ಪಕ್ಷ ಕರೆದರೆ ಮಂಡ್ಯ ಪ್ರಚಾರಕ್ಕೆ
ಸಂಜೆವಾಣಿ ನ್ಯೂಸ್
ಮೈಸೂರು:ಏ.21:- ಮಂಡ್ಯ ಪ್ರಚಾರಕ್ಕೆ ಪಕ್ಷ ಸೂಚನೆ ಅಥವಾ ಎನ್ ಡಿಎ ಮೈತ್ರಿ ಅಭ್ಯರ್ಥಿ ಕರೆದರೆ ಖಂಡಿತ ಹೋಗುತ್ತೇನೆ. ನನ್ನ ಸೀಟು ಬಿಟ್ಟು ಕೊಟ್ಟು ಪಕ್ಷ ಸೇರಿದ್ದೇನೆಂದರೆ ನನ್ನ ಬೆಂಬಲ ಇದೇ ಅಂತಾ ತಾನೇಂದೂ ಸಂಸದೆ ಸುಮಲತಾ ಅಂಬರೀಶ್ ಹೇಳಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಪರ ಪ್ರಚಾರಕ್ಕೆ ಹೋಗುವ ಸಂಬಂಧ ಪ್ರತಿಕ್ರಿಯಿಸಿ, ಮಂಡ್ಯದಲ್ಲಿ ನಾನು ಹಾಲಿ ಸಂಸದೆಯಾಗಿದ್ದು, ಎನ್‍ಡಿಎ ಅಭ್ಯರ್ಥಿಗೆ ನನ್ನ ಸ್ಥಾನ ಬಿಟ್ಟುಕೊಟ್ಟು ಬಿಜೆಪಿ ಸೇರಿದ್ದೇನೆ. ಇದರ ಅರ್ಥ ಮೈತ್ರಿ ಅಭ್ಯರ್ಥಿಗೆ ನನ್ನ ಸಂಪೂರ್ಣ ಸಹಕಾರ ಇದ್ದಂತೆ ಎಂದು ವಾರದ ಹಿಂದೆಯಷ್ಟೇ ಬಜೆಪಿ ಸೇರಿದ್ದೇನೆ. ಪಕ್ಷ ನನಗೆ ಎಲ್ಲಿ ಪ್ರಚಾರ ಮಾಲು ಹೇಳುತ್ತದೆಯೋ ಅಲ್ಲಿ ಕೆಲಸ ಮಾಡುತ್ತೇನೆ ಎಂದರು.
ನಾನು ಗೆದ್ದಿರುವ ಸೀಟನ್ನು ಮೈತ್ರಿ ಅಭ್ಯರ್ಥಿಗೆ ಬಿಟ್ಟುಕೊಟ್ಟಾಗಲೇ ಸಹಕಾರ ಕೊಟ್ಟಿದ್ದೇನೆ ಎಂದರ್ಥ. ಯಾರು ತಾವು ಗೆದ್ದಿರುವ ಸೀಟನ್ನು ಬಿಟ್ಟು ಕೊಡಲ್ಲ ನಾನು ಬಿಟ್ಟು ಕೊಟ್ಟಿದ್ದೇನೆ. ನಾನು ಯಾವಾಗ ಬಿಜೆಪಿ ಪಕ್ಷ ಸೇರ್ಪಡೆಯಾದೆ, ಆವಾಗಲೇ ಎನ್‍ಡಿಎ ಅಭ್ಯರ್ಥಿ ಪರ ಇದ್ದೇನೆ ಎಂದರ್ಥ ಎಂದು ಹೇಳಿದರು.
ಮಂಡ್ಯ ಭಾಗದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ನಟ ದರ್ಶನ್ ಪ್ರಚಾರ ನಡೆಸುತ್ತಿರುವುದಕ್ಕೆ ಪ್ರತಿಕ್ರಿಯಿಸಿ, ದರ್ಶನ್ ಯಾರಿಗೆ ಬೆಂಬಲ ನೀಡಬೇಕು ಎಂಬುದು ಅವರಿಗೆ ಬಿಟ್ಟ ವಿಚಾರ. ಅವರಿಗೆ ಸಹಕಾರ ನೀಡಿದವರ ಪರವಾಗಿ ನಿಲ್ಲುತ್ತಾರೆ. ದರ್ಶನ್‍ಗೆ ಪ್ರಚಾರ ಕಾರ್ಯದಲ್ಲಿ ಭಾಗಿಯಾಗುವಂತೆ ಹೇಳಲ್ಲ. ನಾನು ಅಭ್ಯರ್ಥಿಯಾಗಿದ್ದಾಗಲೂ ದರ್ಶನ್‍ಗೆ ಬಾ ಎಂದಿರಲಿಲ್ಲ. ಅವರೇ ಬಂದು ನನ್ನ ಪರವಾಗಿ ಪ್ರಚಾರ ಮಾಡಿದ್ದರು ಎಂದರು.
