ಕಳಪೆ ಮಟ್ಟದ ಆಹಾರ ಧಾನ್ಯ ಸರಬರಾಜು ಖಂಡಿಸಿ ಕರವೇ ಸ್ವಾಭಿಮಾನಿ ಬಣ ಮನವಿ
ಬೀದರ:ಏ.20: ಸಂಜೀವಿನಿ ಮಹಿಳಾ ಮಂಡಳಿಯು ಇಡೀ ಬೀದರ ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ ಆಹಾರ ಸರಬರಾಜು ಮಾಡುತ್ತಿದೆ. ಸದರಿ ಮಂಡಳಿಯು ಗುಣಮಟ್ಟದ ಆಹಾರವನ್ನು ಸರಬರಾಜು ಮಾಡದೇ, ಕಳಪೆ ಮಟ್ಟದಿಂದ ಕೂಡಿರುವ ಆಹಾರ ಧಾನ್ಯಗಳು ಸರಬರಾಜು ಮಾಡುತ್ತಿದ್ದಾರೆ ಎಂದು ಕರವೇ ಸ್ವಾಭಿಮಾನಿ ಬಣ ಇಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಅಲ್ಲದೇ ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳ ಮಕ್ಕಳು ಸದರಿ ಆಹಾರ ಧಾನ್ಯ ಸೇವಿಸಲು ನಿರಾಕರಿಸುತ್ತಿದ್ದಾರೆ. ಈ ಹಿಂದೆ ಅಂದರೆ ಕಳೆದ ವರ್ಷ 2023 ರ ವರೆಗೆ ಶೇಂಗಾ ಚಕ್ಕಿ, ಬೆಲ್ಲಾ, ಮೊಳಕೆ ಕಾಳುಗಳು, ಅವಲಕ್ಕಿ, ಉಪ್ಪಿಟ್ ರವಾ, ಮೊಟ್ಟೆ, ಹಾಲಿನ ಪೌಡರ್, ಗಾಣದ ಎಣ್ಣೆ, ಖಾರದ ಪುಡಿ ಇವೆಲ್ಲವೂ ಸರಬರಾಜು ಮಾಡುತ್ತಿದ್ದರು. ಆದರೆ 2024ನೇ ಸಾಲಿನಿಂದ ಈ ಮೇಲೆ ನಮೂದಿಸಿದ ಆಹಾರ ಧಾನ್ಯಗಳು ಸರಬರಾಜು ಮಾಡುತ್ತಿಲ್ಲ. ಅಲ್ಲದೇ ಸದರಿ ಮಂಡಳಿಯು ಬಿ.ಐ.ಎಸ್.ನಿಂದ (ಃeಚಿuಡಿo oಜಿ Iಟಿಜiಚಿಟಿ Sಣಚಿಟಿಜಚಿಡಿಜs) ಅನುಮತಿ ಪಡೆದಿರುತ್ತೇವೆ ಹಾಗೂ ನಾವು ಬಿ.ಐ.ಎಸ್.ನವರು ಇರುತ್ತೇವೆ ಎಂದು ನೇರವಾಗಿ ಹೇಳುತ್ತಿದ್ದಾರೆ ಹಾಗೂ ಸಾರ್ವಜನಿಕರಿಗೆ ಸರಿಯಾಗಿ ಸ್ಪಂದನೆ ಮಾಡುವುದಿಲ್ಲ, ಕೇಳಲು ಹೋದಾಗ ಇದೇ ರೀತಿ ಕಳಪೆ ಆಹಾರವನ್ನು ಕಳುಹಿಸುತ್ತೇವೆ, ನೀವು ಏನು ಬೇಕಾದರೂ ಮಾಡಿಕೊಳ್ಳಿ, ಯಾರ ಹತ್ತಿರ ಹೋಗುತ್ತಿರೋ ಹೋಗಿ ಎಂದು ಹೇಳುತ್ತಿದ್ದಾರೆ. ಇದರಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳೇ ನೇರ ಜವಾಬ್ದಾರರಾಗಿರುತ್ತಾರೆ. ಅಲ್ಲದೇ ಧರಮರಾಜ ಹಣಬಿ ಜಿಲ್ಲಾ ಆಹಾರ ಸರಬರಾಜುದಾರರು ಹಾಗೂ ಅಶ್ವಿನ್ ಬೀದರ ತಾಲೂಕಾ ಸರಬರಾಜುದಾರರು ಇವರನ್ನು ದೂರವಾಣಿ ಮೂಲಕ ವಿಚಾರಿಸಿದಾಗ ನೀವು ಯಾರ ಹತ್ತಿರ ಹೋಗುತ್ತಿರೋ ಹೋಗಿ ಎಂದು ಹಾರಿಕೆ ಉತ್ತರ ನೀಡುತ್ತಿದ್ದಾರೆ.
ಇಡೀ ಬೀದರ ಜಿಲ್ಲೆಯ ಅಂಗನವಾಡಿ ಕೇಂದ್ರಗಳಿಗೆ ಸರಬರಾಜು ಮಾಡುತ್ತಿರುವ ಸಂಜೀವಿನಿ ಮಹಿಳಾ ಮಂಡಳಿಯ ಹೆಸರು ಕಪ್ಪು ಪಟ್ಟಿಗೆ ಸೇರಿಸಿ, ಬೇರೆ ಸಂಸ್ಥೆಗೆ ವಹಿಸಿ, ಉತ್ತಮ ಗುಣಮಟ್ಟದ ಆಹಾರ ಸರಬರಾಜು ಮಾಡುವಂತೆ ಕ್ರಮ ಕೈಗೊಳ್ಳಬೇಕೆಂದು ಎಂದು ಮನವಿ ಪತ್ರದಲ್ಲಿ ಉಲ್ಲೆಖಿಸಿದ್ದಾರೆ.
ಈ ಸಂದರ್ಭದಲ್ಲಿ ಉತ್ತರ ಕರ್ನಾಟಕ ಕರವೇ ಸ್ವಾಭಾಮಾನಿ ಬಣದ ಅಧ್ಯಕ್ಷರಾದ ಲಕ್ಷ??ಣ ಕಂಬಾಗಿ, ಜಿಲ್ಲಾಧ್ಯಕ್ಷರಾದ ಚರಣಜೀತ ಆಣದೂರೆ, ಕಲಬುರಗಿ ವಿಭಾಗೀಯ ಉಸ್ತುವಾರಿ ಸಂಗಮೇಶ ಗುಮ್ಮೆ, ಪ್ರಧಾನ ಕಾರ್ಯದರ್ಶಿ ಕೇತನ ಪಾಟೀಲ್, ಶಾಶ್ವತ ಶೇರಿಕಾರ, ಪ್ರವೀಣ ಮೋಳಕೆರೆ, ಪೌಲ್ ಸಾಲೋಮಿನ್, ಧನರಾಜ ಸಾಂಗವಿಕರ್, ದಿನೇಶ ಡೊಂಗರಗಿಕರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.