ಮುನಿರತ್ನ ವಿರುದ್ಧ ದ್ವೇಷದ ರಾಜಕಾರಣ ಮಾಡುಲ್ಲ
ಕೋಲಾರ,ಸೆ,೨೧- ನಾವುದ್ವೇಷದ ರಾಜಕಾರಣ ಮಾಡುತ್ತಿಲ್ಲ, ಆ ಹೆಣ್ಣು ಮಗಳಿಗೆ ಕೀಟಲೆ ಮಾಡಿ ಎಂದು ನಾವು ಹೇಳಿಕೊಟ್ಟಿದ್ದವಾ ಎಂದು ಉಸ್ತುವಾರಿ ಸಚಿವ ಬಿ.ಎಸ್.ಸುರೇಶ್ ಶಾಸಕ ಮುನಿರತ್ನ ವಿರುದ್ದ ಬಿಜೆಪಿ ಆರೋಪಕ್ಕೆ ತಿರುಗೇಟು ನೀಡಿದರು.
ನಗರದ ಜಿಪಂ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಶಾಸಕ ಮುನಿರತ್ನ ವಿರುದ್ದ ನಾವು ದ್ವೇಷದ ರಾಜಕಾರಣ ಮಾಡುತ್ತಿಲ್ಲ, ಅತ್ಯಾಚಾರ ಪ್ರಕರಣ ದಾಖಲು ಬೆಳಗ್ಗೆ ಪತ್ರಿಕೆ ನೋಡಿ ವಿಚಾರ ತಿಳಿಯಿತು, ಅಲ್ಲದೆ ದಲಿತ ಮತ್ತು ಒಕ್ಕಲಿಗ ಸಮುದಾಯಕ್ಕೆ ಜಾತಿ ನಿಂದನೆ ಮಾಡಿದ್ದಾರೆ ಅವರನ್ನ ನ್ಯಾಯಾಲಯ ವಶಕ್ಕೆ ಪಡೆದಿದೆ, ಹೆಣ್ಣು ಮಗುವೊಂದು ಅತ್ಯಾಚಾರಾದ ಅರೋಪ ಮಾಡಿದೆ ಅದಕ್ಕೆ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು.
ದಲಿತ, ಒಕ್ಕಲಿಗ ಗುತ್ತಿಗೆದಾರನಿಗೆ ಜಾತಿ ಹೆಸರಲ್ಲಿ ನಿಂದಸಲು ನಾವು ಹೇಳಿಕೊಟ್ಟಿದ್ರಾ ಜಾತಿ ಹೆಸರೇಳಿ ಬೈದಿದಕ್ಕೆಲ್ಲಾ ರಾಜಕೀಯ ಅನ್ನೋದಕ್ಕೆ ಆಗುತ್ತಾ ಎಂದರಲ್ಲದೆ ಕಾಂಗ್ರೆಸ್‌ನ ಯಾವುದೇ ಶಾಸಕರ ವಿರುದ್ದ ಅಟ್ರಾಸಿಟಿ ಇದಿಯಾ ಯಾವುದೇ ಪಕ್ಷದ ಶಾಸಕರ ಜಾತಿ ನಿಂದನೆ ಆಡಿಯೋ ಅಥವಾ ವಿಡಿಯೋ ಇದ್ದರೆ ಹೇಳಿ ಎಂದು ಸವಾಲು ಹಾಕಿದರು.
ಬಿಜೆಪಿ ಸುಮ್ಮನೆ ಗಾಳಿಯಲ್ಲಿ ಗುಂಡು ಹೊಡೆಯುತ್ತಿದೆ ಇಷ್ಟು ದಿನ ಇಲ್ಲದ ಪ್ರಕರಣಗಳು ಹೀಗೇಕೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಮುನಿ ಈಗ ಬೈದಿರೋದಕ್ಕೆ ಈಗ ಪ್ರಕರಣ ದಾಖಲಾಗಿದೆ ಪ್ರಕರಣ ತನಿಖೆ ಹಂತದಲ್ಲಿದೆ ಧ್ವನಿ ಕುರಿತು ಎಫ್‌ಎಸ್ ಎಲ್ ವರದಿ ಬಂದ ಬಳಿಕ ತೀರ್ಮಾನ ಆಗಲಿದೆ ಎಂದರಲ್ಲದೆ, ಅಲ್ಲದೆ ನಾಗಮಂಗಲ ಪ್ರಕರಣ ಎನ್‌ಐಎ ತನಿಖೆಗಿಂತ ನಮ್ಮ ಪೊಲೀಸರೆ ಸಮರ್ಥರು ಸಾವಿರಾರು ಮಂದಿ ಪೊಲೀಸರಿದ್ದಾರೆ ಅಲ್ಲಿರುವವರು ಸಹ ನಮ್ಮ ಪೊಲೀಸರೆ ಐಎಎಸ್, ಐಪಿಎಸ್ ಸಮರ್ಥಿರಿದ್ದಾರೆ ಎಂದು ತಿಳಿಸಿದರು.
ನಾಗಮಂಗಲದಲ್ಲಿ ಕೇರಳ ಮೂಲದವ ಅಲ್ಲೆ ೨೦ ವರ್ಷದಿಂದ ನೆಲೆಸಿದ್ದಾನೆ ಇದು ಭಾರತ ದೇಶ ಯಾರು ಎಲ್ಲಿ ಬೇಕಾದರು ಇರಬಹುದು, ಯಾರೂ ತಪ್ಪು ಮಾಡಿದ್ರೆ ಬಿಡುವ ಪ್ರಸ್ತಾಪ ಇಲ್ಲ ಕೋಮುಗಲಭೆ ಸೃಷ್ಟಿಸಿದವರನ್ನ ನೇಣಿಗೆ ಹಾಕಬೇಕು ಎಂದರು.
.