ರಾಮ ನವಮಿ ಉತ್ಸವ ಹಿಂದೂ ಉತ್ಸವವಾಗಬೇಕು:ಶಿವು ಲೋಖಂಡೆ
ಭಾಲ್ಕಿ: ಏ.20:ಪಟ್ಟಣದಲ್ಲಿ ಆಚರಿಸುವ ರಾಮ ಮಂದಿರ ಉತ್ಸವವು ಹಿಂದೂ ಉತ್ಸವವಾಗಿ ಪರಿವರ್ತನೆ ಯಾಗಬೇಕು ಎಂದು ವಿಶ್ವಹಿಂದೂ ಪರಿಷತ್ ಪ್ರಮುಖ ಹಾಗು ಉತ್ಸವ ಸಮಿತಿಯ ಅಧ್ಯಕ್ಷ ಶಿವು ಲೋಖಂಡೆ ಅಭಿಪ್ರಾಯಪಟ್ಟರು.
ಪಟ್ಟಣದ ರಾಮಮಂದಿರ ಕಲ್ಯಾಣ ಮಂಟಪದಲ್ಲಿ ವಿಶ್ವಹಿಂದೂ ಪರಿಷತ್ ವತಿಯಿಂದ ಆಯೋಜಿಸಿದ್ದ ರಾಮ ನವಮಿ ಉತ್ಸವದ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. ಜಾತಿ, ಮತ ಭೇದ ಬಿಟ್ಟು, ಎಲ್ಲಾ ಹಿಂದೂಗಳು ಒಂದಾದರೆ ದೇಶದ ಪ್ರಗತಿ ಸಾಧ್ಯ. ಈ ವರ್ಷದ ರಾಮ ನವಮಿಯನ್ನು ಎಲ್ಲರೂ ಒಗ್ಗಟ್ಟಾಗಿ ವಿಜ್ರಂಭಣೆಯಿಂದ ಆಚರಿಸಬೇಕು ಎಂದು ಹೇಳಿದರು.
ಎ. 30 ರಂದು ಮಹಿಳೆಯಿಂದ ಬೈಕ್ ರ್ಯಾಲಿ ಹಾಗು 6 ರಿಂದ 16 ವರ್ಷದ ಒಳಗಿನ ಮಕ್ಕಳಿಂದ ಬೈಸಿಕಲ್ ರ್ಯಾಲಿ ನಡೆಸಬೇಕು. ಮೇ. 1 ರಂದು ರಾಮನವಮಿ ಉತ್ಸವ ವನ್ನು ಪಟ್ಟಣದ ಗಂಜ್ ಏರಿಯಾದ ರಾಮ ಮಂದಿರದಲ್ಲಿಯೇ ನಡೆಸಲು ನಿರ್ಧರಿಸಲಾಯಿತು. ಮೇ. 1 ರಂದು ರಾಮನಮಿ ಉತ್ಸವದ ನಿಮಿತ್ಯ ಹಳೆ ಪಟ್ಟಣದ ಚಾವಡಿಯಿಂದ ಪ್ರಾರಂಭಿಸಿ, ತೀನದುಕಾನಗಲ್ಲಿ ಗಡಿಏರಿಯಾ, ಪುರಸಭೆ ಮೂಲಕ ಹಾದು ಗಂಜ್ ಏರಿಯಾದ ಬಸ್ ನಿಲ್ದಾಣ, ಮಹಾತ್ಮಾಗಾಂಧಿ ವೃತ್ತ, ಅಂಬೇಡ್ಕರ್ ವೃತ್ತ, ಬಸವೇಶ್ವರ ವೃತ್ತದ ಮೂಲಕ ಹಾದು ರಾಮ ಮಂದಿರದಲ್ಲಿ ರಾಮನವಮಿಯ ವೇದಿಕೆ ಕಾರ್ಯಕ್ರಮದಲ್ಲಿ ಭಾಗಿಯಾಗೋಣ ಎಂದು ಚರ್ಚಿಸಲಾಯಿತು.
ಉತ್ಸವದ ನಿಮಿತ್ಯ ವಿವಿಧ ಸಮಿತಿಗಳನ್ನು ಆಯೋಜಿಸಲಾಯಿತು. ಸುರಕ್ಷಾ ಸಮಿತಿಗೆ, ಪ್ರತಾಪ ಪಾಟೀಲ, ಗಿರೀಷ ಕುಡತೆ, ಮಲ್ಲು ಶೀಲವಂತ, ಮನೋಜ ಜಾಧವರು ತಮ್ಮ ತಂಡದವರೊಂದಿಗೆ ಸೇವೆ ಸಲ್ಲಿಸುವರು. ಅಲಂಕಾರ ಸಮಿತಿಯಲ್ಲಿ ಆಕಾಶ ಮೈಲಾರೆ, ಪ್ರಜ್ವಲ್ ಕನಸೆ, ಸಂಜು ಅಡರಂಗೆ ಮತ್ತು ತಂಡದವರು ಕಾರ್ಯನಿರ್ವಹಿಸುವರು. ಪ್ರಚಾರ ಪ್ರಮುಖರಾಗಿ ರಾಹುಲ ಸಿಂಧೆ, ಜೈರಾಜ ಕೊಳ್ಳಾ, ಕೇಶವ ಸೂರ್ಯವಂಶಿ ಮತ್ತು ತಂಡದವರು ಕಾರ್ಯ ನಿರ್ವಹಿಸುವರು. ಉಳಿದಂತೆ ಎಲ್ಲಾ ಸಮಿತಿಗಳಿಗು ಪದಾಧಿಕಾರಿಗಳನ್ನು ನೇಮಿಸಿ ಕಾರ್ಯನಿರ್ವಹಿಸಲು ಸೂಚಿಸಲಾಯಿತು. ಸಮಿತಿಯ ಮಹಿಳಾ ಪ್ರತಿನಿಧಿಯಾಗಿ ಶುಭಾಂಗಿ ಚನ್ನಬಸವ ಬಳತೆ ಮಾತನಾಡಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಸೋಮನಾಥಪ್ಪ ಅಸ್ಟೂರೆ, ಸಾಗರ ಮಲಾನಿ, ವಿಲಾಸ ಬಕ್ಕಾ, ಜೈಕಿಶನ ಬಿಯಾನಿ, ಆಕಾಶ ರಿಕ್ಕೆ, ರಾಜಕುಮಾರ ಭೋಸಲೆ, ಪ್ರಕಾಶ ಮಾಶೆಟ್ಟೆ, ಚನ್ನಬಸವಣ್ಣ ಬಳತೆ, ಡಾ| ವಸಂತ ಪವಾರ, ನಿರ್ಮಲಾ ತಿವಾರಿ, ಶ್ರೀನಾಥ ಹೆಡಾ, ಚಂದ್ರಕಾಂತ ತಳವಾಡೆ, ಗಾಯತ್ರಿ ವಾರದ, ವಾಸು ಮಹಾರಾಜ, ಡಾ| ಅಮಿತ ಅಸ್ಟೂರೆ ಸೇರಿದಂತೆ ಹಲವರು ಇದ್ದರು.