ನೇಹಾ ಹತ್ಯ ಖಂಡಿಸಿ ತಾಳಿಕೋಟೆಯಲ್ಲಿ ಬೃಹತ್ ಪ್ರತಿಭಟನೆ
ತಾಳಿಕೋಟೆ:ಏ.21: ಹುಬ್ಬಳ್ಳಿಯ ಕಾಲೇಜ್ ಕ್ಯಾಂಪಸ್‍ನಲ್ಲಿ ನೇಹಾ ಹಿರೇಮಠ ವಿಧ್ಯಾರ್ಥಿಯ ಹತ್ಯಯನ್ನು ಖಂಡಿಸಿ ತಾಳಿಕೋಟೆ ಪಟ್ಟಣದಲ್ಲಿ ವಿವಿಧ ಹಿಂದೂ ಪರ ಸಂಘಟನೆಗಳ ನೇತೃತ್ವವಲ್ಲಿ ಶನಿವಾರರಂದು ರಸ್ತಾ ರೋಕೋ ಚಳುವಳಿಯ ಮೂಲಕ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಜಮಾವಣೆಗೊಂಡ ಸಾವಿರಾರು ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಗಂಟೆಕಾಲ ವಾಹನ ಸಂಚಾರವನ್ನು ತಡೆದು ಮಾನವ ಸರಪಳಿ ನಿರ್ಮಿಸಿ ರಸ್ತಾ ರೋಕೋ ಚಳುವಳಿಯನ್ನು ನಡೆಸಿದರು.
ಈ ಪ್ರತಿಭಟನಾ ನೇತೃತ್ವ ವಹಿಸಿದ ಭಾರತೀಯ ಜನತಾ ಪಕ್ಷದ ಜಿಲ್ಲಾ ಅಧ್ಯಕ್ಷ ಆರ್.ಎಸ್.ಪಾಟೀಲ(ಕೂಚಬಾಳ) ಅವರು ಮಾತನಾಡಿ ಹಿಂದೂ ಸಮಾಜದ ನೇಹಾ ಹಿರೇಮಠ ಎಂಬ ವಿಧ್ಯಾರ್ಥಿನಿ ಕಾಲೇಜ್‍ಗೆ ಹೋದವಳು ಜೀವಂತವಾಗಿ ಮನೆಗೆ ಬಂದಿಲ್ಲಾವೆಂದರೆ ನಮ್ಮ ರಾಜ್ಯದಲ್ಲಿಯ ಕಾನೂನು ಸುವ್ಯವಸ್ಥೆ ಎಷ್ಟು ಅದಗೆಟ್ಟಿದೆ ಎಂಬುದು ತೋರಿಸುತ್ತದೆ ಒಬ್ಬ ಗ್ರಹ ಮಂತ್ರಿ ಪರಮೇಶ್ವರ ಹೇಳತಾರೆ ಅವರ ವಯಕ್ತಿಕ ಕಾರಣದಿಂದ ಹೇಳಿದರೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೇಳತಾರೆ ಅವರು ಪ್ರೀತಿಯ ಬಲೆಯಲ್ಲದ್ದರು ಹೀಗಾಗಿ ಅದು ಆ ಘಟನೆ ನಡೆದಿದೆ ಎಂದು ಹೇಳುತ್ತಿದ್ದಾರೆ ಅವರಿಗೆ ನಾಚಿಗೆ ಆಗಬೇಕು ಅವರ ಮನೆಯ ಹೆಣ್ಣು ಮಗಳಿಗೆ ಈ ಗತಿ ಬಂದಿದ್ದರೆ ಇದೇ ಮೃದು ದೋರಣೆ ಅನುಸರಿಸುತ್ತಿದ್ದೇರೇನೋ ಎಂದು ಪ್ರಶ್ನೀಸಿದ ಅವರು ರಾಜ್ಯದಲ್ಲಿರುವ ಕಾಂಗ್ರೇಸ್ ಸರ್ಕಾರ ಮತ್ತು ಮುಖ್ಯಮಂತ್ರಿಗಳು, ಸಚಿವರು ನಾಮರ್ದರಾಗಿದ್ದಾರೆಂದು ಹೇಳಿದ ಅವರು ನಾನು ಒಬ್ಬ ಪಕ್ಷದ ವ್ಯಕ್ತಿಯಾಗಿ ಬಂದಿಲ್ಲಾ ಈ ದೇಶದ ಪ್ರಜೆಯಾಗಿ ಮಾನವೀಯ ವ್ಯಕ್ತಿಯಾಗಿ ಈ ಪ್ರತಿಭಟನೆಯಲ್ಲಿ ಬಂದಿದ್ದೇನೆ ಗೃಹ ಮಂತ್ರಿ ಪರಮೇಶ್ವರರಿಗೆ ನಾಚಿಗೆ ಬರಬೇಕು ವಯಕ್ತಿಕ ಕಾರಣಕ್ಕಾಗಿ ಘಟನೆ ನಡೆದಿದೆ ಎಂದು ಆ ಕುಟುಂಭದ ಮಾನವನ್ನು ಹರಾಜಕ್ಕೆ ಹಾಕಲಿಕ್ಕೆ ಹೊರಟಿದ್ದಾರೆ ಈ ಹಿಂದೆ ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಾಗಿದ್ದಾಗ 22 ಜನರ ಹಿಂದೂಗಳ ಹತ್ಯವಾಯಿತು ಕೆಜೆ ಹಳ್ಳಿ ಡಿಜೆ ಹಳ್ಳಿ ಗಲಾಟೆಯಲ್ಲಿ ನಿಮ್ಮದೇ ಪಕ್ಷದ ಶಾಸಕನ ಮನೆ ಹೊಕ್ಕು ಹೊಡೆದರು ಅಂತವರ ಮೇಲಿನ ಎಲ್ಲ ಕೇಸ್‍ಗಳನ್ನು ವಾಪಾಸ್ ಪಡೆದುಕೊಂಡಿದ್ದೀರಿ ಎಸ್‍ಡಿಪಿಐ ಸಂಘಟನೆ ಇಡೀ ದೇಶಕ್ಕೆ ಮಾರಕವಾಗಿರತಕ್ಕಂತಹ ಸಂಘಟನೆ ಅಂತಹ ಸಂಘಟನೆಯಲ್ಲಿರುವ ಕೇಸ್‍ಗಳನ್ನು ವಾಪಸ್ ಪಡೆದುಕೊಂಡಿದ್ದಾರೆ ಕುಕ್ಕರ ಬಾಂಬ್ ಬ್ಲಾಸ್ಟ್ ಮಾಡಿದವರನ್ನು ರಕ್ಷಣೆ ಮಾಡಿದ್ದಾರೆ ಕೇವಲ ಓಟ ಬ್ಯಾಂಕ್‍ಗೋಸ್ಕರ ಬಯೋತ್ಪಾದಕರನ್ನು ರಕ್ಷಣೆ ಮಾಡುವಂತಹ ಕೆಲಸ ಕಾಂಗ್ರೇಸ್ ಮಾಡುತ್ತಿದೆ ಎಂದು ಆರೋಪಿಸಿದ ಅವರು ಬೆಳಗಾವಿ ಜಿಲ್ಲೆಯಲ್ಲಿ ಜೈನ್ ಮುನಿಯ ಹತ್ಯ ಆಯಿತು ವಾಹನದಲ್ಲಿ ಹೊರಟಾಗ ಜೈಶ್ರೀರಾಮ ಎಂದು ಘೋಷಣೆ ಕೂಗಬಾರದು ಎಂದು ಹೇಳುತ್ತಾರೆ ನಾವು ತಾಲಿಬಾನ್‍ದಲ್ಲಿದಿಯೋ ಪಾಕಿಸ್ಥಾನದಲ್ಲಿಯೋ ಭಾರತದಲ್ಲಿದಿಯೋ ತಿಳಿಯದಂತಾಗಿದೆ ನೇಹಾ ಹತ್ಯದಿಂದ ಕುಟುಂಭಕ್ಕೆ ಆಗಿರುವ ಅನ್ಯಾಯ ಸರಿಪಡಿಸುವವರೆಗೂ ನಮ್ಮ ಹಿಂದೂ ಪರ ಸಂಘಟನೆಗಳು ಬೀದಿಗಿಳಿದು ಹೋರಾಟ ಮಾಡುತ್ತಾ ಇರುತ್ತದೆ ನೇಹಾ ಕುಟುಂಭದ ದುಃಖದಲ್ಲಿ ಭಾಗಿಯಾಗುವದರೊಂದಿಗೆ ಹತ್ಯ ಮಾಡಿದ ಫಯಾಜ್ ಎಂಬ ಯುವಕನನ್ನು ಸಾರ್ವಜನಿಕವಾಗಿ ಗಲ್ಲು ಶಿಕ್ಷೆಗೆ ಗುರಿ ಪಡಿಸಬೇಕೆಂದು ಒತ್ತಾಯಿಸಿದರು.
