ಬಿರುಗಾಳಿಗೆ ಹಾರಿದ ಮನೆಗಳ ಮೇಲಿನ ತಗಡಿನ ಶೀಟ್
ಭಾಲ್ಕಿ:ಏ.20:ಇಲ್ಲಿಯ ಹಳೇ ಪಟ್ಟಣದಲ್ಲಿ ಬುಧವಾರ ರಾತ್ರಿ ಬಿರುಗಾಳಿ ಸಹಿತ ಅಕಾಲಿಕ ಮಳೆ ಸುರಿದಿದೆ.
ಬಿರುಗಾಳಿಯಲ್ಲಿ ಆನಂದವಾಡಿ ರಸ್ತೆಯ ಹುಲಸೂರ ಬೇಸ್ ನ ಹನುಮಾನ ನಗರದ ಸುಮಾರು 15 ಮನೆಗಳ ಮೇಲಿನ ತಗಡಿನ ಶೀಟ್ ಗಳು ಹಾರಿ ಹೋಗಿವೆ.
ಅನುಷಾ ಶಿವಪ್ಪ ಬೋಲ್ಗೆ ಅವರ ಮನೆಯಲ್ಲಿ ಮಲಗಿದ್ದ ಮೊಮ್ಮಗಳಾದ ಸಾರಿಕಾ ಕಾಲ ಮೇಲೆ ಕಲ್ಲು, ತಗಡಿನ ಶೀಟ್ ಬಿದ್ದು ಗಂಭೀರ ಗಾಯವಾಗಿದೆ.
ತಾಲ್ಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಸುಮಾರು 12 ಹೋಲಿಗೆ ಹಾಕಲಾಗಿದೆ.
ಜೊತೆಗೆ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಸ್ಥಳೀಯ ನಿವಾಸಿ ಗಣೇಶ ಜಾಧವ ತಿಳಿಸಿದರು.
ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಈ ಸಂಬಂಧ ಮಾಹಿತಿ ಕಲೆ ಹಾಕಿ ಕಷ್ಟದಲ್ಲಿರುವ ಕುಟುಂಬಗಳಿಗೆ ಸರ್ಕಾರದ ವತಿಯಿಂದ ಪರಿಹಾರ ದೊರಕಿಸಿ ಕೊಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.