ಶ್ರೀರಾಮಲಿಂಗೇಶ್ವರ ಜಾತ್ರಾ ಮಹೋತ್ಸವ
ಆಳಂದ:ಏ.20: ತಾಲ್ಲೂಕಿನ ಖಂಡಾಳ ಗ್ರಾಮದಲ್ಲಿ ಶ್ರೀರಾಮಲಿಂಗೇಶ್ವರ ಜಾತ್ರಾ ಮಹೋತ್ಸವ ನಡೆಯಿತು ದಿವ್ಯಸಾನಿಧ್ಯ ಪೂಜ್ಯಶ್ರೀ ಬಸವರಾಜೇಂದ್ರ ಮಹಾಸ್ವಾಮಿಗಳು ವಹಿಸಿದರು.ಪಲ್ಲಕ್ಕಿ ಉತ್ಸವ, ಅಗ್ನಿಪ್ರವೇಶ, ಪುರವಂತಿಗೆ ಕುಣಿತ, ಡೊಳ್ಳು ಕುಣಿತ ಸಕಲ ವಾದ್ಯ ವೈಭವಗಳೊಂದಿಗೆ ರಥೋತ್ಸವ ಜರುಗಿತು. ಶ್ರೀ ಸಿದ್ದರಾಮೇಶ್ವರ ನಾಟ್ಯ ಸಂಘ ಮೈದರ್ಗಿ ಇವರಿಂದ ಸಂಜೆ ನಾ ಸಾಕಿದ ಗಿಳಿ ನಾಟಕ ಪ್ರದರ್ಶಿಸಲಾಯಿತು.