ಏ. 23 ರಂದು ಗೋಲಗೇರಿಯ ಶ್ರೀ ಗೊಲ್ಲಾಳೇಶ್ವರ ಮಹಾರಥೋತ್ಸವ
ಕಲಬುರಗಿ:ಏ.20:ಪ್ರತಿ ವರ್ಷದಂತೆ ಈ ವರ್ಷವೂ ವಿಜಾಪೂರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಗೋಲಗೇರಿ ಲಿಂಗಯ್ಯನ ಊರೆಂದೇ ಪರಿಚೀತ, ಕುರಿ ಕಾಯುವುದರ ಜೊತೆಗೆ ಶಿವನ ಮೇಲಿನ ನಿಷ್ಠೆಯಿಂದ ಆತ ಸಾಕ್ಷಾತ್ಕಾರ ಪಡೆದವ ಗೋಲಗೇರಿ ಬಳಿಯ ಡವಳರಾದ ಬಿಲ್ಲುಗಳ ಮತ್ತು ದುಗ್ಗಳದೇವಿ ದಂಪತಿಯ ಪುತ್ರ ಗೊಲ್ಲಾಳ, ಶ್ರೀಶೈಲಕ್ಕೆ ತೆರಳುತಿದ್ದ ಭಕ್ತರಿಗೆ ತನಗೊಂದು ಲಿಂಗ ತರಲು ನಂದಯ್ಯ ಎನ್ನುವವನಿಗೆ ಗೊಲ್ಲಾಳ ಹೇಳುತ್ತಾನೆ. ಇದನ್ನು ಮರೆತು ಬಂದ ನಂದಯ್ಯ ಗೋಲಗೇರಿ ಹತ್ತಿರಕ್ಕೆ ಬರುತ್ತಿದ್ದಂತೆಯೇ ಅಲ್ಲಿಯೆ ಇದ್ದ ಕುರಿ ಹಿಕಿಯೊಂದನ್ನು ತೆಗೆದುಕೊಂಡು ಗೊಲ್ಲಾಳನಿಗೆ ಅದನ್ನೆ ಲಿಂಗವೆಂದು ಕೊಡುತ್ತಾನೆ. ಇದನ್ನು ನಂಬಿದ ಗೊಲ್ಲಾಳ ಗೊಬ್ಬರದ ಗುಂಡಿಯಲ್ಲಿ ನಂದಯ್ಯ ನಿಡಿದ್ದ ಹಿಕ್ಕಿ ಇಟ್ಟು ಆತನ ಮಾತಿನಂತೆಯೆ ಪೂಜಿಸುತ್ತಾನೆ. ಶಿವ ಇತನ ಭಕ್ತಿಗೆ ಒಲಿದ ಕಾರಣಕ್ಕೆ ಶಿವಗೊಲ್ಲಾಲ ಎಂದು ಎನ್ನುವ ಭಾವ ಈ ದೇಗುಲಕ್ಕೆ ಬರುವ ಭಕ್ತರದ್ದು ಗೋಲಗೇರಿ ಗೊಲ್ಲಾಳೇಶ್ವರ ಜಾತ್ರೆಯು ಈಗಾಗಲೇ ಆರಂಭವಾಗಿದ್ದು, 09/04/2024 ಮಂಗಳವಾರ 27/04/2024 ಶನಿವಾರ ಉತ್ಸವಗಳು ನಡೆಯುವವು. ಶ್ರೀ ಗೊಲ್ಲಾಳೇಶ್ವರ ಮಹಾ ಪುರಾಣ ಪ್ರಾರಂಭವಾಗಿದ್ದು, ಮೇ|| ಶಂಕ್ರಯ್ಯ ಶಾಸ್ತ್ರಿಗಳು ವಿರಕ್ತಮಠ ಸಾ|| ಮಳ್ಳಿ ಮತ್ತು ತಬಲಾ ಪ್ರಭುಲಿಂಗಯ್ಯ ಮಠ ಅಮೃತವಾಣಿಯಿಂದ ಮತ್ತು ಸಂಗೀತ ಸೇವೆಯನ್ನು ಶ್ರೀ ಗೌಡಪ್ಪ ಗವಾಯಿಗಳು ಅವರುಗಳು ನಡೆಸಿ ಕೊಡುತ್ತಿದ್ದಾರೆ. ಶ್ರೀ ಗೊಲ್ಲಾಳೇಶ್ವರ ಮಹಾ ಪುರಾಣ ಮಂಗಲ ನಂತರ ಸಾಯಂಕಾಲ 07 ಗಂಟೆಗೆ ಬಿಂದಗಿ ಉತ್ಸವ ರಾತ್ರಿ 10 ಗಂಟೆಗೆ ಕಡೆಯ ಉಚ್ಛಾಯಿ ಕಾರ್ಯಕ್ರಮ ನಡೆಯುತ್ತದೆ.
23/04/2024 ಮಂಗಳವಾರದಂದು ಸಾಯಂಕಾಲ 05:30 ರ ವೇಳೆಗೆ ವಂಶಪಾರಂರ್ಯ ಧರ್ಮದರ್ಶಿಗಳಾದ ಪೂಜ್ಯ ಶ್ರೀ ಸಿದ್ರಾಮಪ್ಪ ದೇವರಮನಿ ಪೂಜ್ಯ ಶ್ರೀ ವರಪುತ್ರ ಹೋಳಪ್ಪಾ ದೇವರಮನಿಗಳವರ ನೇತೃತ್ವದಲ್ಲಿ ಸಕಲ ಗೌರವಗಳೊಂದಿಗೆ ಪಂಚಲೋಹದ ಕಳಸಾರೋಹಣ, ಭೂಚಕ ಕೊಡೆ ಏರಿಸಿದ ನಂತರ ವಿಜೃಂಭಣೆಯಿಂದ ರೋಮಾಂಚಕ ಭವ್ಯ ರಥೋತ್ಸವ ಜರುಗುವುದು ದಿ:25/04/2024 ಗುರುವಾರ ಶನಿವಾರ ಕಡುಬಿನ ಕಾಳಗ, 27/04/2024 ಶನಿವಾರ ರಂದು ಕಳಸ ಇಳಿಸುವ ಕಾರ್ಯಕ್ರಮಗಳು ನಡೆಯುವವು ಆದ ಕಾರಣ ಸದ್ಭಕ್ತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಭಗವಂತನ ಕೃಪೆಗೆ ಪಾತ್ರರಾಗಬೇಕೆಂದು ಈ ಮೂಲಕ ವಿನಂತಿಸಿಕೊಳ್ಳಲಾಗಿದೆ.
ಅಲ್ಲದೆ ಪ್ರತಿವರ್ಷದಂತೆ ಈ ವರ್ಷವೂ ಶ್ರೀ ಗೊಲ್ಲಾಳೇಶ್ವರ ಟ್ರಸ್ಟ ಕಮಿಟಿ ಹಾಗೂ ಎ.ಪಿ.ಎಂ.ಸಿ ಸಿಂದಗಿ ಮತ್ತು ಗೋಲಗೇರಿ ಗ್ರಾಮಸ್ಥರಿಂದ ದನಗಳ ಜಾತ್ರೆ ದಿ:24/04/2024 ರಂದು ಬುಧವಾರ ದಿಂದ ಪ್ರಾರಂಭವಾಗುತ್ತದೆ. ಸಕಲ ವ್ಯವಸ್ಥೆ ಕೈಗೊಳ್ಳಲಾಗಿದ್ದು ರೈತರು ಭಾಗವಹಿಸಬೇಕೆಂದು ಸಕಲ ಸದ್ಭಕ್ತರ ಪರವಾಗಿ ಉದಯಕುಮಾರ.ಎಲ್.ಜೇವರ್ಗಿ, ಮರತೂರ ಕೋರಿದ್ದಾರೆ.