ಡಾ. ಅಂಬೇಡ್ಕರ್ ರವರ ತತ್ವಸಿದ್ಧಾಂತಗಳು ಯುವಕರಿಗೆ ಆದರ್ಶ
ಆಳಂದ:ಏ.20: ತಾಲೂಕಿನ ಮಂಟಗಿ ಗ್ರಾಮದಲ್ಲಿ ಡಾ. ಬಿ.ಆರ್. ಅಂಬೇಡ್ಕರ ರವರ 133 ನೇ ಜಯಂತ್ಯೋತ್ಸವ ಆಚರಿಸಲಾಯಿತು .ಪೂಜ್ಯ ಅಮರಜ್ಯೋತಿ ಭಂತೇಜಿ ದಿವ್ಯಸಾನಿಧ್ಯ ವಹಿಸಿದರು. ಗೌತಮ ಬುದ್ದರ ಭಾವಚಿತ್ರಕ್ಕೆ ದಶರತ ಕಸಬೆ (ಆಏ) ಪೂಜೆ ಸಲ್ಲಿಸಿದರು ಡಾ. ಕಿರಣ ಗಾಜನೂರ ಮಾತನಾಡಿ ಅಂಬೇಡ್ಕರರವರ ತತ್ವಸಿದ್ಧಾಂತಗಳು ಪ್ರತಿಯೊಬ್ಬ ಪ್ರಜೆ ಅನುಸರಿಸಬೇಕು ಕೇವಲ ಜಯಂತಿಗೆ ಸಿಮೀತಗೊಳಿಸದೆ ಅವರು ನಡೆದು ಬಂದ ದಾರಿಯಲ್ಲಿ ಇಂದಿನ ಯುವ ಸಮಾಜ ಸಾಗಬೇಕು ಮತ್ತು ಡಾ. ಬಾಬಾಸಾಹೇಬ ಅಂಬೇಡ್ಕರ್ ರವರು ಸರ್ವಜನಾಂಗಕ್ಕೆ ಆದರ್ಶರಾದವರು ಎಂದು ಆಶಿಸಿದರು ಇದೇ ಸಂದರ್ಭದಲ್ಲಿ ಪ್ರಕಾಶ ಮೂಲಭಾರತಿ, ರಾಜಕುಮಾರ ಭದ್ರೆ ಮಲ್ಲಿಕಾರ್ಜುನ ಬೋಳಣಿ ಬಾಬುರಾವ ಅರುಣೋದಯ. ಮಂಜು ಸಿಂಗೆ, ಧರ್ಮಾ ಬಂಗರಗಾ, ಮಹೇಶ ಕೋಚಿ ಇತರರು ಉಪಸ್ಥಿತರಿದ್ದರು. ಹಣಮಂತ ಪಾತ್ರೆ ಸ್ವಾಗತಿಸಿದರು. ಧರ್ಮಾ ಬಂಗರಗಿ ನಿರೂಪಿಸಿದರು. ನಾಗೇಂದ್ರ ಮೊರೆ ವಂದಿಸಿದರು.