ಮುಂಗಾರು ಮುಂಚೆ ಮಾಗಿ ಉಳುಮೆಯ ಮಹತ್ವ
ಕಲಬುರಗಿ:ಏ.20:ಕೃಷಿಯಲ್ಲಿ ಮಣ್ಣಿನ ಉತ್ಪಾದಕತೆಯು ಪ್ರಮುಖ ಪಾತ್ರವಹಿಸುತ್ತದೆ. ಮಣ್ಣಿನ ಉತ್ಪಾದಕತೆಯು ಮಣ್ಣಿನ ಗುಣಲಕ್ಷಣಗಳು, ಆರೋಗ್ಯ ಮತ್ತು ಪ್ರಮುಖವಾಗಿ ಮಣ್ಣಿನ ಫಲವತ್ತತೆಯನ್ನು ಅವಲಂಬಿಸಿದೆ. ಸಸ್ಯಗಳ ಬೆಳವಣಿಗೆಗೆ ಅತ್ಯವಶ್ಯವಿರುವ ನೀರು ಮತ್ತು ಗಾಳಿಯನ್ನು ಹಿಡಿದಿಟ್ಟುಕೊಳ್ಳುವುದು ಮತ್ತು ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುª ಮಣ್ಣು ಪೋಷಕಾಂಶಗಳ ಆಗರವಾಗಿದೆ. ಮಣ್ಣು ಸವೆತದೊಂದಿಗೆ ಮಣ್ಣಲ್ಲಿನ ಉಪಯುಕ್ತವಾದ ಪೋಷಕಾಂಶಗಳು ನಾಶವಾಗುತ್ತವೆ. ಈಗಾಗಲೇ ಶೇ.33% ಮಣ್ಣು ತನ್ನ ಫಲವತ್ತತೆ ಕಳೆದುಕೊಂಡಿದೆ. ಈ ಸಜೀವಿ ಮಣ್ಣು ಒಮ್ಮೆ ನಾಶವಾದರೆ ಪುನರ್ ಪಡಿಯಲಾಗದು. ಯುರೋಪಿಯನ್ ಕಮಿಶನ್‍ನ ಸಮೀಕ್ಷೆಯ ಪ್ರಕಾರ ಆರೋಗ್ಯಕರ ಆಹಾರ, ಜನಸಂಖ್ಯೆ, ಪ್ರಕೃತಿ ಮತ್ತು ವಾತಾವರಣವು 2030ರ ಒಳಗಾಗಿ ಶೇ.75 ರಷ್ಟು ಮಣ್ಣು ಆರೋಗ್ಯವಾಗಿದೆ ಎಂದು ಖಚಿತಪಡಿಸಿಕೊಳ್ಳುವ ಅವಶ್ಯಕತೆಯಿದೆ.
ಹೀಗಾಗಿ ಮಣ್ಣಿನ ಆರೋಗ್ಯ ರಕ್ಷಣೆ ಅತ್ಯಂತ ಪ್ರಮುಖವಾದ ಸಂಗತಿ. ಮುಂಗಾರಿನ ಬೇಸಾಯಕ್ಕೆ ಭೂಮಿ ಸಿದ್ದಗೊಳಿಸುವ ಮಾಗಿ ಉಳುಮೆ ಹಳೆಯ ಕೃಷಿ ವಿಧಾನ. ಆದರೆ ವೈಜ್ಞಾನಿಕವಾಗಿಯೂ ಸಾಬೀತಾದ ಕೃಷಿ ವಿಧಾನ. ಈ ಮಾಗಿ ಉಳುಮೆಯನ್ನು ನೇಗಿಲಿನಿಂದ ಭೂಮಿ ಹಸನಾಗಿಸಲು ರೈತರು ಬೇಸಿಗೆಯಲ್ಲಿ ಮಾಡಬಹುದಾದ ಪ್ರಕ್ರಿಯೆಯಾಗಿದೆ. ಆದರೆ ಇಂದಿನ ಆಧುನಿಕ ಕೃಷಿ ಪದ್ದತಿಯಲ್ಲಿ ಕಾರ್ಮಿಕ ಸಮಸ್ಯ ಮತ್ತು ಅತ್ಯಾಧುನಿಕ ಕೃಷಿ ಯಂತ್ರೋಪಕರಣಗಳ ವಿಪರೀತ ಬಳಕೆಯಿಂದ ರೈತದ ಆದಾಯ ಕಡಿಮೆಯಾಗಿ ಬೇಸಾಯ ಖರ್ಚು ಹೆಚ್ಚಾಗುತ್ತಿದ್ದು. ಮಣ್ಣಿನ ಆರೋಗ್ಯ ಮತ್ತು ಫಲವತ್ತೆಯನ್ನು ರಕ್ಷಿಸುವುದರ ಜೊತೆಗೆ ಖರ್ಚಿನ ಬೇಸಾಯವನ್ನು ಕೈಗೊಂಡು ಆದಾಯವನ್ನು ಹೆಚ್ಚಿಸಿಕೊಳ್ಳಬಹುದು. ಹೀಗಾಗಿ ರೈತರು ಮಣ್ಣಿನ ಆರೋಗ್ಯದ ಕಾಳಜಿ ವಹಿಸಲು ಮಾಗಿ ಉಳುಮೆಯಂತಹ ಕಡಿಮೆ ಖರ್ಚಿನ ಬೇಸಾಯ ಕ್ರಮಕ್ಕೆ ಮಹತ್ವ ನೀಡಬೇಕಾಗುತ್ತದೆ.
ಮಾಗಿ ಉಳುಮೆ ಎಂದರೇನು: ಮಾಗಿ ಉಳುಮೆ (Summeಡಿ Pಟoughiಟಿg) ಎಂಬುವುದು ಮುಂಗಾರಿಗಿಂತ ಮುಂಚೆ ಹಾಗೂ ಹಿಂಗಾರು ಬೆಳೆಗಳ ಕಟಾವಿನ ನಂತರ ಅಂದರೆ ಬೇಸಿಗೆಯಲ್ಲಿ ಕೈಗೊಳ್ಳಬಹುದಾದ ಕಡಿಮೆ ಖರ್ಚಿನ ಆದರೆ ಬಹುಪಯೋಗಿ ಕೃಷಿ ಚಟುವಟಿಕೆಯಾಗಿದೆ.
ಮಾಗಿ ಉಳುಮೆಯಿಂದಾಗುವ ಪ್ರಯೋಜನಗಳು: