ಮೇ.7 ರಂದು ಕಡ್ಡಾಯವಾಗಿ ಮತದಾನ ಮಾಡಿ: ವಿಶ್ವನಾಥ ಗಡ್ಡಿಮನಿ
ಚಿಟಗುಪ್ಪ:ಏ.20: ಲೋಕಸಭಾ ಚುನಾವಣೆಯ ನಿಮಿತ್ಯ ಮೇ 7 ರಂದು ಜರುಗಲಿರುವ ಮತದಾನದ ದಿನದಂದು ಎಲ್ಲರು ತಪ್ಪದೆ ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ಮಾಹಿತಿ ಶಿಕ್ಷಣ ಸಂವಹನ ಸಂಯೋಜಕ ವಿಶ್ವನಾಥ ಗಡ್ಡಿಮನಿ ಹೇಳಿದರು. ತಾಲೂಕಿನ ತಾಳಮಡಗಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಬಸವಣ್ಣ ಧರಿ ಹತ್ತಿರ ಮನರೇಗಾ ಯೋಜನೆ ಅಡಿಯಲ್ಲಿ ಕೈಗೊಳ್ಳುತ್ತಿರುವ ಚೆಕ್ ಡ್ಯಾಂ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ಮತದಾನದ ಕುರಿತು ಜಾಗ್ರತಿ ಮೂಡಿಸಿ ತಿಳಿಸಲಾಯಿತು. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಪ್ರತಿ ದಿನಕ್ಕೆ 349 ರೂ. ಕೂಲಿ ಮೊತ್ತ ನೀಡಲಾಗುತ್ತಿದ್ದು ಕೂಲಿ ಕಾರ್ಮಿಕರು ಕೂಲಿ ಕೆಲಸಕ್ಕೆ ಗೂಳೆ ಹೋಗದೆ ತಮ್ಮ ಸ್ವಂತ ಗ್ರಾಮಗಳಲ್ಲಿ ಕೂಲಿ ಕೆಲಸ ಪಡೆದು ಬದುಕು ಸಾಗಿಸಬೇಕು. ಯಾವುದೆ ಸಮಸ್ಯೆಗಳಿದ್ದರೆ ಗ್ರಾಮ ಪಂಚಾಯತ ತಾಲೂಕು ಪಂಚಾಯತ ಅಥವಾ ಜಿಲ್ಲಾ ಪಂಚಾಯತನಲ್ಲಿ ಬಗೆಹರಿಸಿಕೊಳ್ಳಬೇಕು. ಒಂದು ವೇಳೆ ತಮ್ಮ ಸಮಸ್ಯೆಗಳಿಗೆ ಯಾರು ಸ್ಪಂದಿಸದಿದ್ದರೆ ಸಹಾಯವಾಣಿ 8277506000 ಸಂಖ್ಯೆಗೆ ಕರೆ ಮಾಡಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದು ಮಾತನಾಡಿದರು. ಈ ಸಂದರ್ಭದಲ್ಲಿ ತಾಂತ್ರಿಕ ಸಹಾಯಕ ಮೈಬೂಬಸಾಬ, ಜಗದೀಶ ಕೊಡ್ಲಿ, ನವೀನಕುಮಾರ, ಕಾಯಕ ಮಿತ್ರ ಬೀರಮ್ಮ ಸೇರಿದಂತೆ ಕೂಲಿ ಕಾರ್ಮಿಕರು ಉಪಸ್ಥಿತರಿದ್ದರು.