ರಾಣಿತೋಟದಲ್ಲಿ ಸೋಮಶೇಖರ ರೆಡ್ಡಿ ಪ್ರಚಾರ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಏ.20: ನಗರದ ಮಾಜಿ  ಶಾಸಕ ಜಿ. ಸೋಮಶೇಖರ ರೆಡ್ಡಿ  ಅವರು  ನಗರದ 10ನೇ ವಾರ್ಡಿನ ಮರಿಸ್ವಾಮಿಮಠ. ರಾಣಿತೋಟದಲ್ಲಿ. ಮನೆ ಮನೆಗೆ ತೆರಳಿ.  ಲೋಕಸಭಾ ಚುನಾವಣೆಯ ಬಿಜೆಪಿ ಅಭ್ಯರ್ಥಿ  ಬಿ. ಶ್ರೀರಾಮುಲು ಅವರ ಪರವಾಗಿ ಇಂದು  ಪ್ರಚಾರ ಮಾಡಿದರು.
ಗ್ಯಾರೆಂಟಿಗಳನ್ನು ನಂಬಿ  ಕಾಂಗ್ರೆಸ್ ಗೆ ಮತ ನೀಡಿ ಮೋಸ ಹೋಗಬೇಡಿ, ಈ ಗ್ಯಾರೆಂಟಿಗಳು ಈ ಚುನಾವಣೆ ನಂತರ ನಿಲ್ಲುವುದು ಗ್ಯಾರೆಂಟಿ,ಪ್ರೀ ಕರೆಂಟ್ ಬಸ್ ಸೌಲಭ್ಯ ನೀಡಲು ಸರ್ಕಾರದ ಬಳಿ ಹಣ ಇಲ್ಲ. ಲೋಕಸಭಾ ಚುನಸವಣೆ ಅಂತ ಸಾಲ ಮಾಡಿ ನೀಡಿದೆ. ಚುನಾವಣೆ ನಂತರನಿಲ್ಲೋದು ಗ್ಯಾರೆಂಟಿ. ಅದಕ್ಕಾಗಿ ದೇಶದ ಭದ್ರತೆ, ಆರ್ಥಿಕ ಅಭಿವೃದ್ದಿ, ಉತ್ತಮ ರೈಲ್ವೇ ಸೌಲಭ್ಯಕ್ಕಾಗಿ ಬಿಜೆಪಿಗೆ ಮತ ನೀಡಿ, ಶ್ರೀರಾಮುಲು ಗೆದ್ದರೆ ಕೇಂದ್ರದಲ್ಲಿ ಮಂತ್ರಿ ಆಗ್ತಾರೆ ಬಳ್ಳಾರಿ ನಗರ ಮತ್ತಷ್ಟು ಅಭಿವೃದ್ಧಿ ಆಗಲಿದೆಂದು ಬಿಜೆಪಿಗೆ ಮತ ನೀಡಲು ಮನವಿ ಮಾಡಿದರು.
ಪಾಲಿಕೆ ಮಾಜಿ ಸದಸ್ಯ  ವಿ. ಎಸ್. ಮರೀದೇವಯ್ಯ. ಶ್ರೀನಿವಾಸ್. ಮಹಾನಗರ ಪಾಲಿಕೆಯ ಸದಸ್ಯರಾದ. ಶ್ರೀನಿವಾಸ್ ಮೋತ್ಕಕರ್. ಉಮೇಶ್.ನಾಗೇಶ್. ಮುಂತಾದ   ಭಾಗವಹಿಸಿದ್ದರು.