ಸುಮಮ್ಮ ಏನೇ ಕೆಲಸ ಹೇಳಿದರೂ ಮಾಡುತ್ತೇನೆ ಎಂದು ದರ್ಶನ್ ಹೇಳಿದ್ದರು. ಅದು ನನ್ನ ವಿಚಾರದಲ್ಲಿ ಮಾತ್ರವೇ ಹೊರತು ಬೇರೆಯವರ ವಿಚಾರದಲ್ಲಿ ಅಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ದರ್ಶನ್ ಅವರು ಮಂಡ್ಯದಲ್ಲಿ ಕಾಂಗ್ರೆಸ್, ಬಿಜೆಪಿ ಅಭ್ಯರ್ಥಿಗಳ
ರರ್ ಪರ ಪ್ರಚಾರ ಮಾಡಿದ್ದರು. ಅವರು ಯಾವ ಅÀ?ಯರ್ಥಿ ಪರ ಪ್ರಚಾರಕ್ಕೆ ಹೋಗುತ್ತಾರೆ ಎಂಬುದು ಅವರಿಗೆ ಬಿಟ್ಟ ವಿಚಾರ ಎಂದರು. ಚಾರಿತ್ರ?ಯವನ್ನು ಹತ್ಯೆ ಮಾಡಲಾಗುತ್ತಿದೆ: ಹುಬ್ಬಳ್ಳಿಯಲ್ಲಿ ನೇಹಾ ಹತ್ಯೆ ಪ್ರಕರಣಕ್ಕೆ ಪ್ರತಿಕ್ರಿಯಿಸಿದ ಅವರು, ಕಳೆದೊಂದು ದಿನದಿಂದ ನಾನು ಈ ವಿಚಾರವನ್ನ ಗಮನಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಒಂದಷ್ಟು ÉÇೀಟೋಗಳು ಹರಿದಾಡುತ್ತಿವೆ. ಈಗಾಗಲೇ ಆಕೆಯನ್ನು ಹತ್ಯೆ ಮಾಡಲಾಗಿದೆ. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಆಕೆಯ ಚಾರಿತ್ರ?ಯವನ್ನು ಹತ್ಯೆ ಮಾಡುತ್ತಿರುವುದು ನೋವಿನ ಸಂಗತಿ ಎಂದರು ಯಾರೊ ಒಬ್ಬರು ಮಾಡಿದ ತಪ್ಪಿಗೆ ಇಡೀ ಸಮುದಾಯವನ್ನೇ ತಪ್ಪು ಎನ್ನುವುದು ಸರಿಯಲ್ಲ. ಆದರೆ, ಒಂದು ಸಮುದಾಯವನ್ನು ಮೆಚ್ಚಿಸಲು ಘಟನೆಯನ್ನು ಸಮರ್ಥನೆ ಮಾಡಿಕೊಳ್ಳುವುದು ಳ್ಳುವುದು ತಪ್ಪು. ವ್ಯಕ್ತಿಯೋರ್ವ ವಿÁನಸೌÀದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿದ್ದಾಗ ಎïಎಸ್‍ಎಲ್ ವರದಿ ಬರುವ ಮುನ್ನವೇ ಕೆಲವರು ಸಮರ್ಥನೆ ಮಾಡಿಕೊಂದ್ದರು. ಅದರಂತೆ ಈ ಪ್ರಕರಣದಲ್ಲೂ ನೇಹಾ ಕೊಲೆಯನ್ನು ವೈಯಕ್ತಿಕ ಕಾರಣಕ್ಕೆ ಆಗಿರುವುದು ಎಂದು ಹೇಳಲಾಗುತ್ತಿದೆ. ಇದು ಸರಿಯಲ್ಲ. ರಾಜ್ಯ ಸರ್ಕಾರ ಕೂಡಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು. ವೈಯಕ್ತಿಕ ಕಾರಣಕ್ಕೆ ಎಂದು ಎಲ್ಲರೂ, ಎಲ್ಲರನ್ನು ಹತ್ಯೆ ಮಾಡಲು ಸಾÀ?ಯವಿಲ್ಲ. ವೈಯಕ್ತಿ, ಸಮುದಾಯದ ಕೊಲೆ ಎಂದು ಕಾನೂನಿನಲ್ಲಿ ಇಲ್ಲ. ಘಟನೆಯಲ್ಲಿ `Àರ್ಮವನ್ನು ಎಳೆ ತರುವುದು ತಪ್ಪು. ಆದರೆ, ಒಂದು ಸಮುದಾಯವನ್ನು ಮೆಚ್ಚಿಸಲು ಘಟನೆಯನ್ನು ಸಮರ್ಥಿಸಿಕೊಳ್ಳುತ್ತಿರುವುದೂ ತಪ್ಪು.
ಸುದ್ದಿಗೋಷ್ಠಿಯಲ್ಲಿ ಶಾಸಕ ಟಿ.ಎಸ್. ಶ್ರೀವತ್ಸ, ಬಿಜೆಪಿ ನಗರಾಧ್ಯಕ್ಷ ಎಲ್. ನಾಗೇಂದ್ರ, ಮುಖಂಡರಾದ ಮೋಹನ್ ಕುಮಾರ್, ಡಾ. ವಸಂತ್ ಕುಮಾರ್, ನಗರ ಪ್ರಧಾನ ಕಾರ್ಯದರ್ಶಿ ಕೇಬಲ್ ಮಹೇಶ್, ಮಹೇಶ್ ರಾಜೇ ಅರಸ್, ಮೋಹನ್ ಇದ್ದರು.