ರೈತರ ಜೋಳ ಖರೀದಿಗೆ  ಮನವಿ
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಏ.20:  ಎ ಐ ಕೆ ಕೆ ಎಂ ಎಸ್ ರೈತ ಸಂಘಟನೆಯಿಂದ ಇಂದು ಕುರುಗೋಡಿನಲ್ಲಿ ಜೋಳ ಖರೀದಿ ಮಾಡದಿರುವುದನ್ನು ಖಂಡಿಸಿ, ಹಾಗು  ಕೂಡಲೇ ಖರೀದಿಯನ್ನು  ಆರಂಭಿಸಬೇಕೆಂದು ತಹಶೀಲ್ದಾರ್ ಗೆ  ಮನವಿ ಸಲ್ಲಿಸಲಾಯಿತು.
ರಾಜ್ಯದಲ್ಲಿ ಕನಿಷ್ಠ ಬೆಂಬಲ ಬೆಲೆ  ಯೋಜನೆಯಡಿ ರೈತರಿಂದ  ಜೋಳ ಖರೀದಿಸುವ ಪ್ರಕ್ರಿಯೆ ನಿಧಾನವಾಗಿರುವುದರಿಂದ    ರೈತರು ಕಂಗಾಲಾಗಿದ್ದಾರೆ.
ಜನವರಿ ಒಂದರಿಂದಲೇ ರೈತರು ಬೆಳೆದ ಜೋಳವನ್ನು ಖರೀದಿಸಲು ಪ್ರಾರಂಭ ಮಾಡಿ, ಇಷ್ಟೋತ್ತಿಗಾಗಲೇ ಎಲ್ಲಾ ರೈತರ ಬೆಳೆಯನ್ನು ಸಂಪೂರ್ಣವಾಗಿ ಖರೀದಿಸಬೇಕಾಗಿತ್ತು, ಆದರೆ ಹಲವಾರು ಕಾರಣಗಳನ್ನು ನೀಡಿ ರೈತರ ಜೋಳವನ್ನು ಇದುವರೆಗೂ ಸರಿಯಾಗಿ ಖರೀದಿಸದಿರುವುದು ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದಂತಾಗಿದೆ.
ಅಧಿಕಾರಿಗಳು ಕೂಡಲೇ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ಕಾಲಿ ಚೀಲ ಇಲ್ಲವೆಂಬ ಕಾರಣ ಸೇರಿದಂತೆ ಇತರೆ ಯಾವುದೇ ಸಬೂಬುಗಳನ್ನು ನೀಡದೆ,  ಇಂದಿನಿಂದಲೇ ಖರೀದಿ ಪ್ರಕ್ರಿಯೆಯನ್ನು ಪ್ರಾರಂಭ ಮಾಡಬೇಕೆಂದದರು.
ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾ ಅಧ್ಯಕ್ಷ ಗೋವಿಂದ್,   ಕಾರ್ಯದರ್ಶಿ ಗುರಳ್ಳಿ ರಾಜ,  ಉಪಾಧ್ಯಕ್ಷ ಬಸಣ್ಣ, ಮುಖಂಡರಾದ ಕೋಳೂರು ಪಂಪಾಪತಿ, ಲಿಂಗಪ್ಪ, ಮಣಿಕಂಠ ಸೇರಿದಂತೆ ಇತರರಿದ್ದರು