ಮುಂದುವರಿದ ಪ್ರತಿಭಟನೆ
ಮುನವಳ್ಳಿ,ಏ21: ಹುಬ್ಬಳ್ಳಿ ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆಯನ್ನು ಖಂಡಿಸಿ ಪಟ್ಟಣದ ಶ್ರೀ ಪಂಚಲಿಂಗೇಶ್ವರ ವೃತ್ತದಲ್ಲಿ ಸಾರ್ವಜನಿಕರಿಂದ 2ನೇ ದಿನವೂ ಪ್ರತಿಭಟನೆಯು ನಡೆಯಿತು. ಅನೇಕರು ಘಟನೆಯನ್ನು ಖಂಡಿಸಿ ಪ್ರತಿಭಟನೆಯಲ್ಲಿ ಭಾಗವಹಿಸುವ ಮೂಲಕ ಆರೋಪಿತನಿಗೆ ಕಠಿಣ ಶಿಕ್ಷೆಯಾಗಬೇಕೆಂದು ಆಗ್ರಹಿಸಿದರು.
ಡಾ.ನರಸಿಂಹ ಕುಲಕರ್ಣಿ, ಬಿಜೆಪಿ ಮುಖಂಡ ಮಲ್ಲಣ್ಣ ಯಾದವಾಡ, ಬಿಜೆಪಿ ಜಿಲ್ಲಾಧ್ಯಕ್ಷ ಸುಭಾಸಗೌಡ ಪಾಟೀಲ ಹಾಗೂ ಪಂಚನಗೌಡ ದ್ಯಾಮನಗೌಡರ ಮಾತನಾಡಿದರು.
ಡಾ.ನಯನಾ ಬಸ್ಮೆ, ಸೌರವ ಚೋಪ್ರಾ, ಈರಣ್ಣ ಚಂದರಗಿ, ಜಗದೀಶ ಕೌಜಗೇರಿ, ಶೇಖರ ಗೋಕಾವಿ, ನಿಂಗನಗೌಡ ಮಲಗೌಡರ, ಸುಭಾಸಗೌಡ ಗಿದಿಗೌಡರ, ಶ್ರೀಕಾಂತ ಮಲಗೌಡರ, ಪ್ರಕಾಶ ನಲವಡೆ, ಮಲ್ಲೇಶ ಸೂಳೆಬಾಂವಿ, ಅಶೋಕ ಗೋಮಾಡಿ, ಶ್ರೀಕಾಂತ ಮಿರಜಕರ, ಕಲ್ಲಪ್ಪ ನಲವಡೆ, ಇತರರು ಉಪಸ್ಥಿತರಿದ್ದರು.
ಶನಿವಾರದಂದು ನಡೆದ ಎರಡನೇ ದಿನದ ಪ್ರತಿಭಟನೆಗೆ ಮುನವಳ್ಳಿ ಪಟ್ಟಣದ ಜನತೆ ಸಂಪೂರ್ಣ ಸಹಕಾರ ನೀಡಿದ್ದು, ಎಲ್ಲ ಅಂಗಡಿ ಮುಗ್ಗಟ್ಟುಗಳನ್ನು ಸಂಪೂರ್ಣ ಬಂದ್ ಮಾಡಲಾಗಿತ್ತು.