ಸಿಎಂ ಸಿದ್ದರಾಮಯ್ಯ ರಾಜೀನಾಮೆ ಪ್ರಶ್ನೆಯೇ ಇಲ್ಲ: ಶಾಸಕ ಶ್ರೀನಿವಾಸ್
ಚೇಳೂರು, ಸೆ. ೨೧- ಮುಡಾ ಪ್ರಕರಣ ಅಲ್ಲ, ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ರಾಜೀನಾಮೆ ಕೊಡುವ ಪ್ರಶ್ನೇಯೇ ಇಲ್ಲ. ಮುಂದಿನ ಐದು ವರ್ಷಗಳು ಅವರೇ ಮುಖ್ಯಮಂತ್ರಿಯಾಗಿರುತ್ತಾರೆ ಎಂದು ಶಾಸಕ ಎಸ್. ಆರ್. ಶ್ರೀನಿವಾಸ್ ಹೇಳಿದರು.
ಗುಬ್ಬಿ ತಾಲ್ಲೂಕಿನ ಹಾಗಲವಾಡಿ ಹೋಬಳಿಯ ಶೆಟ್ಟಿಹಳ್ಳಿಯಲ್ಲಿ ಸುಮಾರು ೧ ಕೋಟಿ ರೂ. ವೆಚ್ಚದ ಸಿಸಿ ರಸ್ತೆ ಹಾಗೂ ೫೦ ಲಕ್ಷದ ಜಲ ಜೀವನ್ ಮೀಷನ್ ಕಾಮಾಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಹಾಗಲವಾಡಿ ಕೆರೆಗೆ ಎತ್ತಿನಹೊಳೆ ಕಾಮಾಗಾರಿ ನಡೆಯುತ್ತಿದೆ. ಇನ್ನು ೨-೩ ತಿಂಗಳಲ್ಲಿ ಹಾಗಲವಾಡಿ ಕೆರೆಗೆ ನೀರು ಬೀಡಲಾಗುತ್ತದೆ. ಮಠ ಗಂಗಯ್ಯನಪಾಳ್ಯ ಕೆರೆಗೆ ಟೆಂಡರ್ ಕರೆಯಲಾಗಿದೆ. ಮುಖ್ಯಮಂತ್ರಿಗಳ ಗಮನಕ್ಕೂ ತಂದಿದ್ದೇನೆ. ಕೆಲವು ಗೊಂದಲದಿಂದ ತಡವಾಗಿದೆ. ಮುಖ್ಯಮಂತ್ರಿಗಳು ಸಭೆಯಲ್ಲಿ ಒಪ್ಪಿಗೆ ಕೊಟ್ಟ ತಕ್ಷಣ ಕೆಲಸ ಮಾಡುತ್ತೇವೆ ಎಂದರು.
ಮುನಿರತ್ನ ಅವರು ಜಾತಿ ಹಿಡಿದು ಮಾತನಾಡುವುದು ತಪ್ಪು. ಮಹಿಳೆಯರ ವಿರುದ್ದ ಅವಹೇಳನಕಾರಿಯಾಗಿ ಮಾತನಾಡುವುದೂ ಸಹ ತಪ್ಪು, ಅವರ ವಿರುದ್ದ ಕ್ರಮ ಆಗುತ್ತದೆ ನಾವು ಕೂಡ ಮುಖ್ಯಮಂತ್ರಿ ಸಿದ್ದರಾಮಯ್ಯ ನವರಿಗೆ ದೂರು ನೀಡದೇವೆ. ಮುಂದಿನ ದಿನಗಳಲ್ಲಿ ಶಿಕ್ಷೆಯಾಗುತ್ತದೆ ಎಂದರು.
ಸರ್ಕಾರದಿಂದ ಈಗ ತಾನೇ ಅನುದಾನ ಬಿಡುಗಡೆಯಾಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನ ನೇತೃತ್ವದ ಸರ್ಕಾರ ರಾಜ್ಯದಲ್ಲಿ ಉತ್ತಮ ಆಡಳಿತ ನೀಡುತ್ತಿದೆ. ಯಾವುದೇ ಗ್ಯಾರಂಟಿಗಳು ನಿಲ್ಲುವುದಿಲ್ಲ ಸರ್ಕಾರ ಸದೃಢವಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಜಯಲಕ್ಷ್ಮಮ್ಮ, ಉಪಾಧ್ಯಕ್ಷೆ ರತ್ನಮ್ಮ, ಗ್ರಾಮ ಪಂಚಾಯ್ತಿ ಸದಸ್ಯರಾದ ರಾಘವೇಂದ್ರ, ಶಂಕರಪ್ಪ, ದಯಾನಂದ್, ಮುಖಂಡರಾದ ಕೊಟ್ಟಯ್ಯ, ಮಂಜುನಾಥ್,ಮಲ್ಲೇಶ್, ಈಶಣ್ಣ, ಗುತ್ತಿಗೆದಾರ ರಮೇಶ್, ಪಿಡಿಓ ತಿಪ್ಪೇಸ್ವಾಮಿ, ಎಇಇ ನಟರಾಜು ಮತ್ತಿತರರು ಉಪಸ್ಥಿತರಿದ್ದರು.