಿ, ಗುಂಡಯ್ಯ ಸ್ವಾಮಿ, ಭದ್ರಯ್ಯ ಸ್ವಾಮಿ, ಚನ್ನಮಲಪ್ಪ ಹಜರಗಿ, ಸಂಗಮೇಶ ಹಜರಗಿ, ವೀರೇಶ್ ಬಮಣ್ಣಿ, ಲೋಕೇಶ್ ಕನ್ನಶಟ್ಟಿ, ಮಂಜುನಾಥ, ರೇವಣಪ್ಪ ಭದ್ರಣ್ಣ, ರಾಜಕುಮಾರ ಪಾಟೀಲ, ಜಗನ್ನಾಥ ಜಗದಾಳಿ ಹಾಗೂ ಇತರರು ಹಾಜರಿದ್ದರು.