ಸರ್ವ ಜನರಿಗೆ ನ್ಯಾಯ ಒದಗಿಸಿದ ಮಹಾನಾಯಕ ಅಂಬೇಡ್ಕರ್
ಜೇವರ್ಗಿ :ಏ.20:ಸರ್ವ ಜನರಿಗೆ ನ್ಯಾಯಾ ಒದಗಿಸಿದ ಮಹಾ ನಾಯಕ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಪ್ರತಿಯೊಬ್ಬ ಭಾರತೀಯರಿಗೆ ಸಮಾನವಾದ ಹಕ್ಕು ನೀಡಿದ ಪ್ರತಿಪಾದಕ ಅವರು ಹಾಕಿಕೊಟ್ಟ ಮಾರ್ಗ ಶಿಕ್ಷಣ ಸಂಘಟನೆ ಹೋರಾಟ ಮಾರ್ಗದಲ್ಲಿ ನಡೆಯಬೇಕೆಂದು ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಹಾಗೂ ಶಾಸಕರಾದ ಡಾ. ಅಜಯ್ ಸಿಂಗ ಹೇಳಿದರು ಪಟ್ಟಣದ ಹಳೆ ತಸಿಲ್ ಆವರಣದಲ್ಲಿ ಹಮ್ಮಿಕೊಂಡ ಭೀಮ್ ಆರ್ಮಿ ಏಕತ್ ಮಿಷನ್ ಸಂಘಟನೆ ವತಿಯಿಂದ ಹಮ್ಮಿಕೊಂಡ ಸಂವಿಧಾನ ತಿಂತಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ 133 ನೇ ಜಯಂತೋತ್ಸವ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದರು ಮುಂದಿನ ತಿಂಗಳ ಅಥವಾ ಜೂನ್ ತಿಂಗಳಲ್ಲಿ ಅಖಿಲ ಭಾರತ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕರೆಸಿ ಪ್ರತಿ ವರ್ಷದಂತೆ ಡಾ. ಬಿಆರ್ ಅಂಬೇಡ್ಕರ್ ಜಯಂತಿ ಆಚರಿಸೋಣ ಎಂದು ಹೇಳಿದರು ನಂತರ ಮಾತನಾಡಿದ ಉಪನ್ಯಾಸಕರರ ಕರಿ ಗೂಳೇಶ್ವರ ಮಾತನಾಡುತ್ತಾ ಭಾರತದಲ್ಲಿ ಪ್ರತಿಯೊಬ್ಬ ಪ್ರಜಾ ಸಮಾನತೆ ಸೋದರತ್ವ ಬ್ರಾಂದತ್ವ ಮೂಲ ಕಲ್ಪನೆಯನ್ನು ಸಂವಿಧಾನದಲ್ಲಿ ಅಳವಡಿಸಿ ಸರ್ವರಿಗೂ ಸಮಪಾಲು ಸರ್ವರಿಗೂ ಸಮ ಬಾಳುಎಂಬ ನ್ಯಾಯವನ್ನು ವಧಿಗಸಿದ ಮಹಾ ನಾಯಕ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಎಂದು ಹೇಳಿದರು ನಂತರ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯಚಂದ್ರಶೇಖರ್ ಹರನಾಳ. ಪಂಚಶೀಲ ತ್ರಿಸರಣ ಮಂತ್ರ ಬೋಧನೆ ಮಾಡಿದರು ಅಧ್ಯಕ್ಷತೆಯನ್ನು ಭೀಮ ಆರ್ಮಿ ಸಂಘಟನೆಯ ತಾಲೂಕು ಅಧ್ಯಕ್ಷ ಸುನೀಲ .ರಾಜಾಹುಲಿ ವಹಿಸಿದ್ದರು ಮುಖ್ಯ ಅತಿಥಿಗಳಾಗಿ ರಾಜಶೇಖರ ಸಾಹು ಸೀರಿ. ಬ್ಲಾಕ್ ಕಾಂಗ್ರೆಸ್ ಘಟಕದ ಅಧ್ಯಕ್ಷ ಮಲ್ಲಮ್ಮ ಕೋಬೀನ ಗ್ರಾಮ ಪಂಚಾಯತಿ ಅಧ್ಯಕ್ಷ ಪ್ರಕಾಶ್ ಕೂಡಲಗಿ ಶರಣು ಬಡಿಗೇರ್ ಮಿಲಿಂದ ಸಾಗರ್ .ದಾವುದು ಡಿಕೆ . ವಿಶ್ವರಾಧ್ಯ ಆಲೂರ ಪುರಸಭೆ ಮಾಜಿ ಸದಸ್ಯ ಮರಿಯಪ್ಪ ಸರಡಗಿ .ಸೇರಿದಂತೆ ಅನೇಕರುಇದ್ದರು