ತೊಟ್ಟಲೋತ್ಸವ: ಭಜನೆ, ಪ್ರವಚನ
ಸತ್ತೂರು,ಏ 21: ಸತ್ತೂರಿನ ನಾರಾಯಣ ಪಾರಾಯಣ ಬಳಗದ ಆಶ್ರಯದಲ್ಲಿ ಶ್ರೀ ಹನುಮ ಜಯಂತಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಬರುವ ಏಪ್ರಿಲ್ 23ರಂದು, ಮಂಗಳವಾರ ಉದಯಗಿರಿಯಲ್ಲಿರುವ ಡಿ.ಕೆ ಜೋಶಿಯವರ ಮನೆಯಲ್ಲಿ ಸೂರ್ಯೋದಯ 6ಕ್ಕೆ ಶ್ರೀ ಹನುಮಂತ ದೇವರಿಗೆ ತೊಟ್ಟಿಲೋತ್ಸವ ಹಾಗೂ ಸಾಯಂಕಾಲ 5 ಗಂಟೆಗೆ ನಾರಾಯಣಿ ಭಜನಾ ಮಂಡಳಿಯಿಂದ ಭಜನೆ ಮತ್ತು 6 ಗಂಟೆಗೆ ಪಂ. ಭಾರತಿರಮಣ ಆಚಾರ್ಯ ಗಣಾಚಾರಿ ಅವರಿಂದ ವಾಯುದೇವರ ಮಹಿಮೆ ಕುರಿತು ವಿಶೇಷ ಉಪನ್ಯಾಸವನ್ನು ಏರ್ಪಡಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಬಳಗದ ಸಂಚಾಲಕರಾದ ರಘೋತ್ತಮ ಅವಧಾನಿಯವರನ್ನು ಸಂಪರ್ಕಿಸಲು (ಮೋ. 63 61 83 57 10) ಕೋರಲಾಗಿದೆ.