ರಾಮಲಿಂಗೇಶ್ವರ ಮಹಿಮೆ ಅಪಾರ
ಚಿಟಗುಪ್ಪ:ಏ.20: ರಾಮಲಿಂಗೇಶ್ವರ ಮಹಿಮೆ ಅಪಾರವಾಗಿದೆ ಎಂದು ಟ್ರಸ್ಟ್ ಅಧ್ಯಕ್ಷ ಸುರೇಶ ಮಾಶೆಟ್ಟಿ ಹೇಳಿದರು. ತಾಲೂಕಿನ ರಾಂಪುರ ರಾಮಲಿಂಗೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಪಲ್ಲಕ್ಕಿ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ತಿಳಿಸಿದರು. ರಾಮಲಿಂಗೇಶ್ವರ ಮೇಲೆ ಭಕ್ತಿ ಶ್ರದ್ಧೆ ಇಟ್ಟರೆ ನಮ್ಮ ಇಷ್ಟಾರ್ಥಗಳು ಸಿದ್ಧವಾಗುತ್ತವೆ ಎಂದರು. ನಂತರ ಮಾಧ್ಯಮದವರೊಂದಿಗೆ ಮಾತನಾಡಿ ಶ್ರೀ ರಾಮಲಿಂಗೇಶ್ವರ ಪಲ್ಲಕ್ಕಿ ಉತ್ಸವವನ್ನು ಗುರುವಾರ ರಾತ್ರಿ 8 ಘಂಟೆಗೆ ದೇವಸ್ಥಾನದಿಂದ ಜರುಗಿ ಗ್ರಾಮದ ಪ್ರಮುಖ ರಸ್ತೆಗಳ ಮೂಲಕ ಮರು ದಿನ ಬೆಳಿಗ್ಗೆ ಪಲ್ಲಕ್ಕಿ ದೇವಸ್ಥಾನಕ್ಕೆ ತಲುಪುತ್ತದೆ ಎಂದು ಹೇಳಿದರು. ಟ್ರಸ್ಟ್ ಉಪಾಧ್ಯಕ್ಷ ಅಪ್ಪಣ್ಣ ಹಳಕೇರಿ ಮಾತನಾಡಿ ಶ್ರೀ ರಾಮಲಿಂಗೇಶ್ವರ ಭಕ್ತರ ಕಷ್ಟಗಳು ನಿವಾರಿಸಲು ಪವಾಡ ಪುರುಷರಾಗಿದ್ದಾರೆ ಇಲ್ಲಿ ಭಕ್ತಿಯಿಂದ ಬೇಡಿದವರಿಗೆ ಬೇಡಿದ ವರ ಸಿಗುತ್ತದೆ, ರಾಮಲಿಂಗೇಶ್ವರ ಆಶೀರ್ವಾದದಿಂದ ದೇವಸ್ಥಾನ ಅಭಿವೃದ್ಧಿ ಆಗುತ್ತಿದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಟ್ರಸ್ಟಿನ ಗೌರವಾಧ್ಯಕ್ಷರು ಹಾಗೂ ಮಹಾರಾಷ್ಟ್ರ ರಾಜ್ಯದ ಸೋಲಾಪುರನ ಮಾಜಿ ಶಾಸಕ ವಿಶ್ವನಾಥ ಚಕೋಟೆ, ಕಾರ್ಯದರ್ಶಿ ಶಾಮರಾವ್ ಜೋಳದಪಗೆ, ಜಂಟಿ ಕಾರ್ಯದರ್ಶಿ ರಾಮಲಿಂಗಪ್ಪ ಮಾಲಿಪಾಟೀಲ, ಮಾಡೇಪ್ಪ ಪಾಟೀಲ್, ಮಚಂದ್ರ ಪಾಟೀಲ, ಜಗದೀಶ್ ಮೂಲಗೆ, ಬಾಬುರಾವ್ ಗಣಜಲಖೇಡ ಸೇರಿದಂತೆ ಜಾತ್ರಾ ಮಹೋತ್ಸವಕ್ಕೆ ನೆರೆ ರಾಜ್ಯದ ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ ಕರ್ನಾಟಕ ಸೇರಿದಂತೆ ಸಾವಿರಾರು ಭಕ್ತಾದಿಗಳು ಭಾಗವಹಿಸಿ ದೇವರ ದರ್ಶನ ಪಡೆದರು. ಬಂದ ಭಕ್ತಾದಿಗಳಿಗೆ ಅನ್ನ ದಾಸೋಹ ವ್ಯವಸ್ಥೆ ಮಾಡಲಾಗಿತ್ತು.