ಇನ್ನೋರ್ವ ಕೆಸರಟ್ಟಿಯ ಶಂಕರಲಿಂಗ ಮಠದ ಶ್ರೀ ಸೋಮಲಿಂಗ ಮಹಾ ಸ್ವಾಮಿಗಳು ಮಾತನಾಡಿ ಹಿಂದೂ ಸಮಾಜದ ಯುವತಿ ನೇಹಾ ಹಿರೇಮಠ ಅವಳನ್ನು ಲವ್‍ಜೀಹಾದ್ ಹೆಸರಿನ ಮೇಲೆ ಬಳಕೆ ಮಾಡಿಕೊಳ್ಳಬೇಕೆಂದು ಬೆನ್ನಟ್ಟಿದ ಫಯಾಜ್ ಎಂಬ ಯುವಕ ಪ್ರೀತಿಗೆ ನಿರಾಕರಿಸಿದ ನೇಹಾಳನ್ನು ಕಾಲೇಜ್ ಕ್ಯಾಂಪಸ್ ಒಳಗೆ ಚಾಕುವಿನಿಂದ ಇರಿದು ಹತ್ಯ ಗೈದಿರುವದು ಇಡೀ ಮಾನವ ಸಮಾಜವೇ ತಲೆ ತಗ್ಗಿಸುವಂತಾಗಿದೆ ಇಂತಹ ಹೇಯ ಕೃತ್ಯ ನಡೆದರೂ ಕೂಡಾ ಜವಾಬ್ದಾರಿಯುತ ಸ್ಥಾನದಲ್ಲಿರುವ ಮುಖ್ಯಮಂತ್ರಿಗಳು ಮತ್ತು ಗೃಹ ಸಚಿವರು ಯುವಕ ಯುವತಿಯ ನಡುವೆ ವೈಯಕ್ತಿಕ ಕಾರಣದಿಂದ ಜಗಳ ನಡೆದು ಈ ಕೃತ್ಯ ನಡೆದಿದೆ ಎಂದು ಹೇಳಿರುವದು ಹತ್ಯ ಗೈದ ಯುವಕನ್ನು ರಕ್ಷೀಸುವಂತಹ ಹೇಳಿಕೆ ಇದಾಗಿದೆ ಕಾಂಗ್ರೇಸ್ ಸರ್ಕಾರ ರಾಜ್ಯದಲ್ಲಿ ಆಡಳಿತಕ್ಕೆ ಬಂದಾಗಲ್ಲೊಮ್ಮೆ ಹಿಂದೂಗಳ ಮೇಲೆ ದೌರ್ಜನ್ಯ ಪ್ರಕರ್ಣಗಳು ಮೇಲಿಂದ ಮೇಲೆ ನಡೆಯುತ್ತಾ ಸಾಗಿವೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಎಂಬುದು ಸಂಪೂರ್ಣ ಹದಗೆಟ್ಟು ಹೋಗಿದ್ದು ರಾಜ್ಯ ಸರ್ಕಾರದ ಅಧಿಕಾರದಲ್ಲಿರುವ ಮುಖ್ಯಮಂತ್ರಿಯಿಂದ ಹಿಡಿದ ಎಲ್ಲ ಸಚಿವರುಗಳು ನಾಮರ್ದರಾಗಿದ್ದಾರೆ ಲವ್ ಜಿಹಾದ್ ಹೆಸರಿನ ಮೇಲೆ ಯುವತಿಯನ್ನು ಬಳಕೆ ಮಾಡಲು ಬಂದು ಯುವತಿ ಒಪ್ಪದೇ ಇದ್ದಾಗ ಹಾಡು ಹಗಲೇ ಬರ್ಬರವಾಗಿ ಹತ್ಯ ಗೈದಿದ್ದರೂ ಕೂಡಾ ಯುವತಿಯ ಮನೆಯವರಿಗೆ ನ್ಯಾಯ ಕೊಡಿಸುವ ಬದಲು ಯುವಕನ ಮನೆಯನ್ನು ಪೊಲೀಸ್ ಸರ್ಪಗಾವಲಿನಲ್ಲಿ ಕಾಯುವದರೊಂದಿಗೆ ಹೇಯ ಕೃತ್ಯ ಚಟುವಟಿಕೆ ನಡೆಸುವವರಿಗೆ ಸರ್ಕಾರ ರಕ್ಷಣೆಗೆ ನಿಲ್ಲುತ್ತಿರುವದು ನಾಚಿಗೆ ಗೇಡಿನ ಸಂಗತಿಯಾಗಿದೆ ಇಂತ ಶಂಡ್ ಸರ್ಕಾರದಿಂದ ಯಾವ ಹಿಂದೂಗಳಿಗೂ ರಾಜ್ಯದಲ್ಲಿ ರಕ್ಷಣೆ ಇಲ್ಲದಂತಾಗಿದೆ ಕೂಡಲೇ ಮುಖ್ಯಮಂತ್ರಿಗಳು ಗೃಹ ಸಚಿವರು ಬಹಿರಂಗ ಕ್ಷಮೆಯಾಚನೆ ಕೇಳಬೇಕು ಯುವಕನಿಗೆ ಸಾರ್ವಜನಿಕವಾಗಿ ಗಲ್ಲು ಶಿಕ್ಷೆಗೆ ಗುರಿ ಪಡಿಸುವಂತಹ ಕೆಲಸ ಮಾಡುವದರೊಂದಿಗೆ ಇಂತಹ ಕೃತೆ ಮುಂದೆ ನಡೆಯದಂತೆ ಸರ್ಕಾರ ಏಚ್ಚರವಹಿಸಬೇಕೆಂದು ಆಗ್ರಹಿಸಿದರು.
ಬಸವೇಶ್ವರ ವೃತ್ತದಿಂದ ಪ್ರಾರಂಭಗೊಂಡ ಪ್ರತಿಭಟನಾ ಮೇರವಣಿಗೆಯು ಅಂಬೇಡ್ಕರ್ ವೃತ್ತ, ಕತ್ರಿ ಭಜಾರ, ವಿಠ್ಠಲ ಮಂದಿರ ರಸ್ತೆ, ಶಿವಾಜಿ ಮಹಾರಾಜರ ವೃತ್ತ,ದ ಮೂಲಕ ತಹಶಿಲ್ದಾರ ಕಚೇರಿಗೆ ಆಗಮಿಸಿ ಕೆಲವು ಹೊತ್ತು ಧರಣಿ ನಡೆಸಿ ರಾಜ್ಯ ಪಾಲರಿಗೆ ಬರೆದ ಮನವಿ ಪತ್ರವನ್ನು ತಹಶಿಲ್ದಾರರಿಗೆ ಪ್ರತಿಭಟನಾ ಕಾರರು ಸಲ್ಲಿಸಿದರು.
ಬೇಡ ಜಂಗಮ ಸಮಾಜದ ಜಿಲ್ಲಾ ಅಧ್ಯಕ್ಷ ಸದಾಶಿವಯ್ಯ ಅರಕೇರಿಮಠ, ಚಬನೂರಿನ ಶ್ರೀ ರಾಮಲಿಂಗಯ್ಯ ಶ್ರೀಗಳು, ನಾವದಗಿ ಶ್ರೀ ರಾಜೇಂದ್ರ ಒಡೆಯರ ಮಹಾಸ್ವಾಮಿಗಳು, ರಾಘವೇಂದ್ರ ಬಿಜಾಪೂರ, ಕಾಶಿನಾಥ ಅರಳಿಚಂಡಿ, ವಿಜಯಲಕ್ಷ್ಮೀ ಹಿರೇಮಠ, ಸುವರ್ಣಾ ಬಿರಾದಾರ ಮಾತನಾಡಿದರು.
ಈ ಪ್ರತಿಭಟನಾ ನೇತೃತ್ವವನ್ನು ಭಂಟನೂರ ಕಾಶಿಬಾಯಿ ಅಮ್ಮನವರು, ಇಂಗಳೇಶ್ವರ ಶರಣ್ಣಮ್ಮನವರು, ಒಳಗೊಂಡು ಹಿಂದೂ ಪರ ಸಂಘಟನೆಗಳ ಸಾವಿರಾರು ಕಾರ್ಯಕರ್ತರು ವಹಿಸಿದ್ದರು.