ಮತದಾನ ಜಾಗೃತಿ: ಬೈಕ್ ರ್ಯಾಲಿ
ಗುಳೇದಗುಡ್ಡ,ಏ21: 18 ವರ್ಷ ಮೀರಿದ ಪ್ರತಿಯೊಬ್ಬ ಭಾರತೀಯ ಪ್ರಜೆಯೂ ಕಡ್ಡಾಯವಾಗಿ ಮತದಾನ ಮಾಡಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನವೇ ಒಂದು ದೊಡ್ಡ ಹಬ್ಬ. ಈ ಹಬ್ಬದಲ್ಲಿ ಪ್ರತಿಯೊಬ್ಬ ಮತದಾರ ಪಾಲ್ಗೊಂಡು ಮತ ಚಲಾಯಿಸಬೇಕು ಎಂದು ತಹಶೀಲ್ದಾರ ಮಂಗಳಾ ಎಂ ಹೇಳಿದರು.
ಅವರು ಮತದಾರರಲ್ಲಿ ಜಾಗೃತಿ ಮೂಡಿಸಲು ವಿಶೇಷಚೇತನರು ಶನಿವಾರ ಹಮ್ಮಿಕೊಂಡಿದ್ದ ಬೈಕ್ ರ್ಯಾಲಿ ಉದ್ಘಾಟಿಸಿ ಮಾತನಾಡಿ, ಮತಗಟ್ಟೆಗಳಿಗೆ ಬರಲು ಸಾಧ್ಯವಾಗದೇ ಇರುವ ವಿಕಲಚೇತನರಿಗೆ ಮನೆಯಿಂದಲೇ ಮತಚಲಾಯಿಸಲು ಅವಕಾಶವಿದ್ದು ಇದನ್ನು ಅವರು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಪುರಸಭೆ ಮುಖ್ಯಾಧಿಕಾರಿ ರಾಜೇಶ ಕೆ. ಮಾತನಾಡಿ, ವಿಶೇಷಚೇತನರು ಸುರಿಯುತ್ತಿರುವ ಮಳೆಯಲ್ಲೂ ಮತದಾನ ಜಾಗೃತಿಗಾಗಿ ರ್ಯಾಲಿ ನಡೆಸಿದ್ದು ಇತರರಿಗೆ ಪ್ರೇರಣೆಯಾಗಲಿ, ಎಲ್ಲ ಮತದಾರರೂ ಮೇ.7ರಂದು ನಡೆಯುವ ಮತದಾನದ ಹಬ್ಬದಲ್ಲಿ ಪಾಲ್ಗೊಂಡು ಪ್ರಜಾಪ್ರಭುತ್ವವನ್ನು ಬಲಪಡಿಸಬೇಕು ಎಂದರು.
ಪುರಸಭೆಯಿಂದ ಪ್ರಾರಂಭಗೊಂಡ ವಿಕಲಚೇತನರ ಬೈಕ್ ರ್ಯಾಲಿ ಕಂಠಿ ಪೇಟೆ, ಸರಾಫ್ ಬಜಾರ, ಗಚ್ಚಿನಕಟ್ಟಿ, ಚೌಬಜಾರ, ಅರಳಿಕಟ್ಟಿ, ಪವಾರ ಕ್ರಾಸ್, ಬಸ್‍ನಿಲ್ದಾಣ ಮೂಲಕ ಹಾಯ್ದು ಹಾದಿಬಸವೇಶ್ವರ ದೇವಸ್ಥಾನ ತಲುಪಿತು. ಜಿಪಂ ಯೋಜನಾಧಿಕಾರಿ ಡಾ. ಪುನೀತ್ ಮತದಾರರಿಗೆ ಪ್ರತಿಜ್ಞಾವಿಧಿ ಬೋಧಿಸಿದರು.
ಈ ಸಂದರ್ಭದಲ್ಲಿ ವಿಕಲಚೇತನರ ಮುಖಂಡ ಹುಚ್ಚೇಶ ಯಂಡಿಗೇರಿ, ಸಿಫ್ ರಾಯಬಾರಿ ಸಿದ್ದಾರೂಢ ಕೊಪ್ಪದ, ತಾಪಂ ಇಓ ಮಲ್ಲಿಕಾರ್ಜುನ ಬಡಿಗೇರ, ವಿರೂಪಾಕ್ಷ ರಾಂಪೂರ, ಎಂ.ಆರ್.ಡಬ್ಲೂ ಮಹಾಂತೇಶ ಪಾಟೀಲ, ಯುಆರ್‍ಡಬ್ಲೂ ಹುಚ್ಚಮ್ಮ ಭಂಗಿ, ಪರಶುರಾಮ ಕಲಾಲ, ಮಾರ್ಕಂಡೇಯ ಪಲಮಾರಿ, ಭದ್ರಪ್ಪ ಬಸರಕೋಡ, ಗದಿಗೆಪ್ಪ ನಿಲೂಗಲ್ಲ, ವಿಜಯ ಅಲದಿ, ಮಹ್ಮದಹುಸೇನ ದೋಟೆಗಾರ, ಬಾಬು ತಟಗಾರ, ಶಾರದಾ ಮಡಿವಾಳರ, ಮೌನೇಶ ಬಡಿಗೇರ, ಹನಮಂತ ಭಜಂತ್ರಿ, ವಿಆರ್‍ಡಬ್ಲೂಗಳಾದ ಯಮನಪ್ಪ ಕಂಬಾರ, ಮಂಜುನಾಥ ಕಮತರ, ರಾಮನಗೌಡ ಗೌಡರ, ಶಿವಾಜಿ ಚವ್ಹಾಣ, ಬೀಮಶಿ ನೀಲನ್ನವರ, ರಂಗಪ್ಪ ಓಗಿ, ಹನಮಂತ ಮಡಿವಾಳರ, ಸಂತೋಷ ಯರಗುಂಟಿ, ನಾರಾಯಣ ಮಾಗಿನಹಳ್ಳಿ, ಅಶೋಕ ಅಳ್ಳೆಪ್ಪನವರ, ಕೆ.ಎನ್. ಭಗವತಿ, ಭೀಮಶಿ ನಡುವಿನಮನಿ, ಕೋನಮ್ಮ ಜಮ್ಮನಕಟ್ಟಿ ಮತ್ತಿತರರು ಇದ್ದರು.