ಬರಗಾಲಕ್ಕೆ ಬಿಡಿಗಾಸು ನೀಡದಬಿಜೆಪಿಯನ್ನು ತಿರಸ್ಕರಿಸಿ: ತುಕರಾಂ
(ಸಂಜೆವಾಣಿ ವಾರ್ತೆ)
ಹೊಸಪೇಟೆ, ಏ.20:  ತಾಲೂಕಿನ ಕಮಲಾಪುರ ಪಟ್ಟಣದ  ಉರಮ್ಮ ಬಯಲಿನಲ್ಲಿ ಸ್ಥಳೀಯ ಶಾಸಕರ ನೇತೃತ್ವದಲ್ಲಿ ಕಾಂಗ್ರೆಸ್  ಅಭ್ಯರ್ಥಿ  ಈ. ತುಕಾರಾಂ ಅವರು ನಿನ್ನೆ  ಮತಯಾಚನೆ ಮಾಡಿದರು.
ಮತದಾರರನ್ನು ಉದ್ದೇಶಿಸಿ  ಮಾತನಾಡಿದ  ತುಕರಾಂ ಅವರು ಬಿಜರಪಿಯಿಂದ ಜನಾಭಿವೃದ್ದಿ ಇಲ್ಲ ಕೇವಲ ಬಂಡವಾಳಗಾರರ ಪರ ಆ ಪಕ್ಷ ಕೆಲಸ ಮಾಡುತ್ತಿದೆ. ಕಳೆದ ಹತ್ತು ವರ್ಷಗಳಿಂದ ಬಳ್ಳಾರಿ ಹೊಸಪೇಟರ ಮಧ್ಯದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಮುಗಿಸಿಲ್ಲ. ಒಂದು ಹೊಸ ರೈಲು ಈ ಭಾಗಕ್ಕಿಲ್ಲ. ಬರಗಾಲಬಂದರೂ ರೈತರಿಗೆ ಬಿಸಿಕಾದು ನೀಡಿಲ್ಲ. ಇಂತಹ ಪಕ್ಷಕ್ಕೆ ಮತ ನೀಡದೆ. ಕಾಂಗ್ರೆಸ್ ಗೆ ಮತ ನೀಡಿ ಮಹಿಳೆಯರಿಗೆ  ನಮ್ಮ ಪಕ್ಷ ಅಧಿಕಾರ ಕ್ಕೆ ಬಂದರೆ ವಾರ್ಷಿಕ ಒಂದು ಲಕ್ಷ ರೂ ನೀಡಲಿದೆಂದು ಹೇಳಿದರು.
ಈ ಸಂದರ್ಭದಲ್ಲಿ   ಶಾಸಕ ಗವಿಯಪ್ಪ.  ಕಮಲಾಪುರ ಪಟ್ಟಣ ಪಂಚಾಯಿತಿ ಮಾಜಿ  ಅಧ್ಯಕ್ಷ ವಿ.ಎಸ್. ಮುಕ್ತಿಯಾರ್ ಪಾಷ, ಮಾಜಿ ವಿಧಾನ ಪರಿಷತ್ ಸದಸ್ಯ ಕೆ.ಎಸ್.ಎಲ್. ಸ್ವಾಮಿ, ವಿಜಯನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ನಿಂಬಗಲ್ ರಾಮಕೃಷ್ಣ, ಕಾಂಗ್ರೆಸ್ ಪಕ್ಷದ ಮುಖಂಡ ಗುಜ್ಜಲ ನಾಗರಾಜ್, ಕಮಲಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಖಾಜಾ ಹುಸೇನ್ ,ಹೊಸಪೇಟೆ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ವಿನಾಯಕ ಶೆಟ್ಟರ್, ಕೆಪಿಸಿಸಿ ಹಿಂದುಳಿದ ವರ್ಗಗಳ ರಾಜ್ಯ ಕಾರ್ಯದರ್ಶಿ ಕಾರಪುಡಿ ಮಹೇಶ್, ಸೈಯ್ಯದ್ ಮೋಹಮ್ಮದ್, ತೊರಣಗಲ್ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಏಕಾಂಬರೇಶ,  ವಕೀಲರಾದ ಹೆಚ್.ಮಹೇಶ್ ಪಟ್ಟಣ ಪಂಚಾಯಿತಿ ನಾಮನಿರ್ದೇಶನ ಸಧಸ್ಯರಾದ ಕನ್ನೇಶ್ವರ , ಚಾಂದ್, ಮಹಿಳಾ ವಿಭಾಗದ ಅದ್ಯಕ್ಷೆ ಬಾನು ಬೀ, ವೀರಭದ್ರ ನಾಯಕ, ‌ಪ್ರಮೋದ್ ಪುಣ್ಯ ಮೂರ್ತಿ, ಸಿ.ಆರ್. ಭರತ್ ಕುಮಾರ್, ಕಮಲಾಪುರ ಪಟ್ಟಣ.ಪಂಚಾಯತ್ ಸಧಸ್ಯರು, ಮಾಜಿ ಸದಸ್ಯರು, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಅಭಿಮಾನಿಗಳು ಇದ್ದರು .