ಗುಡುಗು ಸಿಡಿಲು ಮಳೆ ಆವಾಂತರ : ಓರ್ವ ಸಾವು
ಔರಾದ :ಏ.20: ಶುಕ್ರವಾರ ಸಾಯಂಕಾಲ ನಾಲ್ಕು ಗಂಟೆಯ ಸುಮಾರಿಗೆ ತಾಲ್ಲೂಕಿನ ಚಿಂತಾಕಿ ಹೋಬಳಿಯ ಯನಗುಂದಾ, ಸುಂದಾಳ, ಗುಡಪಳ್ಳಿ, ಮೇಡಪಳ್ಳಿ, ಉಜನಿ, ಚಿಕಲಿ ಜೆ, ವಡಗಾಂವ್, ಸೇರಿದಂತೆ ಔಖಳಿ ಮಳೆಯಾಗಿದೆ. ಕೆಲವೊಂದು ಗ್ರಾಮಗಳಲ್ಲಿ ಭಾರಿ ಗಾಳಿಗೆ ಮನೆಯ ಮೇಲಿನ ಪತ್ರಾಸ್ ಗಳು ಹಾರಿಹೋಗಿವೆ. ಮೇಡಪಳ್ಳಿ ಯಲ್ಲಿ ಭಾರಿ ಗುಡುಗು ಮಿಂಚು ಸಹಿತ ಆಲಿಕಲ್ಲು ಮಳೆ ಬಿದ್ದಿರುವ ಬಗ್ಗೆ ವರದಿಯಾಗಿದೆ.
ಚಿಕಲಿ (ಜೆ ) ತಾಂಡದಲ್ಲಿ ಮಳೆ ಹಾಗೂ ಸಿಡಿಲಿಗೆ ಹೊಲದಲ್ಲಿ ಇದ್ದ ಭೀಮಲಾ ಹೆಮ್ಲು (60)ವ್ಯಕ್ತಿ ಮೃತ ಪಟ್ಟಿರುವ ವರದಿ ಆಗಿದೆ. ಕಂದಾಯ ಇಲ್ಲಾಖೆ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.