ಸೇಡಂನಲ್ಲಿ ಹನುಮಾನ್ ಚಾಲೀಸ್ ಪಠಣ
ಸೇಡಂ, ಎ, 20 : ಪಟ್ಟಣದ ರೈಲ್ವೆ ಸ್ಟೇಷನ್ ಎದುರುಗಡೆ ಇರುವ ಹನುಮಾನ್ ಮಂದಿರದಲ್ಲಿಂದು ಅಯೋಧ್ಯಪತಿ ಶ್ರೀ ರಾಮೋತ್ಸವ ಸಮಿತಿ ಅಧ್ಯಕ್ಷ ಅನೀಲಕುಮಾರ ಮಾಲಪಾಣಿ ನೇತೃತ್ವದಲ್ಲಿ ನೂರಾರು ಜನರು ಹನುಮಾನ್ ಚಾಲೀಸ್ ಪಠಣ ಮಾಡಿದರು. ಈ ವೇಳೆಯಲ್ಲಿ ಹಿಂದೂಪರ ಸಂಘ ಸಂಸ್ಥೆಯ ಪದಾಧಿಕಾರಿಗಳು ಮಹಿಳೆಯರು ಹಿರಿಯರು ಇದ್ದರು.