ಕೋರ್ಟ್ ಆದೇಶ ಉಲ್ಲಂಘನೆಗೆ ಪೊಲೀಸರ ಸಹಕಾರ
ಕೋಲಾರ,ಸೆ,೨೧:ನಮ್ಮ ಕುಟುಂಬಕ್ಕೆ ಸಂಬಂಧಿಸಿ ಪವತಿವಾರು ಜಮೀನಿಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದ್ದು ನ್ಯಾಯಾಲಯವು ಯಥಾಸ್ಥಿತಿ ಕಾಪಾಡಲು ಆದೇಶಿಸಿ ವಿಚಾರಣೆ ಹಂತದಲ್ಲಿನ ಜಮೀನು ಯಾಥಾಸ್ಥಿತಿ ಕಾಪಾಡಲು ಪೊಲೀಸ್ ಇಲಾಖೆ ಸಹಕಾರ ನೀಡದೆ ಆದೇಶ ಪತ್ರ ನೀಡಿದರೂ ಸ್ವೀಕರಿಸದೆ ತಮಗೆ ಗೊತ್ತಿಲ್ಲ ಎಂದು ವಿರೋಧಿಗಳಿಗೆ ಅನುವುಂಟು ಮಾಡುತ್ತಿದ್ದಾರೆ ಎಂದು ಮಾಲೂರು ತಾಲ್ಲೂಕಿನ ಲಕ್ಕೂರು ಗ್ರಾಮದ ಮುನಿರಾಜು ದೂರಿದರು,
ನಗರದ ಪತ್ರಕರ್ತರ ಭವನದಲ್ಲಿನ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ ಲಕ್ಕೂರಿನ ಸರ್ವೆನಂ ೨೩೭ಗೆ ಸಂಬಂಧಿಸಿದಂತೆ ೧-೦೭-೦೮ ಎಕರೆ ಜಮೀನು ಫವತಿವಾರು ಆಸ್ತಿಯಾಗಿದ್ದು ಇದರ ವಾರಸುದಾರ ೪ ಮಂದಿಯ ಭಾಗವಾಗಿದೆ, ಅದರೆ ಈ ಆಸ್ತಿಯನ್ನು ನಮ್ಮ ಚಿಕ್ಕಪ್ಪನವರ ಹೆಸರಿನಲ್ಲಿ ಖಾತೆ ಹಾಗೂ ಪಹಣಿಗಳು ಮಾಡಿ ಕೊಡಲಾಗಿದೆ.
ಈ ಆಸ್ತಿಯಲ್ಲಿ ಬೆಂಗಳೂರು-ಚೆನ್ನೈ ಎಕ್ಸಪ್ರೆಸ್ ಹೈ-ವೇ ಕಾಮಗಾರಿಗಳಿಗೆ ೨೩೧೦ ಚದರ ಮೀಟರ್ ಇದ್ದು ಇದರ ಮೌಲ್ಯ ೯೦ ಲಕ್ಷ ರೂಗಳಾಗಿದ್ದು ಈ ಪೈಕಿ ೩/೪ ಭಾಗದ ೬೯ ಲಕ್ಷ ರೂ ಠೇವಣೆಯನ್ನು ನ್ಯಾಯಾಲಯದಲ್ಲಿ ಠೇವಣಿ ಮಾಡುವುದಾಗಿ ತಿಳಿಸಿದ್ದರು
ನ್ಯಾಯಾಲಯದಲ್ಲಿ ತಡೆಯಾಜ್ಞೆಯನ್ನು ತೆರವು ಮಾಡಲು ಹಾಗೂ ೫೦೦ ಮೀಟರ್ ಕಾಮಗಾರಿಗೆ ಅನುಮತಿಸಲು ಮನವಿ ಸಲ್ಲಿಸಿದ್ದವರು ತಮ್ಮ ದಾವೆಯನ್ನು ವಾಪಸ್ ಪಡೆದು ನಂತರದಲ್ಲಿ ಹೈ.ವೇ, ಕಂದಾಯ ಇಲಾಖೆ ಹಾಗೂ ನಮ್ಮ ಚಿಕ್ಕಪ್ಪನವರು ಶಾಮೀಲಾಗಿ ಹಣವನ್ನು ನ್ಯಾಯಾಲಯದಲ್ಲಿ ಠೇವಣೆ ಮಾಡದೆ ಹಣವನ್ನು ನೇರವಾಗಿ ನಮ್ಮ ಚಿಕ್ಕಪ್ಪನವರ ಖಾತೆಗೆ ಮೂರು ಭಾಗದ ಹಣ ಜಮಾ ಮಾಡಲಾಗಿದೆ ಎಂದು ಆರೋಪಿಸಿದರು.
ಪೊಲೀಸರು ಈ ಸಮಸ್ಯೆಯನ್ನು ನ್ಯಾಯಾಲಯದಲ್ಲಿ ಬಗೆಹರಿಸಿ ಕೊಳ್ಳಿ ಎಂದಿದ್ದಾರೆ ಅದರೆ ನ್ಯಾಯಾಲಯವು ನೀಡಿದ್ದ ಯಾಥಾಸ್ಥಿತಿ ಕಾಪಾಡುವ ಆದೇಶವನ್ನು ಪಾಲಿಸಲು ಸಹಕಾರ ನೀಡದೆ ಮತ್ತೆ ನ್ಯಾಯಾಲಯಕ್ಕೆ ಹೋಗಿ ಎಂದು ಹೇಳುಂತ ನೈತಿಕತೆ ಅವರಿಗೆ ಇದೆಯೇ ಎಂದು ಪ್ರಶ್ನಿಸಿದ ಅವರು ಪೊಲೀಸ್ ಇಲಾಖೆ, ಕಂದಾಯ ಇಲಾಖೆ, ಹಾಗೂ ಹೈ-ವೇ ಅಧಿಕಾರಿಗಳು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ನಮಗೆ ನ್ಯಾಯಾ ದೊರಕಿಸಿ ಕೊಡ ಬೇಕೆಂದು ಮನವಿ ಮಾಡಿದರು.